ಕೋಡಿಹಳ್ಳಿಯಲ್ಲಿ ದೀಪೋತ್ಸವ ಸಂಪನ್ನ Deepotsav
ಲಕ್ಕೂರು: ಮಾಲೂರು ತಾಲೂಕು ಲಕ್ಕೂರು ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಶ್ರೀ ದ್ರೌಪದಾಂಬ ದೇವಿಯ ಕರಗ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ದಿಪೋತ್ಸವ ಅದ್ದೂರಿಯಾಗಿ ನೆರವೇರಿತು.Deepotsav
ಮಹಿಳೆಯರು ದೇವಾಲಯಕ್ಕೆ ದೀಪಗಳನ್ನು ತಂದು ದೇವಿಗೆ ಸಮರ್ಪಿಸಿದರು. ಕರಗದ ಪೂಜಾರಿ ವಿ.ಸುರೇಶ್ ವೀರಕುಮಾರರೊಂದಿಗೆ ತೆರಳಿ ಗ್ರಾಮಸ್ಥರಿಂದ ವಿಶೇಷ ಪೂಜೆ ಸ್ವೀಕರಿಸಿದರು.
ಸುಮಾರು 200 ದೀಪಗಳನ್ನು ಹಚ್ಚಿಡಲಾಗಿದ್ದು, ಉತ್ತಮವಾದ ದೀಪಗಳಿಗೆ ವಿಶೇಷ ಬಹುಮಾನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೀಪಗಳಿಗೆ ಸಮಧಾನಕರ ಬಹುಮಾನ ವಿತರಿಸಲಾಯಿತು.
ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಹೂಡಿ ವಿಜಯ್ಕುಮಾರ್ ಮಾತನಾಡಿ, ಕೋಡಿಹಳ್ಳಿಯಲ್ಲಿ ನೂರಾರು ವರ್ಷಗಳಿಂದ ಕರಗ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. 5 ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ತಿಳಿಸಿದರು.
ದೇವಾಲಯದ ಸದಸ್ಯರಾದ ಶ್ರೀನಿವಾಸ್, ರಾಜಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ವೀರಕುಮಾರರು ಹಾಗೂ ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು.