ವಡಗೇರಾ ತಾಲೂಕು ಬರಪೀಡಿತ ಘೋಷಿಸುವಂತೆ ಆಗ್ರಹಿಸಿ ಬಿಜೆಪಿ ಗ್ರಾಮೀಣ ಮಂಡಲ ವತಿಯಿಂದ ಬುಧವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ಮಾತನಾಡಿದರು. ರಾಚಣ್ಣಗೌಡ ಮುದ್ನಾಳ, ಸಿದ್ದಣ್ಣಗೌಡ ಕಾಡಂನೋರ್, ದೇವರಾಜ ನಾಯಕ ಉಳ್ಳೆಸೂಗೂರ, ಸದಾಶಿವರಡ್ಡಿಗೌಡ ರೊಟ್ನಡಗಿ, ಡಾ.ಸುಭಾಶ ಕರಣಗಿ, ಸಂಗಣ್ಣಗೌಡ ಅನ್ವರ್, ನಾಗರತ್ನ ಕುಪ್ಪಿ, ಪರಶುರಾಮ ಕುರಕುಂದಿ, ಲಿಂಗಪ್ಪ ಹತ್ತಿಮನಿ, ರಾಜಶೇಖರ್ ಕಾಡಂನೋರ್, ಸ್ವಾಮಿದೇವ ದಾಸನ್ ಇತರರಿದ್ದರು. 
ರಾಜ್ಯ

ವಡಗೇರಾ ತಾಲೂಕು ಬರಪೀಡತ ಘೋಷಿಸಿ

ವಡಗೇರಾ: ಮಳೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ವಡಗೇರಾ ತಾಲೂಕು ಬರಪೀಡಿತ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ರೈತರೊಂದಿಗೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ವಡಗೇರಾ ತಾಲೂಕಿನ ರೈತರ ಪರಿಸ್ಥಿತಿ ಕೋಮಾ ಸ್ಥಿತಿಯಲ್ಲಿರುವಂತಾಗಿದೆ. ರೈತರು ಮಳೆಗಾಗಿ ಕಾಯುತ್ತಾ ಬೆಳೆ ಕಳೆದುಕೊಂಡು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ರೈತರ ನೋವು ಕಾಣುತ್ತಿಲ್ಲ. ರೈತರ ಸಂಕಷ್ಟದ ಬಗ್ಗೆ ಸರ್ಕಾರದ ಕಿವಿಗೆ ಧ್ವನಿ ಮುಟ್ಟುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ರೈತರ ಹೊಲದಲ್ಲಿ ಬೆಳೆ ಇಲ್ಲ. ಕೈಯಲ್ಲಿ ಹಣ ಇಲ್ಲ. ತಲೆಯ ಮೇಲೆ ಸಾಲ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ನೆರವು ನೀಡಬೇಕಾಗಿರುವು ಬಹಳ ಜರೂರಿ ಇದೆ. ಆದರೆ ಸರ್ಕಾರ ಇದ್ಯಾವುದು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬರ ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವ ಧೈರ್ಯ ಮತ್ತು ಇಚ್ಛಾಶಕ್ತಿ ಬೇಕು. ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರದ ವಿರುದ್ಧ ರೈತರ ಪರವಾಗಿ ಧ್ವನಿ ಎತ್ತಬೇಕಿತ್ತು. ಆದರೆ ಸರ್ಕಾರದ ವಿರುದ್ಧ ಒತ್ತಡ ಹೇರದೆ ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿದರು.
ಈ ಕುರಿತು ಮುಖ್ಯಮಂತ್ರಿ ಅವರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು. ರಾಚಣ್ಣಗೌಡ ಮುದ್ನಾಳ, ಸಿದ್ದಣ್ಣಗೌಡ ಕಾಡಂನೋರ್, ದೇವರಾಜ ನಾಯಕ ಉಳ್ಳೆಸೂಗೂರ, ಡಾ.ಸುಭಾಶ ಕರಣಗಿ, ಸಂಗಣ್ಣಗೌಡ ಅನ್ವರ್, ನಾಗರತ್ನ ಕುಪ್ಪಿ, ಪರಶುರಾಮ ಕುರಕುಂದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ವೇಳೆ ಸದಾಶಿವರಡ್ಡಿಗೌಡ ರೊಟ್ನಡಗಿ, ಲಿಂಗಪ್ಪ ಹತ್ತಿಮನಿ, ರಾಜಶೇಖರ್ ಕಾಡಂನೋರ್, ಸ್ವಾಮಿದೇವ ದಾಸನ್, ಶ್ರೀನಿವಾಸರಾವ್ ಕುಲಕರ್ಣಿ, ಯಂಕಣ್ಣ ಬಸಂತಪುರ, ರಾಚಯ್ಯಸ್ವಾಮಿ, ಪರ್ವತರಡ್ಡಿ ಬೆಂಡೆಬೆಂಬಳಿ, ಶರಣುಗೌಡ ಐಕೂರ, ಶಂಕ್ರಪ್ಪಗೌಡ ಗೋನಾಲ್, ಶಿವಕುಮಾರ ಕೊಂಕಲ್, ನಾಗರಡ್ಡಿ, ಮೋಹನರಡ್ಡಿ, ಸಂಗರಡ್ಡಿಗೌಡ, ಮಲ್ಲು ಕಲ್ಮನಿ, ರಂಗಯ್ಯ ಮುಸ್ತಾಜೀರ, ನಿಂಗಯ್ಯ ಪೂಜಾರಿ, ಮದನಗೋಪಾಲ, ಅಮ್ಮಣ್ಣಗೌಡ, ಪ್ರಭುಗೌಡ, ಲಿಂಗಣ್ಣ ಪೂಜಾರಿ, ಶಂಕರಗೌಡ ಬಸಂತಪುರ, ಗೋವಿಂದಪ್ಪ ಖಾನಾಪೂರ, ಮಲ್ಲುಗೌಡ ಪೋಲಿಸ್ ಪಾಟೀಲ್, ಬಲ್ಲದೇವ್ ನಾಯಕ, ಗೌರಿಶಂಕರ ಹಿರೇಮಠ,ಶಿವರಾಜ ಸ್ವಾಮಿ, ಅಮರಯ್ಯ ಸ್ವಾಮಿ, ಮಹ್ಮದ್ ಖುರೇಶಿ, ಸಿದ್ದಪ್ಪ ತಮ್ಮಣ್ಣೋರ, ವಿರುಪಾಕ್ಷಪ್ಪಗೌಡ ಮಾಚನೂರ, ಶಿವಪ್ಪ, ಹೊನ್ನಪ್ಪ, ಮಲ್ಲು, ಯಲ್ಲಾಲಿಂಗ, ಭೀಮಣ್ಣ, ಸಂತೋಷ, ಸಾಬಯ್ಯ ಇತರರಿದ್ದರು.