Ejipura Flyover 
ರಾಜ್ಯ

ನೆಟ್ಟಿಗರಿಂದ ಟ್ರೋಲ್ ಆಗ್ತಿದೆ ಈಜಿಪುರ ಫ್ಲೈ ಓವರ್: ಅಭಿವೃದ್ಧಿ 2%, ಟ್ರೋಲ್ 200% ಎಂದು ವ್ಯಂಗ್ಯ..Ejipura Flyover

Ejipura Flyover: ಕೋರಮಂಗಲ ಸುತ್ತಮುತ್ತ ಟ್ರಾಫಿಕ್​ ಕಡಿಮೆ ಮಾಡುವ ಸಲುವಾಗಿ 2017ರಲ್ಲಿ ಈಜಿಪುರ ಫ್ಲೈಓವರ್​ ನಿರ್ಮಾಣ ಮಾಡಲು ಸಮ್ಮತಿ ಸಿಕ್ಕಿತ್ತು. ಆದರೆ, ಪಿಲ್ಲರ್​ಗಳು ನಿರ್ಮಾಣವಾಗಿ 10 ವರ್ಷವಾಗುತ್ತ ಬಂದರೂ ಸಹ ಇನ್ನು ಫ್ಲೈ ಓವರ್​ ನಿರ್ಮಾಣವಾಗಿಲ್ಲ. ಮಳೆ, ಚಳಿ ಬಿಸಿಲು, ಗಾಳಿ ಪ್ರವಾಹಕ್ಕೆ ಯುದ್ಧಕ್ಕೆ ನಿಂತ ಸೈನಿಕರಂತೆ ನಿರ್ಮಾಣ ಹಂತದ ಫ್ಲೈಓವರ್​ನ ಕಂಬಗಳು ನಿಂತಿವೆ. ಆದರೆ, ಪಾಲಿಕೆ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇಷ್ಟೇ ಅಲ್ಲದೇ ಈಜಿಪುದ ನಿರ್ಮಾಣ ಹಂತದ ಮೇಲ್ಸೇತುವೆ ಟ್ರೋಲಿಗರ ಆಹಾರವಾಗಿದೆ.
ಈ ಹಿಂದೆ ಪ್ರೇಮಿಗಳಿಬ್ಬರು ಹೀಗೆಂದು ಟ್ವೀಟ್ ಮಾಡಿದ್ದರು..ನಾನು ಮತ್ತು ನನ್ನ ಪತ್ನಿ ಬ್ಯಾಚುಲರ್ಸ್ ಆಗಿದ್ದಾಗ, ನಿತ್ಯ ಇದೇ ನಿರ್ಮಾಣ ಹಂತದ ಸೇತುವೆ ರಸ್ತೆ ಬಳಿ ಓಡಾಡುತ್ತಿದ್ದೆವು. ಇದೇ ದಾರಿಯಲ್ಲಿ ನಿಂತು ಶಾಪಿಂಗ್, ಡೇಟಿಂಗ್ ಮಾಡಿ, ಪ್ರೀತಿಯಾಗಿ ಮದುವೆಯಾಗಿ ಐದಾರು ವರ್ಷ ಕಳೆಯಿತು ಆದರೆ..ಈಗಲೂ ಇದೇ ಫ್ಲೈಓವರ್ ಬಳಿ ಟ್ರಾಫಿಕ್ ನಲ್ಲಿ ಪರದಾಡೋ ಸ್ಥಿತಿ ಇದೆ ಎಂದು ವ್ಯಂಗ್ಯವಾಡಿದ್ದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಯೂನಿವರ್ಸ್ ಥ್ರೂ ಅಸ್ ಎನ್ನುವರು ಹಂಚಿಕೊಂಡಿದ್ದು..ಎಐನಿಂದ ವಿಡಿಯೋ ಕ್ರಿಯೇಟ್ ಮಾಡಿ ಬೆಂಗಳೂರಿನ ಆಡಳಿತ ವ್ಯವಸ್ಥೆಯನ್ನು ವ್ಯಂಗ್ಯವಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಆದಿ ಮಾನವರು, ಏಲಿಯನ್ಸ್, ಪ್ರವಾಹ, ಡೈನೋಸರರ್ಸ್, ಸುನಾಮಿ, ಬ್ರಿಟಿಷರು, ಜ್ವಾಲಮುಖಿ ಯಾವುದೇ ಪ್ರಕೃತಿ ಅವಘಡ ನಡೆದರೂ ಸಹ ಕೆಚ್ಚೆದೆಯಿಂದ ಯಾವುದೇ ಬಿರುಕಾಗದೆ ನಿಲ್ಲುತ್ತದೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಇನ್ನು ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದು ವರ್ಕ್​ ಶೇ.2ರಷ್ಟು..ಟ್ರೋಲ್​ ಶೇ.200ರಷ್ಟು ಎಂದು ಲೇವಡಿ ಮಾಡಿದ್ದಾರೆ. ನನ್ನ ಕಾನ್ಸ್ ಪಿರಸಿ ಥಿಯರಿ ಏನೆಂದರೆ, ಅವರು ಎಲ್ಲೋ ಲೆಕ್ಕಾಚಾರದಲ್ಲಿ ತಪ್ಪು ಮಾಡಿದ್ದಾರೆ ಮತ್ತು ಫ್ಲೈಓವರ್ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಅದು ಬೆಂಗಳೂರಿನ ಬೃಹತ್ ಜನಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಅರಿವಾಗಿದೆ. ಹಾಗಂತ ಅದನ್ನು ಕೆಡವಿ ಮೊದಲಿನಿಂದ ಹೊಸದಾಗಿ ಪ್ರಾರಂಭಿಸಲು ಹೋದರೆ, ತೆರಿಗೆ ಹಣ ವ್ಯರ್ಥವಾಯಿತು ಎಂದು ಜನರು ನ್ಯಾಯಯುತವಾಗಿಯೇ ಆಕ್ರೋಶ ಹೊರಹಾಕುತ್ತಾರೆ. ಹೀಗಾಗಿ ಬೆಂಗಳೂರು ನಗರ ಪಾಲಿಕೆ ಇದರ ಅಭಿವೃದ್ಧಿ ಮಾಡದೆ ಸುಮ್ಮನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸುಮಾರು 4.5 ಬಿಲಿಯನ್ (450 ಕೋಟಿ) ವರ್ಷಗಳ ಹಿಂದೆ ಭೂಮಿ ಸೃಷ್ಟಿಯಾಗುವುದಕ್ಕಿಂತ ಮುಂಚೆಯೇ ಆ ಪಿಲ್ಲರ್‌ಗಳು ಅಲ್ಲಿದ್ದವು ಎಂದು ನಾನು ಕೇಳಿಪಟ್ಟಿದೆ ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಏನಿದು ಈಜಿಪುರ ಫ್ಲೈ ಓವರ್​ ಸಮಸ್ಯೆ?

ಕೋರಮಂಗಲ, ಸೋನಿ ವರ್ಲ್ಡ್ ಜಂಕ್ಷನ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿನ ತೀವ್ರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 2017ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಫ್ಲೈಓವರ್​ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದಾಗ ಇದರ ವೆಚ್ಚ 203.20 ಕೋಟಿ ಆಗಿತ್ತು. ನಿಯಮದ ಪ್ರಕಾರ ನವೆಂಬರ್ 4, 2019 ರೊಳಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ನಿರಂತರ ವಿಳಂಬ ಮತ್ತು ಮರು-ಟೆಂಡರ್ ಪ್ರಕ್ರಿಯೆಗಳಿಂದಾಗಿ ಯೋಜನೆಯ ಒಟ್ಟು ವೆಚ್ಚ ಇಂದು ಬರೋಬ್ಬರಿ ರೂ. 1,761 ಕೋಟಿಗಿಂತಲೂ ಅಧಿಕ ಮೊತ್ತಕ್ಕೆ ಬಂದು ತಲುಪಿದೆ, (ಏಜೆನ್ಸೀಸ್).