ಜೇವರ್ಗಿ ತಾಲೂಕು ಶ್ರೀಕ್ಷೇತ್ರ ರಾಸಣಗಿ ಬಲಭೀಮಸೇನ ದೇವವರಿಗೆ ಸೋಮವಾರ ಸಮರ್ಪಿಸಿದ ಚಮ್ಮಾವುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಂಟೆಪ್ಪ ಹುಲೆಪ್ಪ ಹೇರೂರ, ಶರಣಮ್ಮ ಹೆರೂರ್​ ಸೇರಿ ಹರವಾಳ ಗ್ರಾಮದ ಅನೇಕರು ಪಾಲ್ಗೊಂಡಿದ್ದರು. 
ರಾಜ್ಯ

ದೇವರಿಗೆ ನೂತನ ಚಮ್ಮಾವುಗೆ ಸಮರ್ಪಣೆ

ಪ್ರಮುಖ ಮುಖ್ಯಾಂಶಗಳು

  • ರಾಸಣಗಿ ಶ್ರೀ ಬಲಭೀಮಸೇನ
ಕಲಬುರಗಿ: ಜೇವರ್ಗಿ ತಾಲೂಕು ಶ್ರೀಕ್ಷೇತ್ರ ರಾಸಣಗಿ ಶ್ರೀ ಬಲಭೀಮಸೇನ ದೇವರಿಗೆ ನೂತನ ಚಮ್ಮಾವುಗೆ (ಪಾದರಕ್ಷೆ) ಸೋಮವಾರ ಸಮರ್ಪಿಸಲಾಯಿತು.
ಪುರಾತನ ಪದ್ದತಿಯಂತೆ ಪ್ರತಿ 5 ವರ್ಷಗಳಿಗೊಮ್ಮೆ ಶ್ರೀ ಬಲಭೀಮಸೇನ ದೇವರಿಗೆ ಚಮ್ಮಾವುಗೆ ಸಮರ್ಪಣೆಯನ್ನು ಹರವಾಳ ಗ್ರಾಮದ ಹೆರೂರ ಮನೆತನದ ದಿ.ಗಂಗಮ್ಮಾ ದಿ.ಹುಲೆಪ್ಪ ಹೇರೂರ ಕುಟುಂಬದವರು ಮಾಡುತ್ತಿದ್ದಾರೆ. ಈ ಬಾರಿಯ ಸಮರ್ಪಣೆಯನ್ನು ಹರವಾಳ ಗ್ರಾಮದಿಂದ ಕಂಟೆಪ್ಪ ಹುಲೆಪ್ಪ ಹೇರೂರ ಅವರು ಮೆರವಣಿಗೆಯಲ್ಲಿ ಚಮ್ಮಾವುಗೆಯೊಂದಿಗೆ ಪಾದಯಾತ್ರೆ ನಡೆಸಿ ದೇವಸ್ಥಾನ ತಲುಪಿದರು. ರಾಸಣಗಿ ಬಲಭೀಮಸೇನ ದೇವಸ್ಥಾನ ಟ್ರಸ್ಟ್​ ನವರು ಮತ್ತು ಗ್ರಾಮಸ್ಥರು ಚಮ್ಮಾವುಗೆಗಳ ಪುರಪ್ರವೇಶ ಮಾಡಿಕೊಂಡು ದೇವಸ್ಥಾನಕ್ಕೆ ತಂದರು. ನಂತರ ಶ್ರೀ ಬಲಭೀಮಸೇನ ದೇವರಿಗೆ ಪಂಚಾಮೃತ ಅಭಿಷೇಕ ಗಂಧಲೇಪನ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನಡೆಯಿತು ಈ ಎಲ್ಲಾ ಕಾರ್ಯಕ್ರಮದ ಸೇವೆಯನ್ನು ಶರಣಮ್ಮ ಕಂಟೆಪ್ಪ ಹೇರೂರ ಹಾಗೂ ಸಹೋದರರು ನಡೆಸಿಕೊಟ್ಟರು.
ಟ್ರಸ್ಟ್​ ಅಧ್ಯಕ್ಷ ಶಂಕರಗೌಡ ಪಾಟೀಲ್​, ಕಾರ್ಯದರ್ಶಿ ಭೀಮಸೇನ ಜೋಶಿ, ಸದಸ್ಯ ಸಂಪತ್​ ಮಾಡ್ಯಾಳಕರ್​ ಸೇರಿ ಪದಾಧಿಕಾರಿಗಳು, ಗಣ್ಯರು ಇದ್ದರು.