ಬರಪೀಡಿತ ಜಿಲ್ಲೆ ಘೋಷಿಸಿ, ಬರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಮಹಾಗಾಂವ್​ ಗ್ರಾಪಂ ಎದುರುಗಡೆ ಭಾರತ ಕಮ್ಯುನಿಷ್ಟ್​ ಪಕ್ಷದಿಂದ ಪ್ರತಿಭಟನೆ ನಡೆಸಿ ತಾಪಂ ಇಒಗೆ ಮನವಿಪತ್ರ ಸಲ್ಲಿಸಲಾಯಿತು. ಮಹಿಬೂಬ್​ ಶಾಹ, ಹಣಮಂತ ಚಂದ್ರನಗರ, ಮಂಜುನಾಥ ಶಿಂಧೆ, ನರೇಶ ಹರಸೂರಕರ ಇತರರಿದ್ದರು. 
ರಾಜ್ಯ

ಬರಪೀಡಿತ ಜಿಲ್ಲೆ ಘೋಷಣೆ ಮಾಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಹಾಗಾಂವ್​ ಗ್ರಾಪಂ ಎದುರು ಸಿಪಿಐ ಸಂಘಟನೆಯಿಂದ ಹೋರಾಟ
ಕಮಲಾಪುರ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಸ್ಥಗಿತವಾಗಿದ್ದು, ಜತೆಗೆ ನೀರಿನ ಸಮಸ್ಯೆ ತಲೆದೂರಿದೆ. ಕೂಡಲೇ ಬರಪೀಡಿತ ಜಿಲ್ಲೆ ೂಷಣೆ ಮಾಡಿ, ಕಾಮಗಾರಿ ಆರಂಭಿಸಬೇಕು ಎಂದು ಸಿಪಿಐ (ಎಂ) ಮುಖಂಡ ಮಹಿಬೂಬ್​ ಶಾಹ ಒತ್ತಾಯಿಸಿದರು.
ಬರಪೀಡಿತ ಕಲಬುರಗಿ ಜಿಲ್ಲೆ ೂಷಣೆ ಮಾಡಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಷ್ಟ್​ ಪಕ್ಷ (ಮಾರ್ಕ್ಸ್​ವಾದಿ)ದಿಂದ ಮಹಾಗಾಂವ್​ ಗ್ರಾಮ ಪಂಚಾಯಿತಿ ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಮಾತನಾಡಿ, ಕೂಡಲೇ ಉದ್ಯೋಗ ಸೃಷ್ಟಿಸಬೇಕು. ವಿಬಿ&ಜಿ ರಾಮ್​ ಜಿ 200 ದಿನಗಳಿಗೆ ವಿಸ್ತರಿಸಬೇಕು. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೆಲಸ ದೊರೆಯುವಂತಾಗಬೇಕು. ವಾರಕ್ಕೊಮ್ಮೆ ವೇತನ ಪಾವತಿ ಮಾಡಬೇಕು. ನಿರುದ್ಯೋಗ ಸಮಸ್ಯೆ ನಿವಾರಿಸಲು ಕೂಡಲೇ ಬರಪರಿಹಾರ ಕಾಮಗಾರಿ ಆರಂಭಿಸಬೇಕು. ಜನ&ಜಾನುವಾರುಗಳಿಗೆ ನೀರು ಒದಗಿಸಬೇಕು, ಪ್ರತಿ ಗ್ರಾಮದಲ್ಲಿ ಮೇವು ಬ್ಯಾಂಕ್​ ಆರಂಭಿಸಬೇಕು ಎಂದು ಆಗ್ರಹಿಸಿದರು.
ತಾಪಂ ಇಒ ರಮೇಶ ಪಾಟೀಲ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ಹಣಮಂತ ಚಂದ್ರನಗರ, ನರೇಶ ಹರಸೂರಕರ, ನಂದನಕುಮಾರ ಹರಸೂರಕರ, ಜೈಭೀಮ ಹನುಮನಕರ, ಸುನೀಲ ಹನುಮನಕರ, ವಿಠಾಬಾಯಿ ಹಣಮಂತ, ಫೌಲಾಬಾಯಿ ಯಂಕಪ್ಪ, ಭೀಮಾಬಾಯಿ ನಾಮದೇವ, ಮಲ್ಲವ್ವ ಲ್ಮಣ, ಅಂಬವ್ವ ಶಾಮರಾವ, ಯಶಬಾಯಿ ಭೀಮಶಾ, ಭೀಮಣ್ಣ ಹಣಮಂತ, ವೈಜನಾಥ ಕಟ್ಟೋಳಿ, ಶಾಮರಾವ ಯಲ್ಲಪ್ಪ, ಶಿವಪ್ರಸಾದ ಸೋಮಲಿಂಗ ಇತರರಿದ್ದರು.