ವಿಜಯಪುರ ಪುರಸಭೆಯಲ್ಲಿ ಸಾರ್ವಜನಿಕರ ಖಾತೆಗಳು ಮಾಡಿಕೊಡುತ್ತಿಲ್ಲವೆಂದು ಆರೋಪಿಸಿ ಪ್ರತಿಭಟನೆ ನಡೆಸಿದ ಪುರಸಭೆ ಸದಸ್ಯರಾದ ಎಂ.ಸತೀಶ್​ ಕುಮಾರ್​, ಸಿ.ಎಂ.ರಾಮು ಸೇರಿದಂತೆ ಖಾತೆದಾರರನ್ನು ಪುರಸಭೆ ಅಧ್ಯೆ ಎಸ್​.ಭವ್ಯಾಮಹೇಶ್​ ಸಮಾಧಾನ ಪಡಿಸಿದರು. 
ರಾಜ್ಯ

ಪುರಸಭೆಯಲ್ಲಿ ಖಾತೆ ಮಾಡಲು ವಿಳಂಬ / VIJAYAPUR

ವಿಜಯಪುರ : ವಿಜಯಪುರ ಪುರಸಭೆಯಲ್ಲಿ ಖಾತೆ ಬದಲಾವಣೆಗಾಗಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ವಿನಾಕಾರಣ ಬಾಕಿ ಉಳಿಸಿಕೊಂಡು ಅಲೆದಾಡಿಸುವುದರ ಜತೆಗೆ ಒಂದೇ ವರ್ಷಕ್ಕೆ ಎರಡು ಬಾರಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆ ಮುಂಭಾಗದಲ್ಲಿ ಪುರಸಭೆ ಸದಸ್ಯ ಎಂ.ಸತೀಶ್​ ಕುಮಾರ್​ ಹಾಗೂ ಅರ್ಜಿದಾರರೊಟ್ಟಿಗೆ ಪ್ರತಿಭಟಿಸಿದರು.
ಕಳೆದ ವರ್ಷ ಖಾತೆ ಬದಲಾವಣೆಗೆ ವೃದ್ಧೆ ಲಲಿತಮ್ಮ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಖಾತೆ ಮಾಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಕ್ರಮವಾಗಿ ತೆರಿಗೆ ಕಟ್ಟುವ ನಾಗರಿಕರನ್ನು ಅವರ ಕೆಲಸ ನಿಮಿತ್ತವಾಗಿ ಬಂದಾಗ ಕನಿಷ್ಠ ಅವರಿಗೆ ಕುಳಿತುಕೊಳ್ಳುವುದಕ್ಕೆ ಕುರ್ಚಿಗಳನ್ನೂ ನೀಡದೇ ಅಗೌರವ ತೋರಿಸಿದ್ದಾರೆ. ನಾಗರಿಕರಿಗೂ ಕನಿಷ್ಠ ಗೌರವ ಸಿಗುತ್ತಿಲ್ಲ ಎಂದು ಪ್ರತಿಭಟನಾ ನಿರತರರು ಆರೋಪಿಸಿದರು.
ನಾಗರಿಕರು ಖಾತೆಗಳಿಗಾಗಿ ಅರ್ಜಿ ಸಲ್ಲಿಸಿದಾಗ ದಾಖಲೆಗಳ ಕೊರತೆಯಿದ್ದರೆ ಅವರಿಗೆ ತಿಳಿಸಿ, ಖಾತೆ ಮಾಡಲು ತೊಡಕುಗಳಿದ್ದರೆ ಅವರಿಗೆ ಹಿಂಬರಹ ಕೊಡಿ ಎಂದು ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಶ್ರೀ ಖಾತೆ ಮಾಡಿಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ತಿಂಗಳುಗಳೇ ಕಳೆದರೂ ಇದುವರೆಗೂ ಖಾತೆ ಮಾಡಿಕೊಟ್ಟಿಲ್ಲ. ಬಹಳಷ್ಟು ಅರ್ಜಿದಾರರ ಆರೋಪವೂ ಇದೆ ಆಗಿದೆ ಎಂದು ಪುರಸಭೆ ಸದಸ್ಯ ಎಂ.ಸತೀಶ್​ ಕುಮಾರ್​ ಆರೋಪಿಸಿದರು.
ಸಾರ್ವಜನಿಕರಿಗೆ ದಂಡ: ಪುರಸಭೆ ಸದಸ್ಯ ಸಿ.ಎಂ.ರಾಮು ಮಾತನಾಡಿ, ಬಹಳಷ್ಟು ನಾಗರಿಕರ ಬಳಿ ಅರ್ಜಿ ಪಡೆಯುವುದಿಲ್ಲ. ಕೆಲವರು ತೆರಿಗೆ ಕಟ್ಟಿದ್ದರೂ ಅದನ್ನು ಆಪ್​ ಗ್ರೇಡ್​ ಮಾಡುವುದಿಲ್ಲ. ಪುನ@ ನಾಗರಿಕರು ಬಂದು ತೆರಿಗೆ ಕಟ್ಟಿರುವುದು ಅಪ್​ ಗ್ರೇಡ್​ ಮಾಡಿಕೊಡಿ ಎಂದರೆ ಹಿಂದಿನ ರಸೀದಿ ಕೊಡಿ ಎನ್ನುತ್ತಾರೆ. ರಸೀದಿ ಇಲ್ಲದಿದ್ದರೆ ಪುನ@ ತೆರಿಗೆ ಕಟ್ಟಬೇಕು. ಇದು ಸಂಪೂರ್ಣವಾಗಿ ಅಧಿಕಾರಿಗಳ ರ್ನಿಲಕ್ಷ$್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಡಾ.ಬಿ.ಆರ್​.ಅಂಬೇಡ್ಕರ್​ ರಕ್ಷಣಾ ಸಮಿತಿ ಅಧ್ಯಕ್ಷ ಸಿ. ಶ್ರೀನಿವಾಸ್​ ಮಾತನಾಡಿ, ಪುರಸಭೆಯಲ್ಲಿ ಅರ್ಹ ಅರ್ಜಿದಾರರು ನೇರವಾಗಿ ಬಂದರೆ ಖಾತೆಗಳಾಗುವುದಿಲ್ಲ. ಮಧ್ಯವರ್ತಿಗಳು, ಪ್ರಭಾವಿಗಳ ಮೂಲಕ ಬಂದರೆ ಅಧಿಕಾರಿಗಳು ಮೂರೇ ದಿನಕ್ಕೆ ಖಾತೆ ಮಾಡಿಕೊಡುತ್ತಾರೆ ಎಂದು ಆರೋಪಿಸಿದರು. ಸಾರ್ವಜನಿಕರಿಗೆ ಅಧಿಕಾರಿಗಳ ಕಡೆಯಿಂದ ಆಗಿರುವ ಸಮಸ್ಯೆ ಶ್ರೀ ಬಗೆಹರಿಸುವುದರ ಜತೆಗೆ, ಮುಂದೆ ಇಂತಹ ಸಮಸ್ಯೆಯಾಗದಂತೆ ಕ್ರಮ ವಹಿಸುತ್ತೇವೆ ಎಂದು ಪುರಸಭೆ ಅಧ್ಯೆ ಎಸ್​.ಭವ್ಯಾಮಹೇಶ್​ ಅವರು ಮನವಿ ಮಾಡಿಕೊಂಡ ನಂತರ ಪ್ರತಿಭಟನೆ ಕೈಬಿಟ್ಟರು.
ಮೊದಲು ನಿಷೇಧಿತ ಪ್ಲಾಸ್ಟಿಕ್​ ಉತ್ಪಾದನೆ ಮಾಡುವವರನ್ನು ನಿಲ್ಲಿಸಿ. ಇವರ ವಿರುದ್ಧ ಕ್ರಮ ಕೈಗೊಳ್ಳಿ. ಪ್ಲಾಸ್ಟಿಕ್​ ಬಳಕೆ ಮಾಡದಂತೆ ಜನರಿಗೆ ಅರಿವು ಮೂಡಿಸಿ, ಅದನ್ನು ಬಿಟ್ಟು, ಸಣ್ಣಪುಟ್ಟ ವ್ಯಾಪಾರಿಗಳಿಗೆ ದಂಡ ವಿಧಿಸಿದರೆ ಸಹಿಸುವುದಿಲ್ಲ ಎಂದು ಪುರಸಭೆ ಸದಸ್ಯ ಎಂ.ಸತೀಶ್​ ಕುಮಾರ್​ ಎಚ್ಚರಿಸಿದರು.