Demand for continuous power supply to farmers
ಕುಣಿಗಲ್: ರೆತರಿಗೆ ನಿರಂತರ ವಿದ್ಯುತ್ ಪೂರೆಕೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ಬೆಸ್ಕಾಂ ಕಾರ್ಯಪಾಲಕ ಕಚೇರಿ ಮುಂದೆ ರಾಜ್ಯ ರೆತ ಸಂ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ರೆತ ಸಂ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡಿ, ಬೆಳೆಗಳಿಗೆ ವೆಜ್ಞಾನಿಕ ಬೆಲೆ ರೂಪಿಸಿ ದಿನದ 24 ಗಂಟೆ ಸಮರ್ಪಕವಾಗಿ ವಿದ್ಯುತ್ ಪೂರೆಸುವಂತೆ ಆಗ್ರಹಿಸಿದರು.
ರೆತರಿಗೆ ವಿದ್ಯುತ್ ನೀಡದೆ ಸರ್ಕಾರ ಹಾಗೂ ಬೆಸ್ಕಾಂ ಇಲಾಖೆಯು ಅನ್ಯಾಯ ಮಾಡುತ್ತಿದೆ. ಅನ್ನದಾತನಿಗೆ ಕೇವಲ ಏಳು ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಸುಳ್ಳು ಹೇಳುತ್ತಾ ಸರ್ಕಾರ ಮೋಸ ಮಾಡುತ್ತಿದೆ. ಅಡಿಕೆ, ತೆಂಗು ಬಾಳೆಗೆ ನೀರಿಲ್ಲದೆ ಬೆಳೆಗಳು ಹಾಳಾಗುತ್ತಿವೆ. ಸರ್ಕಾರ ರೆತರ ನೆರವಿಗೆ ಧಾವಿಸಬೇಕೆಂದರು.
ತಾಲೂಕು ಅಧ್ಯ ಅನಿಲ್ ಕುಮಾರ್ ಮಾತನಾಡಿ, ಬೇಸಿಗೆಯಲ್ಲಿ ಬೆಳೆಗಳು ಒಣಗಿ ನಷ್ಟವಾಗುತ್ತಿದೆ. ಸಾವಿರ ಅಡಿ ಬೋರ್ ಕೊರೆದರೂ ನೀರು ಬರುತ್ತಿಲ್ಲ. ಗೊಬ್ಬರ ಔಷಧ, ನೀರು ಸಕಾಲಕ್ಕೆ ದೊರೆಯದೆ ಸಮಸ್ಯೆಯಿಂದ ಅನ್ನದಾತ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಬೆಸ್ಕಾಂ ಕಾರ್ಯ ಪಾಲಕ ಅಭಿಯಂತರ ಪುರುಷೋತ್ತಮ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ರೆತರಿಗೆ ಏಳು ತಾಸು ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಕೇವಲ ಆರು ಗಂಟೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಹುಲಿಯೂರುದುರ್ಗ ಸೇರಿದಂತೆ ಐದು ಕಡೆ ವಿದ್ಯುತ್ ಸರ್ವಿಸ್ ಸ್ಟೇಷನ್ಗಳನ್ನು ನಿರ್ಮಿಸಲು ಈಗಾಗಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಬೇಸಿಗೆಯಲ್ಲಿ ಗಂಗಾ ಕಲ್ಯಾಣ, ಜೆಜೆಎಂ ಯೋಜನೆಯ ನೀರಾವರಿಗಳಿಗೆ ಮತ್ತು ಹೆಚ್ಚು ಬೋರ್ವೆಲ್ ಕೊರೆಸಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಕೂಡಲೇ ಕ್ರಮ ಕೆಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಟ್ಟರು. ಅಮತೂರು, ಹುಲಿಯೂರುದುರ್ಗ, ಪುತ್ರಿ ಕೊತ್ತಗೆರೆ ಸೇರಿದಂತೆ ತಾಲೂಕಿನ ವಿವಿಧ ಹೋಬಳಿಯಿಂದ ರೆತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.