ನೆರೆ ಪರಿಹಾರ ನೀಡುವಂತೆ ಒತ್ತಾಯಿಸಿ ರೈತ ಮುಖಂಡರು ಗುರುವಾರ ಹುಲಸೂರಿನಲ್ಲಿ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿಪತ್ರ ಸಲ್ಲಿಸಿದರು. ರೈತ ಪ್ರಮುಖರಾದ ವೀರಪ್ಪ ಚೌರೆ, ಬಸಪ್ಪ ಚೌರೆ, ಸಂಜುಕುಮಾರ ಬಂಡೆಪ್ಪ, ಧನರಾಜ ಚೌರೆ, ಲಕ್ಷ್ಮೀ ಬಾಯಿ ಪ್ರಕಾಶ, ಆಕಾಶ ಚೌರೆ ಇದ್ದರು
- ಹುಲಸೂರು ತಹಸೀಲ್ದಾರ್ಗೆ ರೈತರ ಮನವಿಪತ್ರ ಸಲ್ಲಿಕೆ
ಹುಲಸೂರು: ಮಾಂಜ್ರಾ ನದಿ ದಡಲ್ಲಿರುವ ಗ್ರಾಮಗಳ ರೈತರಿಗೆ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಮುಖಂಡರು ಗುರುವಾರ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ 2025 ಅಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಸುರಿದ ಅತಿವೃಷ್ಟಿ ಮಳೆಯಿಂದ ಹಾಗೂ ಮಹಾರಾಷ್ಟ್ರದ ಧನೇಗಾವ ಜಲಾಶಯದಿಂದ ಮಾಂಜ್ರಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದರಿಂದ ದಡದಲ್ಲಿರುವ ಹುಲಸೂರು ಹಾಗೂ ಕೊಂಗಳಿ ಗ್ರಾಮಗಳ ರೈತರ ಕಟಾವಿಗೆ ಬಂದ ಬೆಳೆಗಳ ಜತೆ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಆದರೆ ಇನ್ನೂ ಪರಿಹಾರ ಧನ ಬಂದಿಲ್ಲ. ಆದಷ್ಟು ಬೇಗನೆ ಪರಿಹಾರ ಧನ ನೀಡಬೇಕು ಎಂದರು ಒತ್ತಾಯಿಸಿದರು.
ಜಮೀನುಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರ್ಷ ಕಳೆದರೂ ಸಹ ನಮ್ಮ ಖಾತೆಗೆ ಹಣ ಬಂದಿಲ್ಲ. ರ್ನಿಲಕ್ಷ ಮಾಡಿದರೆ ತಹಸಿಲ್ ಕಚೇರಿ ಮುಂದೆ ಧರಣಿ ಕೂಡುತ್ತೇವೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಮನವಿ ಪತ್ರ ಸ್ವೀಕರಿಸಿ ನಿಮ್ಮ ಸಮಸ್ಯೆ ಆದಷ್ಟು ಬೇಗನೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ರೈತ ಪ್ರಮುಖರಾದ ವೀರಪ್ಪ ಚೌರೆ, ಬಸಪ್ಪ ಚೌರೆ, ಅಶೋಕ ಚೌರೆ, ಸಂಜುಕುಮಾರ ಬಂಡೆಪ್ಪ, ಧನರಾಜ ಚೌರೆ, ಲಕ್ಷ್ಮೀಬಾಯಿ ಪ್ರಕಾಶ, ಆಕಾಶ ಚೌರೆ, ಶಿವಕುಮಾರ ಮೇತ್ರೆ, ಭೀಮಣ್ಣ ಚೌರೆ ಇತರರಿದ್ದರು.