ವಡಗೇರಾ ತಾಲೂಕು ಬರಪೀಡಿತ ಘೋಷಣೆ ಮಾಡಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು. ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ತಾಲೂಕು ಅಧ್ಯಕ್ಷ ಸತೀಶ್ ಜಡಿ, ರಾಜಸಿಂಗ ಮದರಕಲ್, ಶ್ರೀನಿವಾಸ ಮಡಿವಾಳ, ಶಿವರಾಜ್ ನಾಡಗೌಡ, ಮಲ್ಲು ಜಡಿ, ಬಸ್ಸು ಬುಸೇನಿ, ರಾಜು ಗುಂಡಗುರ್ತಿ, ತಿಮ್ಮಣ್ಣ ಕಡೇಚೂರು, ಸಾಬಣ್ಣ ಕಲ್ಲಪ್ಪನೋರ್, ಬಸವರಾಜ ಕೊದ್ದಡ್ಡಿ, ನಿಂಗಪ್ಪ ಕುರ್ಕಳ್ಳಿ, ಸಾಬರೆಡ್ಡಿ, ರಾಜು ಇತರರಿದ್ದರು. 
ರಾಜ್ಯ

ವಡಗೇರಾ ತಾಲೂಕು ಬರಪೀಡಿತ ಘೋಷಿಸಿ

ಪ್ರಮುಖ ಮುಖ್ಯಾಂಶಗಳು

  • ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರಿಂದ ತಹಸೀಲ್ದಾರ್‌ಗೆ ಮನವಿ
ವಡಗೇರಾ: ತಾಲೂಕಿನಲ್ಲಿ ಮಳೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕೂಡಲೇ ತಾಲೂಕನ್ನು ಬರಪೀಡತ ಘೋಷಣೆ ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ನೇತೃತ್ವದಲ್ಲಿ ವಾಲ್ಮೀಕಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿ ಮಾತನಾಡಿದ ಅವರು, ವಡಗೇರಾ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡದೆ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಮಾತ್ರ ಘೋಷಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಅಧ್ಯಕ್ಷ ಸತೀಶ್ ಜಡಿ ನೇತೃತ್ವದಲ್ಲಿ ಮಂಗಳವಾರ ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಹಲಿಗೆ, ಭಜಂತ್ರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳೊಂದಿಗೆ ಪ್ರತಿಭಟನಾ ರ‍್ಯಾಲಿ ನಡೆಯಿತು. ಬಳಿಕ ವಾಲ್ಮೀಕಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಸರ್ಕಾರ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಬೇಕು ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಹಂತ ಹಂತವಾಗಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ರಾಜಸಿಂಗ ಮದರಕಲ್, ಶ್ರೀನಿವಾಸ ಮಡಿವಾಳ, ಶಿವರಾಜ ನಾಡಗೌಡ, ಮಲ್ಲು ಜಡಿ, ಬಸ್ಸು ಬುಸೇನಿ, ರಾಜು ಗುಂಡಗುರ್ತಿ, ತಿಮ್ಮಣ್ಣ ಕಡೇಚೂರು, ಸಾಬಣ್ಣ ಕಲ್ಲಪ್ಪನೋರ, ಬಸವರಾಜ ಕೊದ್ದಡ್ಡಿ, ನಿಂಗಪ್ಪ ಕುರ್ಕಳ್ಳಿ, ಸಾಬರೆಡ್ಡಿ, ರಾಜು, ಭೀಮು,ಸಿದ್ದು ಹುಂಡೇಕಲ್, ಸಿದ್ದು ಕಡೇಚೂರ್, ಸತೀಶ್ ನಾಟೇಕಾರ, ನಿಂಗಪ್ಪ ಪರಾರಿ, ಮರಲಿಂಗ, ಚನ್ನಪ್ಪ, ಮಹೇಶ, ಮಲ್ಲು, ಶಿವು, ತಾಯಪ್ಪ, ದೇವು ವಿಶ್ವಕರ್ಮ, ರೆಡ್ಡಿ, ಸಾಬರಡ್ಡಿ ಪರಾರಿ, ಹಣಮಂತ ದಂಡAಬಳಿ, ರಂಗಪ್ಪ ಗುಂಡುಗುರ್ತಿ ಇತರರಿದ್ದರು.