Demand for implementation of internal reservation
ಪಾವಗಡ: ಒಳ ಮೀಸಲಾತಿಯನ್ನು ಪೂರ್ಣ ಪ್ರವಾಣದಲ್ಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ವಾದಾರ ಮಹಾಸಭಾ ಹಾಗೂ ದಲಿತ ಸಂಟನೆಗಳ ನೇತೃತ್ವದಲ್ಲಿ ವಾದಿಗ ಸಮುದಾಯದಿಂದ ಶುಕ್ರವಾರ ರಸ್ತೆ ತಡೆದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಪಿಎಸ್‌ಆರ್. ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ವಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ವಾತನಾಡಿ, ಸುಪ್ರೀಂ ಆದೇಶದಂತೆ ಸಾವಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಯಾಗಬೇಕು. ಒಳ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳದೆ ಲೆಕ್ಕಕ್ಕೆ ವಾತ್ರ ಒಳ ಮೀಸಲಾತಿ ಜಾರಿ ನಮಗೆ ಅವಶ್ಯಕವಿಲ್ಲ. ಕಾನೂನು ಭದ್ದವಾಗಿ ಸಂವಿಧಾನದ ಅಡಿಯಲ್ಲಿ ಪೂರ್ಣ ಪ್ರವಾಣದ ಒಳ ಮೀಸಲಾತಿ ಜಾರಿ ಆಗಬೇಕೆಂದು ಒತ್ತಾಯಿಸಿದರು.
ವಾದಾರ ಮಹಾಸಭಾ ತಾಲ್ಲೂಕು ಅಧ್ಯಕ್ಷ ನರಸಿಂಹಪ್ಪ ವಾತನಾಡಿ, ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಒಳಮೀಸಲಾತಿ ಅನುಷ್ಠಾನಕ್ಕೆ ಬಂದರೆ 3,600ಕ್ಕೂ ಅಧಿಕ ಹುದ್ದೆಗಳು ವಾದಿಗ ಸಮುದಾಯಕ್ಕೆ ಸಿಗಲಿವೆ. ಹಳೆ ಮೀಸಲಾತಿಗೆ ಅನುಗುಣವಾಗಿ ನೇಮಕಾತಿ ನಡೆಸಿದರೆ ಸಮುದಾಯಕ್ಕೆ ಅನ್ಯಾಯ ಆಗಲಿದೆ ಎಂದರು.
ಮುಖಂಡರಾದ ಎಂ.ಕೆ ನಾರಾಯಣಪ್ಪ, ಸಾಕೇಲ್ ಶಿವಕುವಾರ್, ವಳ್ಳೂರು ನಾಗೇಶ್, ಪೆದ್ದನ್ನ, ಕೃಷ್ಣಮೂರ್ತಿ, ಮೀನಕುಂಟನಹಳ್ಳಿ ನರಸಿಂಹಪ್ಪ, ನಲಿಗಾನಹಳ್ಳಿ ಮಂಜುನಾಥ್, ವಕೀಲ ರಮೇಶ್, ಪಳವಳ್ಳಿ ಗೋವಿಂದಪ್ಪ, ಸುಬ್ಬರಾಯಪ್ಪ, ಹನುಮಂತರಾಯಪ್ಪ, ಶಿವಕುವಾರ್, ಓಬಳೇಶ್, ಮಲ್ಲಿಕಾರ್ಜುನ ಇದ್ದರು.