ದೇವನಹಳ್ಳಿ ತಾಲೂಕಿನ ಕನ್ನಮಂಗಲದ ಗಾಂಧಿ ಶತಮಾನೋತ್ಸವ ತೋಟ ಉಳಿಸಿ ಎಂದು ಒತ್ತಾಯಿಸಿ ಪ್ರಗತಿ ಪರ ಸಂಘಟನೆಗಳ ಮುಖಂಡರು ಸಾಂಕೇತಿಕವಾಗಿ ತಮಟೆ ಭಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಎಸ್​.ಎಂ.ಮ್ಯಾಥ್ಯೂ ಮುನಿಯಪ್ಪ, ಕರ್ನಾಟಕ ರಿಪಬ್ಲಿಕನ್​ ಸಂಘಟನೆ ಅಧ್ಯಕ್ಷ ಬೆಳತೂರು ವೆಂಕಟೇಶ್​, ಬಾಲೇಪುರ ದೇವರಾಜ್​, ಎಸ್​.ಎಂ.ಮ್ಯಾಥ್ಯೂ, ಮಲ್ಲೇಪುರ ರಾಮಾಂಜಿನಪ್ಪ, ನರಸಿಂಹಮೂರ್ತಿ, ಮುನಿರಾಜು, ಡಿಎಸ್​.ಎಸ್​.ಮುನಿರಾಜು ಇದ್ದರು.  
ರಾಜ್ಯ

ಗಾಂಧಿ ಉದ್ಯಾನವನ ನಿರ್ಮಾಣಕ್ಕೆ ಪಟ್ಟು / DEVANAHALLI

ದೇವನಹಳ್ಳಿ : ತಾಲೂಕಿನ ಕನ್ನಮಂಗಲದ ಗಾಂಧಿ ಶತಮಾನೋತ್ಸವ ತೋಟ ಉಳಿಸಿ ಅಲ್ಲಿ ಮಹಾತ್ಮ ಗಾಂಧಿ ಉದ್ಯಾನವನ ನಿರ್ಮಿಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಶಿರಸ್ತೇದಾರ್​ ಸಂತೋಷ್​ ಮೂಲಕ ಜಿಲ್ಲಾಧಿಕಾರಿಗೆ ಮನವಿ ರವಾನಿಸಿದರು.
ಕನ್ನಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 44ರ ಪಕ್ಕದಲ್ಲಿಯೇ ಗಾಂಧಿ ಶತಮಾನದ ತೋಟವಿದ್ದು, ಗ್ರಾಮದ ಖಾಸಗಿ ವ್ಯಕ್ತಿಗಳು ಭೂಕಬಳಿಕೆ ಮತ್ತು ಅಕ್ರಮ ಪೋಡಿ ಮಾಡಿಸಿ ದಾಖಲೆಗಳನ್ನು ತಿದ್ದಿರುವುದು ಕಂಡುಬಂದಿದೆ. ಜಮೀನು ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿದೆ. ಆದರೆ, ಇತ್ತೀಚೆಗೆ ಹಣದಾಸೆಗೆ ಜಮೀನು ಮತ್ತು ರಾಜಕಾಲುವೆ ಅಕ್ರಮವಾಗಿ ಸ್ವಾಧಿನ ಮಾಡಿಕೊಂಡು ಖಾಸಗಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೆ ಕಾನೂನು ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಗಾಂಧೀ ಶತಮಾನೋತ್ಸವ ತೋಟ ಉಳಿಸಿ ಎಂದು ಪ್ರತಿಭಟನಾ ನೀರತರು ಆಗ್ರಹಿಸಿದರು.
ಪ್ರಗತಿಪರ ಸಂಘಟನೆಗಳು, ಒಕ್ಕೂಟ ಮತ್ತು ಕರ್ನಾಟಕ ರಿಪಬ್ಲಿಕನ್​ ಸಂಘಟನೆ, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳಿಂದ ಗಾಂಧಿ ಶತಮಾನದ ತೋಟದ ನಾಮಲಕದ ಹತ್ತಿರ ತಮಟೆ ಬಾರಿಸುವ ಮೂಲಕ ಸರ್ಕಾರವನ್ನು ಎಚ್ಚರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ರವಾನಿಸಿದರು.