ಮಾಸಾಶನ ಪತ್ರಗಳನ್ನು ಫಲಾನುಭವಿಗಳ ಮನೆಗೆ ತಲುಪಿಸುವಂತೆ ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದಿಂದ ಚಿತ್ತಾಪುರದ ಪ್ರಜಾಸೌಧ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರಗೆ ಮನವಿಪತ್ರ ಸಲ್ಲಿಸಲಾಯಿತು. ಮಹ್ಮದ್ ಇಬ್ರಾಹಿಂ, ಶಿವಮ್ಮ ಸಾತನೂರು, ಲಕ್ಷ್ಮೀ ಸಿದ್ದಣ್ಣ, ಜಾಹೀದಾ ಬೇಗಂ, ಶರಣಪ್ಪ ಬಾಹರಪೇಟ್, ಜಗದೇವಪ್ಪ ಭಾಗೋಡಿ ಇತರರಿದ್ದರು.
- ಚಿತ್ತಾಪುರದಲ್ಲಿ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ
ಚಿತ್ತಾಪುರ: ಅಂಗವಿಕಲ, ಹಿರಿಯ ನಾಗರಿಕರ ಸಂದ್ಯಾ ಸುರಾ, ವಿಧವಾ ವೇತನ, ಮನಸ್ವಿನಿ ಹಾಗೂ ರಾಷ್ಟ್ರೀಯ ಭದ್ರತಾ ಯೋಜನೆಯ ಮಾಸಾಶನ ಮಂಜೂರಾತಿ ಪ್ರಮಾಣಪತ್ರಗಳನ್ನು ಫಲಾನುಭವಿಗಳ ಮನೆಗೆ ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಒತ್ತಾಯಿಸಿದರು.
ಈ ಕುರಿತು ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿ ಮಾತನಾಡಿ, ಸಾರ್ವಜನಿಕರಿಗೆ ಕಚೇರಿ ಅಲೆದಾಟ ತಪ್ಪಿಸುವುದು ಮತ್ತು ಸೇವೆಗಳನ್ನು ಸುಲಭವಾಗಿ ನೀಡುವ ಉದ್ದೇಶದಿಂದ ಮನೆ ಬಾಗಿಲಿಗೆ ಜಾತಿ ಹಾಗೂ ಆದಾಯ, ನಿವಾಸಿ ಪ್ರಮಾಣಪತ್ರ ತಲುಪಿಸುವ ಮಹಾತ್ವಾಕಾಂ ಅಭಿಯಾನ ಸರ್ಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ. ಅದರಂತೆ ಅಂಗವಿಕಲ, ಹಿರಿಯ ನಾಗರಿಕರು ಸೇರಿ ವಿವಿಧ ಪಿಂಚಣಿ ಪಡೆಯುವ ಫಲಾನುಭವಿಗಳ ಮನೆ ಬಾಗಿಲಿಗೆ ಮಾಸಾಶನ ಮಂಜೂರಾತಿ ಪ್ರಮಾಣಪತ್ರ ತಲುಪಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಆದಾಯದ ಮಿತಿಯಿಂದ ವಿನಾಯಿತಿ ನೀಡಬೇಕು. ಪ್ರತಿ ತಿಂಗಳು 1ನೇ ತಾರೀಖಿನಂದು ಫಲಾನುಭವಿಗಳ ಖಾತೆಗೆ ಪಿಂಚಣಿ ಜಮೆ ಮಾಡಬೇಕು. ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಕೌಂಟರ್ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಶಿವಮ್ಮ ಸಾತನೂರು, ಲಕ್ಷೀ ಸಿದ್ದಣ್ಣ, ಜಾಹೀದಾ ಬೇಗಂ, ಶರಣಪ್ಪ ಬಾಹರಪೇಟ, ಜಗದೇವಪ್ಪ ಬಾಗೋಡಿ, ಅಬ್ದುಲ್ ಖಾರ್ದ, ಸಿದ್ದಪ್ಪ ನೆಡಿಗೇರಿ, ಮಲ್ಲಪ್ಪ ಸಾತನೂರು, ಮಂಜೂರ್ ಸಾಬ್, ಭೀಮರಾಯ ಬಾಹರಪೇಟ, ಮಹಿಬೂಬ್ ಸಾಬ್, ಸಿದ್ದಣ್ಣ ಬಾಹರಪೇಟ, ಮೊಗಲಪ್ಪ ಕುಂಬಾರ, ಗಂಗಮ್ಮ ಜಡಿ, ಮಲ್ಲಿನಾಥ ಪಾಟೀಲ್, ಸಾಬಣ್ಣ ನಾಲವಾರ, ಕಲ್ಯಾಣಿ ಬಾಹರಪೇಟ, ಚಂದ್ರಕಾಂತ ಬೆಲ್ಲದ, ಮಹಾದೇವಿ ಸಾತನೂರು, ದೇವಿಂದ್ರಪ್ಪ ದಿಗ್ಗಾಂವ್, ವಿಜಯಮ್ಮ ಕಾಶಿ, ಹೊನ್ನಮ್ಮ ಬಾಹರಪೇಟ, ಲ್ಮಕಾಂತ ಚಿತ್ತಾಪುರ, ಮಹಾದೇವಮ್ಮ ದೊಡ್ಡಮನಿ ಇತರರಿದ್ದರು.