ರಾಜ್ಯ

ಐನಾಪೂರ ಏತ ನೀರಾವರಿ ಕಾಮಗಾರಿ ಪ್ರಾರಂಭಕ್ಕೆ ವಿವಿಧ ಪೂಜ್ಯರಿಂದ ಜಿಲ್ಲಾಧಿಕಾರಿಗೆ ನಿಯೋಗ ಮನವಿ

ಕಲಬುರ್ಗಿ: ತಾಲೂಕಿನ ಐನಾಪೂರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ರೈತರಿಗೆ ಆರ್ಥಿಕವಾಗಿ ಸದೃಢಗೊಳ್ಳಲು ಸರಕಾರವು ಮುಂದಾಗಬೇಕು ಎಂದು ಭರತನೂರಿನ ಮ.ನಿ. ಪ್ರ ಶ್ರೀ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಮಂಗಳವಾರದಂದು ಶ್ರೀಗಳ ನೇತೃತ್ವದಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಮೊಹಮ್ಮದ್​ ಇಕ್ರಮುಲ್ಲಾ ಶರೀಫ್​ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರಕಾರವು ಮೊದಲನೇ ಹಂತದ 95 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್​ ಇಕ್ರಮುಲ್ಲಾ ಶರೀಫ್​ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಚಂದನಕೇರಾದ ಷ. ಬ್ರ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಐನಾಪೂರದ ಷ.ಬ್ರ ಶ್ರೀ ಉಪಮನ್ಯೂ ಶಿವಾಚಾರ್ಯ, ಹೋಸಳ್ಳಿಯ ಷ.ಬ್ರ ಶ್ರೀ ಸಿದ್ದಲಿಂಗ ಶಿವಾಚಾರ್ಯ, ಸುಲೇಪೇಟದ ಶ್ರೀ ಪ್ರಭುಲಿಂಗ ದೇವರು, ಶಿವಾನಂದ ಮಾಲಿಪಾಟೀಲ್, ಗೋಪಾಲ ಎಂ.ಪಿ, ಶರಣಬಸಪ್ಪ ಮಮ್ಮಶೇಟ್ಟಿ, ಧನರಾಜ ಸ್ವಾಮಿ ಇತರರು ಇದ್ದರು.