Demand for action against the Tahsildar
ಮಧುಗಿರಿ: ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಬಾಬು ಜಗಜೀವನ ರಾಮ್ ಜಯಂತಿಯ ಪೂರ್ವಭಾವಿ ಸಭೆ ಮತ್ತು ಜಯಂತಿಗೆ ತಹಸೀಲ್ದಾರ್ ಗೈರಾಗುವುದನ್ನು ಖಂಡಿಸಿ, ಅವರನ್ನು ಅಮಾನತು ಮಾಡುವಂತೆ ದಲಿತಪರ ಸಂಘಟನೆಗಳ ಮುಖಂಡರು ಭಾನುವಾರ ಉಪವಿಭಾಗಾಧಿಕಾರಿ ಗುಟೂರು ಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಂತರ ದಲಿತಪರ ಸಂಘಟನೆಯಿಂದ ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಾಬು ಜಗಜೀವನ ರಾಮ್ ಜಯಂತಿ ಆಚರಿಸಿದರು. ಮುಖಂಡರಾದ ನರಸಿಂಹಮೂರ್ತಿ, ತೊಂಡೋಟಿ ರಾಮಾಂಜಿನಪ್ಪ, ಎಂ.ವೈ.ಶಿವಕುಮಾರ್, ಬಾಣದ ರಂಗಯ್ಯ, ನರಸಿಯಪ್ಪ, ಎಸ್.ಕೆ. ರಂಗನಾಥ್, ಹನುಮಂತರಾಯಪ್ಪ, ಮರಿಯಪ್ಪ, ದೊಡ್ಡೇರಿ ರಮೇಶ್, ದಾಸಪ್ಪ, ಚಿಕ್ಕಮ್ಮ, ರಾಜು, ಹರಿ ಗಣೇಶ್, ಗರಣಿ ರಂಗರಾಜು, ರಂಗನಾಥ್ ಇದ್ದರು.