ಚಿಂಚೋಳಿ ತಾಲೂಕಿನ ಸುಲೇಪೇಟ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಡಿಸಿ ಇಕ್ರಮ್​ ಶರೀಫ್​ ಪಠ್ಯಪುಸ್ತಕ ವಿತರಿಸಿದರು. ಪ್ರಭುರೆಡ್ಡಿ, ಸಮದ್​ ಪಟೇಲ್​, ಸುಬ್ಬಣ್ಣ ಜಮಖಂಡಿ, ಸಂತೋಷಕುಮಾರ ಚವ್ಹಾಣ್​ ಇತರರಿದ್ದರು. 
ರಾಜ್ಯ

ಸರ್ಕಾರಿ ಯೋಜನೆ ಅರ್ಹರಿಗೆ ತಲುಪಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ
  • ಸುಲೇಪೇಟದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ
ಚಿಂಚೋಳಿ: ಪ್ರತಿ ವಿದ್ಯಾರ್ಥಿಯೂ ಸಮಯಪಾಲನೆ ಮಾಡಬೇಕು. ಮೊಬೈಲ್​ ಬಳಕೆ ಕಮ್ಮಿ ಮಾಡಿ, ಪಠ್ಯದತ್ತ ಗಮನಹರಿಸಬೇಕು. ಶಿಕ್ಷಕರು ಹೇಳುವ ಪಾಠವನ್ನು ಸರಿಯಾಗಿ ಆಲಿಸಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸಲಹೆ ನೀಡಿದರು.
ಸುಲೇಪೇಟದ ಸರ್ಕಾರಿ ಕನ್ಯಾಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದ ಅವರು, ಹೆತ್ತವರು ಹಾಗೂ ಗುರುಗಳಿಗೆ ಗೌರವ ನೀಡಿ. ಸರ್ಕಾರದ ಮಾರ್ಗಸೂಚಿಯನ್ನು ಪ್ರತಿ ಸರ್ಕಾರಿ ನೌಕರರು ಕಡ್ಡಾಯವಾಗಿ ಪಾಲಿಸಬೇಕು. ಜನ ಸಾಮಾನ್ಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸಬೇಕು ಎಂದು ಸೂಚನೆ ನೀಡಿದರು.
ಪೋಲಕಪಳ್ಳಿಯ ಕ್ರೀಡಾಂಗಣದಲ್ಲಿ ಭೂಸೇನೆಯಿಂದ ನಡೆಯುತ್ತಿರುವ 40 ಲ ರೂ. ವೆಚ್ಚದ ಚರಂಡಿ, ಶೆಡ್​ ನಿರ್ಮಾಣ ಕಾಮಗಾರಿ, ಸರ್ಕಾರಿ ಆಸ್ಪತ್ರೆ, ಕೃಷಿ ಇಲಾಖೆ, ಪುರಸಭೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ರೈತ ಸಂಪರ್ಕ, ಅಂಗನವಾಡಿ, ನಾಡ ತಹಸಿಲ್​ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಸೇಡಂ ಎಸಿ ಪ್ರಭುರೆಡ್ಡಿ, ಜಂಟಿ ಕೃಷಿ ನಿರ್ದೆಶಕ ಸಮದ್​ ಪಟೇಲ್​, ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ, ತಾಪಂ ಇಒ ಸಂತೋಷಕುಮಾರ ಚವ್ಹಾಣ್​, ಡಾ.ಮಹ್ಮದ್​ ಗಫಾರ್​, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಪ್ರಮುಖರಾದ ನಾಗನಾಥ,  ಗಂಗಮ್ಮ ಇತರರಿದ್ದರು.