ಪ್ರಮುಖ ಮುಖ್ಯಾಂಶಗಳು
ಡೆಹ್ರಾಡೂನ್: ಭಾರತವನ್ನುಬೆಳವಣಿಗೆಯತ್ತ ಕೊಂಡೊಯ್ಯಲುಅಭಿವೃದ್ಧಿ,ಪ್ರಕೃತಿ ಮತ್ತುಸಂಸ್ಕೃತಿ ಎಂಬ ‘ತ್ರಿವೇಣಿ’ಅವಶ್ಯಕ ಎಂದು ಪ್ರಧಾನಿ ನರೇಂದ್ರಮೋದಿ ತಿಳಿಸಿದ್ದಾರೆ.
ಬುಧವಾರ 210ಕಿಮೀ ಉದ್ದದದೆಹಲಿ–ಡೆಹ್ರಾಡೂನ್ ಆರ್ಥಿಕಕಾರಿಡಾರ್‌ನ್ನು ಉದ್ಘಾಟಿಸಿಮಾತನಾಡಿದರು.ಈ ಮಹತ್ವದಮೂಲಸೌಕರ್ಯ ಯೋಜನೆ ಉತ್ತರ ಭಾರತದಸಂಪರ್ಕ ವ್ಯವಸ್ಥೆ ಮತ್ತು ಆರ್ಥಿಕಬೆಳವಣಿಗೆಗೆ ಹೊಸ ದಾರಿಯನ್ನುತೆರೆದಿಡಲಿದೆ.ಕಾರ್ಯಕ್ರಮಕ್ಕೂಮುನ್ನ 12 ಕಿಮೀಉದ್ದದ ರೋಡ್‌ಶೋನಲ್ಲಿ ಭಾಗವಹಿಸಿದ್ದರು.
ಉತ್ತರಖಂಡ ರಾಜ್ಯದಅಭಿವೃದ್ಧಿಯಲ್ಲಿ ಈ ಕಾರಿಡಾರ್ಮೈಲುಗಲ್ಲಾಗಲಿದೆ ಎಂದು ಹೇಳಿದಪ್ರಧಾನಿ,ಚಾರ್ಧಾಮ್ಯಾತ್ರಿಕರಿಗೆ ಪ್ರಯಾಣ ಸಮಯಕಡಿಮೆಯಾಗುವ ಮೂಲಕ ಹೆಚ್ಚಿನಅನುಕೂಲವಾಗಲಿದೆ.ಮೂಲಸೌಕರ್ಯಅಭಿವೃದ್ಧಿಯೇ ದೇಶದ ‘ಜೀವನಾಡಿ’.ಉತ್ತರಾಖಂಡದಲ್ಲೇ2.5 ಲಕ್ಷಕೋಟಿ ರೂ.ಗೂಹೆಚ್ಚು ಮೌಲ್ಯದ ಯೋಜನೆಗಳುಜಾರಿಯಲ್ಲಿವೆ.ಈ ಕಾರಿಡಾರ್ಮೂಲಕ ಪ್ರಯಾಣ ಸಮಯ,ಇಂಧನ ಬಳಕೆ ಮತ್ತುಸಾಗಾಟ ವೆಚ್ಚ ಕಡಿಮೆಯಾಗಲಿದೆ.ಇದರಿಂದ ರೈತರು,ವ್ಯಾಪಾರಿಗಳುಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆಲಾಭವಾಗಲಿದೆ.ಪರಿಸರ ಸಂರಕ್ಷಣೆಗೆಆದ್ಯತೆ ನೀಡಲಾಗಿದ್ದು,ಈ ಯೋಜನೆಯಲ್ಲಿ12 ಕಿಮೀಉದ್ದದ ಎಲಿವೇಟೆಡ್ ವನ್ಯಜೀವಿಮಾರ್ಗ ನಿರ್ಮಿಸಲಾಗಿದೆ.ಮುಂದಿನ ದಿನಗಳಲ್ಲಿನಡೆಯಲಿರುವ ಹರಿದ್ವಾರ ಕುಂಭಮತ್ತು ನಂದಾದೇವಿ ರಾಜ್ ಯಾತ್ರಾಹಿನ್ನಲೆಯಲ್ಲಿ ಸ್ವಚ್ಛತೆಕಾಪಾಡುವಂತೆ ಸಾರ್ವಜನಿಕರಿಗೆಮೋದಿ ಕರೆ ನೀಡಿದರು.
ಸಮಾರಂಭದಲ್ಲಿಕೇಂದ್ರ ಸಚಿವ ನಿತಿನ್ ಗಡ್ಕರಿ,ಉತ್ತರಾಖಂಡಸಿಎಂ ಪುಷ್ಕರ್ ಸಿಂಗ್ ಧಾಮಿಮತ್ತಿತರರಿದ್ದರು.
12 ಸಾವಿರ ಕೋಟಿ ರೂ.ವೆಚ್ಚದ ಈ ಯೋಜನೆ ರಾಜ್ಯದ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡಲಿದೆ.