Deer protection in Chelur 
ರಾಜ್ಯ

ಚೇಳೂರಿನಲ್ಲಿ ಜಿಂಕೆ ರಕ್ಷಣೆ

ಚಿಕ್ಕಬಳ್ಳಾಪುರ ಡೆಸ್ಕ್
ಚೇಳೂರು: ಆಹಾರ ಅರಸಿ ಕಾಡಿನಿಂದ ಗ್ರಾಮಕ್ಕೆ ಬಂದ ಜಿಂಕೆಯನ್ನು ಭಾನುವಾರ ಗ್ರಾಮಸ್ಥರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ತಾಲೂಕಿನ ಚೇಳೂರು ಗ್ರಾಮದ ಎರಡನೇ ಬ್ಲಾಕ್​ನಲ್ಲಿ ಜಿಂಕೆಯೊಂದು ಬೆಳಗ್ಗೆಯಿಂದ ಆಹಾರ ಅರಸಿ ಅಲೆದಾಡುತ್ತಿತ್ತು. ಜಿಂಕೆಯನ್ನು ಕಂಡ ನಾಯಿಗಳು ದಾಳಿ ಮಾಡಲು ಮುಂಗಾಗಿವೆ. ತಕ್ಷಣೆ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿ ಕಟ್ಟಿಹಾಕಿದ್ದಾರೆ. ನಂತರ ಚೇಳೂರು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚೇಳೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಜಿಂಕೆ ವಶಕ್ಕೆ ಪಡೆದಿದ್ದಾರೆ.