ನಕಲಿ ಬಿತ್ತನೆ ಬೀಜ ವಿತರಿಸಿಸ ಕಂಪನಿ ವಿರುದ್ಧ ಕ್ರಮಕ್ಕೆ seeds 
ರಾಜ್ಯ

ನಕಲಿ ಬಿತ್ತನೆ ಬೀಜ ವಿತರಿಸಿಸ ಕಂಪನಿ ವಿರುದ್ಧ ಕ್ರಮಕ್ಕೆ seeds

ಕೆಜಿಎಫ್​: ನಕಲಿ ಟೊಮ್ಯಾಟೊ ಬಿತ್ತನೆ ಬೀಜವನ್ನು ವಿತರಿಸಿ ರೈತರಿಗೆ ನಷ್ಟ ಉಂಟು ಮಾಡಿರುವ ಖಾಸಗಿ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ನಂದಾಲ ಗಡ್ಡ ರೈತನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.seeds
ರೈತರನ್ನು ಶೋಷಣೆ ಮಾಡುವ ನಕಲಿ ಬಿತ್ತನೆ ಬೀಜ ಹಾಗೂ ಅನಧಿಕೃತ ನರ್ಸರಿಗಳಿಗೆ ಕಡಿವಾಣ ಹಾಕಲು ಸರ್ಕಾರ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದೆ.
ಮಾರುಕಟ್ಟೆಯಲ್ಲಿ ಟೊಮ್ಯಾಟೊ ಉತ್ತಮ ಬೆಲೆ ಇದ್ದು, ಬೆಳೆಯೂ ಉತ್ತಮವಾಗಿದೆ. ಆದರೆ ಖಾಸಗಿ ಕಂಪನಿಯ ತಳಿಯ ಟೊಮ್ಯಾಟೊ ಸಸಿಗಳು ಗಿಡತುಂಬ ಕಾಯಿ ಬಿಟ್ಟಿದ್ದು, ಶೇ. 75 ಕಪ್ಪು ರೋಗ ಬಂದಿದ್ದು, ಸಂಪೂರ್ಣವಾಗಿ ಕೈಗೆ ಬಂದ ಸಲು ಬಾಯಿಗೆ ಬಾರಸಂತಾಗಿದೆ.
ಯುವ ರೈತ ಭಾಸ್ಕರ್​ರೆಡ್ಡಿ ಮಾತನಾಡಿ, ಯಾವ ವರ್ಷಸಿಂದ ಕಳಪೆ ಟೊಮ್ಯಾಟೊ ಬೆಳೆದಿಲ್ಲ. ಉತ್ತಮ ಸಸಿಗಳನ್ನು ನೀಡುತ್ತಿದ್ದ ಕಂಪನಿಗಳು ಇಂದು ತೋಟಗಾರಿಕಾ ಅಧಿಕಾರಿಗಳ ಹಿಡತವಿಲ್ಲದೆ ತಮಗೆ ಇಷ್ಟ ಬಂದ ಹೊಸ ತಳಿಗಳನ್ನು ಕೆಲವು ನರ್ಸರಿಗಳ ಜತೆ ಶಾಮೀಲಾಗಿ ರೈತರನ್ನು ವಂಚನೆ ಮಾಡುತ್ತಿವೆ ಎಂದು ಆರೋಪಿಸಿದರು.
ಬೆಳೆ ನಷ್ಟವಾಗಿದೆ ಎಂದು ಕ್ಯಾಸಂಬಳ್ಳಿ ಹೋಬಳಿಯ ತೋಟಗಾರಿಕೆ ಅಧಿಕಾರಿಗಳಿಗೆ ಕರೆ ಮಾಡಿದರೆ ಮೊದಲು ಹಿರಿಯ ಅಧಿಕಾರಿಗಳಿಗೆ ದೂರು ಕೊಡಿ ನಂತರ ಬಂದು ಪರಿಶೀಲನೆ ಮಾಡಿ ವಿಜ್ಞಾನಿಗಳಿಗೆ ಪತ್ರ ಬರೆಯಲಾಗುವುದು. ನಂತರ ಮಣ್ಣು ಪರೀಕ್ಷೆ ಮಾಡಿ ವರದಿ ಬಂದ ನಂತರ ಮುಂದೆ ನೋಡೋಣವೆಂದು ಉತ್ತರ ನೀಡುತ್ತಾರೆಂದು ರೈತರು ಆರೋಪಿಸಿದರು.
ಕಂಪನಿ ಸಿಬ್ಬಂದಿಗೆ ಕರೆ ಮಾಡಿ ತೋಟ ಹಾಳಾಗಿದೆ ಎಂದು ಹೇಳಿದರೆ ಸರಿಯಾದ ಗೊಬ್ಬರ ನೀಡದೇ ರ್ನಿಲಕ್ಷ್ಯ ಮಾಡಿದ್ದೀರಾ ಎಂದು ಮಾತನಾಡುತ್ತಾರೆ.
ಕಂಪನಿಯಿಂದ 50 ಲಕ್ಷ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತೋಟ ವೀಕ್ಷಣಾ ಸಮಯದಲ್ಲಿ ಕಾರಿವಿಶ್ವನಾಥ, ಬೇತಮಂಗಲ ನಾರಾಯಣಸ್ವಾಮಿ, ಕ್ಯಾಸಂಬಳ್ಳಿ ಪ್ರತಾಪ್​, ಪುತ್ತೇರಿ ರಾಜು, ಗಿರೀಶ್​, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ನೊಂದ ರೈತರು ಹಾಜರಿದ್ದರು.