ಅಫಜಲಪುರದಲ್ಲಿ ಬಿತ್ತನೆ ಬೀಜ ವಿತರಣೆ ಹಾಗೂ ಖೇತ್​ ಬಚಾವೋ ಅಭಿಯಾನಕ್ಕೆ ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​ ಚಾಲನೆ ನೀಡಿದರು. ಮಂಜುನಾಥ ಅಂಜುಟಗಿ, ಶಿವಾನಂದ ಗಾಡಿಸಾಹುಕಾರ, ಎಸ್​.ಎಚ್​.ಗಡಗಿಮನಿ ಇತರರಿದ್ದರು. 
ರಾಜ್ಯ

ಸರ್ಕಾರದ ಯೋಜನೆ ರೈತರಿಗೆ ತಲುಪಿಸಿ

ಪ್ರಮುಖ ಮುಖ್ಯಾಂಶಗಳು

  • ಅರುಣಕುಮಾರ ಪಾಟೀಲ್​ ತಾಕೀತು
  • > ಅಫಜಲಪುರದಲ್ಲಿ ಖೇತ್​ ಬಚಾವೋ ಅಭಿಯಾನ
ಅಫಜಲಪುರ: ಸರ್ಕಾರವೂ ಕೃಷಿ ವಿಾನಿಗಳಿಂದ ನಿರಂತರ ಸಂಶೋಧನೆ ನಡೆಸಿ ಗುಣಮಟ್ಟದ ಬೀಜ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಅಧಿಕಾರಿಗಳು ರೈತಾಪಿ ವರ್ಗಕ್ಕೆ ಸರ್ಕಾರದ ಯೋಜನೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯ ಅರುಣಕುಮಾರ ಪಾಟೀಲ್​ ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಹಾಗೂ ಖೇತ್​ ಬಚಾವೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಅಫಜಲಪುರದ ಕೃಷಿ ಇಲಾಖೆಯಿಂದ 13,500 ರೈತರಿಗೆ ತಲಾ 4 ಕೆಜಿಯಂತೆ ಬೀಜ ವಿತರಿಸಲಾಗುತ್ತಿದೆ. ರೈತರನ್ನು ಸ್ವಾವಲಂಬಿ ಮತ್ತು ಸದೃಢರನ್ನಾಗಿಸಲು ನೀರಾವರಿ ಅವಶ್ಯಕವಾಗಿದ್ದು, ಆದ್ದರಿಂದ ಇಲಾಖೆಯಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಡಿಮೆ ನೀರಿನಲ್ಲಿ ಹೆಚ್ಚಿನ ಆದಾಯ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯ ಮಂಜುನಾಥ ಅಂಜುಟಗಿ ಮಾತನಾಡಿ, ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದು ಆರ್ಥಿಕವಾಗಿ ಸದೃಢವಾಗಬೇಕು. ಅರುಣಕುಮಾರ ಪಾಟೀಲ್​ ಅವರು ಎಚ್​ಕೆಇ ನಿರ್ದೇಶಕರಾಗಿದ್ದು, ಮುಂಬರುವ ದಿನಗಳಲ್ಲಿ ಎಪಿಎಂಸಿಗೆ ಬರುವ ರೈತರ ಆರೋಗ್ಯ ತಪಾಸಣೆಗೆ ವಿಶೇಷ ಯೋಜನೆ ಜಾರಿಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್​.ಎಚ್​.ಗಡಗಿಮನಿ ಮಾತನಾಡಿದರು.
ಕೃಷಿಕ ಸಮಾಜದ ತಾಲುಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಳಗುಂಪಿ, ಪ್ರಮುಖರಾದ ಶಿವಾನಂದ ಗಾಡಿಸಾಹುಕಾರ, ರಮೇಶ ಪೂಜಾರಿ, ರಮೇಶಗೌಡ ಪಾಟೀಲ್​, ಶ್ರೀಶೈಲಗೌಡ ಪಾಟೀಲ್​, ಸೈಫನಸಾಬ್​ ಚಿಕ್ಕಳಗಿ, ವಿಶ್ವನಾಥ ಕರಜಗಿ, ಮಲ್ಲಿಕಾರ್ಜುನ ವಾಳಿ, ವಿಶ್ವನಾಥ ಮಲಘಾಣ, ಅಜರ ಮಣ್ಣೂರ, ಹಣಮಂತ ಪೂಜಾರಿ, ಮಹಾಂತಪ್ಪ ಶಿಂಧೆ ಇತರರಿದ್ದರು.
(ಕೋಟ್​)
ಮತೇತ್ರದಲ್ಲಿ ಸುಮಾರು 137 ಕಿಮೀ ಭೀಮಾ ನದಿ ಹರಿಯುತ್ತಿರುವುದರಿಂದ ರೈತರು ಕಬ್ಬು ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಕೃಷಿ ಇಲಾಖೆಯಿಂದ ರೈತರಿಗೆ ಕಬ್ಬಿನ ಸಸಿ ಅಥವಾ ಸಹಾಯಧನ ನೀಡುವ ಚಿಂತನೆ ನಡೆದಿದ್ದು, ಶ್ರೀದಲ್ಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
> ಅರುಣಕುಮಾರ ಪಾಟೀಲ್​, ಅಧ್ಯ, ಕೆಕೆಆರ್​ಟಿಸಿ