Defeat in Chimul due to selfishness of followers
ಚಿಂತಾಮಣಿ: ಚಿಮುಲ್ ನಿರ್ದೇಶಕರ ಚುನಾವಣೆ ನಡೆದು ಫಲಿತಾಂಶವೂ ಪ್ರಕಟವಾಗಿದೆ. ಈಗ ಕಾಂಗ್ರೆಸ್ನಲ್ಲಿ ಭಿನ್ನಮತದ ಹೊಗೆಯಾಡುತ್ತಿದೆ. ಚಿಂತಾಮಣಿಯ 3 ೇತ್ರಗಳ ಪೈಕಿ ಕಾಂಗ್ರಸ್ ಅಭ್ಯರ್ಥಿಗಳು ಕಸಬಾ, ಮಹಿಳಾ ೇತ್ರದಲ್ಲಿ ಗೆಲುವು ಸಾಧಿಸಿದ್ದು, ಕೈವಾರ ಅಭ್ಯರ್ಥಿ ಎಸ್.ಎನ್.ಚಿನ್ನಪ್ಪ ಸೋತಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಸೃಷ್ಟಿಸಿದೆ.
ಎಂ.ಸಿ.ಸುಧಾಕರ್ ಕಾಂಗ್ರೆಸ್ ಚಿಂತಾಮಣಿ ಎಂಬ ಫೇಸ್ಬುಕ್ನಲ್ಲಿ ಚಿಮುಲ್ ಸೋಲಿಗೆ ನಾಯಕ ಹೊಣೆ ಅಲ್ಲ, ನಾಯಕನ ಹಿಂಬಾಲಕರ ಸ್ವಾರ್ಥ? ಕೈವಾರ ೇತ್ರ ಸೋಲಿಸಿದ್ದು ಜತೆ ಇದ್ದವರೇ? ನಾಚಿಕೆೆ ಆಗಬೇಕು ಅವರಿಗೆ ಎಂದು ಬರಹವನ್ನು ಪೋಸ್ಟ್ ಮಾಡಿದ್ದು, ಅದಕ್ಕೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಸ್ವಲ್ಪ ಹಣ ಅಡ್ಜಸ್ಟ್ ಮಾಡಿದ್ದರೆ ಗೆಲ್ತಾ ಇದ್ದರು, ಸೋತಿದ್ದು ವಿರೋಧ ಪಕ್ಷದ ಅಭ್ಯರ್ಥಿ ಅವಲಪ್ಪ ಹೆಚ್ಚು ಹಣ ನೀಡಿದ್ದರಿಂದ. ಚಿಂತಾಮಣಿ ಕಾಂಗ್ರೆಸ್ನಲ್ಲಿ 10ವರ್ಷ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಿದವರಿಗೆ ಬೆಲೆ ಇಲ್ಲ, ಗೆದ್ದವರಿಗೆ ಆದ್ಯತೆ ಸಿಕ್ಕಿದೆ. ರಾಜಕೀಯ ಅಂದ್ರೆ ಇದೇ ಎಂಬ ಮಾತುಗಳು ಹರಿದಾಡುತ್ತಿವೆ.
ಕ್ಷೇತ್ರದಲ್ಲಿ ಈಡಿಗ ಸಮುದಾಯದ ಚಿನ್ನಪ್ಪ ಕುಟುಂಬದ ಮನೆಗಳನ್ನು ಬಿಟ್ಟರೆ ಹೋಬಳಿಯಲ್ಲಿ ಆ ಜನಾಂಗ ಇಲ್ಲ, ತಾಲೂಕು ಮತ್ತು ಜಿಪಂ, ಎಪಿಎಂಸಿ ಸ್ಥಾನಗಳನ್ನು ಅವರ ಕುಟುಂಬಕ್ಕೆ ನೀಡಿದ್ದು, ಬೇರೆ ಯಾರೂ ಇಲ್ಲವೇ ಎಂದು ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲೇ ಚರ್ಚೆಯಾಗಿತ್ತು.
ಚುನಾವಣೆ ಸಮೀಪಿಸುತ್ತಿದ್ದಂತೆ ಜಾತಿ ರಾಜಕಾರಣ ಸೃಷ್ಟಿಯಾಗಿ, ಎಲ್ಲ ಒಕ್ಕಲಿಗರು ಒಂದು ಕಡೆ ಮತದಾನ ಮಾಡಿ ಎಂಬ ಕೂಗು ಕೇಳಿ ಬಂದಿತ್ತು. ಇವೆಲ್ಲ ಬೆಳವಣಿಗೆ ಮಧ್ಯೆ ಒಟ್ಟು 70 ಡೆಲಿಗೇಟ್ಸ್ ಪೈಕಿ 50 ಮಂದಿ ಎಸ್.ಎನ್.ಚಿನ್ನಪ್ಪ ಜತೆ ಪ್ರವಾಸಕ್ಕೆ ಹೋಗಿದರು. ಆದರೆ ಚಿನ್ನಪ್ಪಗೆ 33 ಮತಗಳು ಮಾತ್ರ ಬಂದಿವೆ. ಜತೆಯಲ್ಲಿದ್ದ 17 ಡೆಲಿಗೇಟ್ಸ್ ವಿರೋಧ ಪಕ್ಷಕ್ಕೆ ಮತ ಹಾಕಿರುವುದರಿಂದ ಸೋಲಾಗಿದೆ. ಈ ಬೆನ್ನಲ್ಲೇ ಹೋಬಳಿ ಮುಖಂಡರ ಜತೆ ಚರ್ಚೆ ನಡೆಸಲು ಭಾನುವಾರ ಸಚಿವರು ದಿನಾಂಕ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.