ಬಸವಕಲ್ಯಾಣದ ಬಿಕೆಡಿಪಿ ಕಚೇರಿ ಎದುರು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂ ಜಿಲ್ಲಾ ಹಾಗೂ ತಾಲೂಕು ಟಕದಿಂದ ಮಂಗಳವಾರ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಪ್ರಕಾಶ ಕುದರಿ, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
- ಬಿಕೆಡಿಬಿ ಕಚೇರಿ ಎದುರು ಪ್ರತಿಭಟನೆ
ಬಸವಕಲ್ಯಾಣ: ನಗರದ ಹಡಪದ ಅಪ್ಪಣ್ಣನವರ ಗವಿಯಲ್ಲಿ ಸ್ಥಾಪಿಸಲಾದ ಅನ್ಯ ಮೂರ್ತಿ ತೆರವುಗೊಳಿಸಬೇಕು. ಹಡಪದ ಅಪ್ಪಣ್ಣನವರ ಮೂರ್ತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂ ಜಿಲ್ಲಾ ಹಾಗೂ ತಾಲೂಕು ಟಕದಿಂದ ಬಿಕೆಡಿಬಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
ಬಿಕೆಡಿಬಿ ಆಯುಕ್ತರ ಕಚೇರಿ ಮುಂದೆ ಜಮಾಯಿಸಿದ್ದ ಸಮಾಜದ ಪದಾಧಿಕಾರಿಗಳು ಆಡಳಿತ ವಿರುದ್ಧ ೂಷಣೆ ಕೂಗಿದರು. ಅನ್ಯ ಮೂರ್ತಿ ಸ್ಥಾಪಿಸಿದ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ವಿರುದ್ಧ ದೂರು ದಾಖಲಿಸಬೇಕು. ನಿಸ್ಕಾಳಜಿ ತೋರಿದ ಬಿಕೆಡಿಬಿ ಆಯುಕ್ತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಸವಕಲ್ಯಾಣದ ಬಸವಣ್ಣನವರ ಅರಿವಿನ ಮನೆ ಎಡಪಕ್ಕದ ಅರವಿನ ಗವಿ ಹಡಪದ ಅಪ್ಪಣ್ಣನವರ ಗವಿಯಾಗಿದ್ದು, ಸದರಿ ಗವಿಯಲ್ಲಿ ಯಾವುದೇ ಪರವಾನಿಗಿ ಇಲ್ಲದೆ ರಾತೋರಾತ್ರಿ ಅನ್ಯ ಮೂರ್ತಿ ಸ್ಥಾಪನೆ ಮಾಡಿದ್ದು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಶಹಾಬಾದ್ನ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿ, ಕಲ್ಯಾಣ ಮಹಾಮನೆಯ ಶ್ರೀ ಬಸವಪ್ರಭು, ಸಮಾಜ ಸೇವಾ ಸಂದ ಕಲಬುರಗಿ ಜಿಲ್ಲಾಧ್ಯಕ್ಷ ಈರಣ್ಣ ಹಡಪದ ಸಣ್ಣೂರ, ಬೀದರ್ ಜಿಲ್ಲಾಧ್ಯಕ್ಷ ದತ್ತಾತ್ರಿ ಜಿ.ಬಾಂದೆಕರ್, ತಾಲೂಕು ಅಧ್ಯಕ್ಷ ರಾಚಪ್ಪ ಹಡಪದ, ದತ್ತಾತ್ರಿ ಸಿ.ಮೂಲಗೆ, ಶಿವಾನಂದ ಜಂಗೆ, ಜಗದೀಶ ಎಸ್. ನೆಲವಾಡಕರ್, ಪಾಂಡುರಂಗ ಗದಲೇಗಾಂವ, ಶರಣಪ್ಪ ಚಂದನಹಳ್ಳಿ, ನಂದುಕುಮಾರ ಹಡಪದ, ಹಣಮಂತ ಕಣಜಿ, ಸುಭಾಷ ಆಣದೂರ, ಸಂಗಮೇಶ ಏಣಕೂರ, ರಮೇಶ ನೀಲೂರೆ ಭಗವಂತ ಹಡಪದ, ತಿಪ್ಪಣ್ಣ ನರಿಬೊಲ, ಮಲ್ಲಿಕಾರ್ಜುನ ಸುಗೂರ ಇತರರು ಪಾಲ್ಗೊಂಡಿದ್ದರು.
ಬೇಡಿಕೆ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಪ್ರಕಾಶ ಕುದರಿ, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಲಾಯಿತು. ಮನವಿಪತ್ರ ಸ್ವೀಕರಿಸಿ ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಆಶ್ವಾಸನೆ ನೀಡಿದರು. ಬಿಕೆಡಿಬಿ ತಹಸೀಲ್ದಾರ್ ಶಾಂತಗೌಡ ಬಿರಾದಾರ, ಸಿಪಿಐ ಅಲಿಸಾಬ್ ಇದ್ದರು. ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದರು.
ಸಭೆ: ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಮೂರು ದಿನದೊಳಗೆ ಪ್ರಮುಖರು ಪ್ರಮುಖರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಬಿಕೆಡಿಬಿ ಆಯುಕ್ತರು ಭರವಸೆ ನೀಡಿದರು.