ಕಮಲನಗರ ತಾಲೂಕು ಬರಗಾಲ ಘೋಷಣೆ ಮಾಡಿ ರೈತರಿಗೆ ಪರಿಹಾರ ಮತ್ತು ಸಂಪೂರ್ಣ ಸಾಲಮನ್ನಾ ಮಾಬೇಕಂದು ಒತ್ತಾಯಿಸಿ ಮಂಗಳವಾರ ರೈತ ಸಂಘದ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಸಿಎಂಗೆ ಬರೆದ ಮನವಿ ಪತ್ರವನ್ನು ಎಂಡಿ ಶಕೀಲ್ ಅವರಿಗೆ ಸಲ್ಲಿಸಿದರು. ಶ್ರೀಮಂತ ಬಿರಾದಾರ, ಪ್ರವಿಣ ಕುಲಕರ್ಣಿ, ವೈಜನಾಥ ವಡ್ಡೆ, ವಿಠ್ಠಲರಾವ ಪಾಟೀಲ, ಶ್ರೀರಂಗ ಪಿಹಾರ, ಯಶವಂತ ಬಿರಾದಾರ ಇತರರಿದ್ದರು.
- ವಿವಿಧ ಸಂಘಗಳಿಂದ ಒತ್ತಾಯಿಸಿ ಪ್ರತಿಭಟನೆ
ಕಮಲನಗರ: ಕಮಲನಗರ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ರೈತರ ಸಾಲ ಮನ್ನಾ ಮಾಡಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಹೀರಾಬಾದ್-&ಬೀದರ್-& ನಾಂದೇಡ್ ರಾಷ್ಟ್ರೀಯ ಹೆದ್ದಾರಿ 50 ಸಂಚಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಗ್ರಂಥಾಲಯದಿಂದ ಅಲ್ಲಮಪ್ರಭು ವೃತ್ತದವರೆಗೆ ಪಾದಯಾತ್ರೆ ಆರಂಭಿಸಿದ ಪ್ರತಿಭಟನಾಕಾರರು,ನಂತರ ಬಸ್ ತಂಗುದಾನ ಎದುರು ಸಭೆ ಸೇರಿ ಸರ್ಕಾರದ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ. ತಾಲೂಕಿನಲ್ಲಿ ಪ್ರಸ್ತುತ ವರ್ಷದಲ್ಲಿ ಅನಾವೃಷ್ಟಿ ಇರುವುದರಿಂದ ಬಿತ್ತನೆ ಕಾರ್ಯ ಸರಿಯಾಗಿ ಆಗಿಲ್ಲ. ಬಿತ್ತನೆ ಕಾರ್ಯ ಆಗಿದ್ದರೂ ಮಳೆ ಆಗದೆ ಮೊಳಕೆಗಳು ಸುಟ್ಟು ಹೋಗಿವೆ. ಜಾನುವಾರುಗಳು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ತಾಲೂಕವನ್ನು ಬರಗಾಲ ಘೋಷಣೆ ಮಾಡಿ ಎಕರೆಗೆ 50 ಸಾವಿರ ರೂ.ರಂತೆ ರೈತರ ಖಾತೆಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಬೀದರ್ನ ಸಹಾಯಕ ಆಯುಕ್ತ ಎಂ.ಡಿ. ಶಕೀಲ್ ಅವರಿಗೆ ಸಲ್ಲಿಸಲಾಯಿತು. ರೈತ ಸಂಘ ತಾಲೂಕು ಅಧ್ಯಕ್ಷ ಪ್ರವಿಣ ಕುಲಕರ್ಣಿ, ಗೌರವಧ್ಯಕ್ಷ ವೈಜನಾಥ ವಡ್ಡೆ, ಕಾರ್ಯದರ್ಶಿ ವಿಠ್ಠಲರಾವ ಪಾಟೀಲ, ಶ್ರೀರಂಗ ಪಿಹಾರ, ಯಶವಂತ ಬಿರಾದಾರ, ಮನೋಜ ಪೊಲೀಸ್ ಪಾಟೀಲ, ದೇವೇಂದ್ರ ಪಾಟೀಲ, ಗುಂಡಪ್ಪ ದಾನಾ, ನವಾಜ್ ಮಸ್ತಾನ್ ಸಾಬ್, ಉತ್ತಮರಾವ ಮಾನೆ, ದಯಾನಂದ ಸ್ವಾಮಿ, ಪ್ರಕಾಶ ಬಾವಗೆ, ಸಿದ್ರಮಪ್ಪ ಅಣದೂರೆ, ಪ್ರಶಾಂತ ಖಾನಾಪುರೆ, ಬಸವರಾಜ ಬಿರಾದಾರ, ಜ್ಞಾನೇಶ್ವರ ಪಾಟೀಲ, ಶಾಲಿವಾನ ಬಿರಾದಾರ, ವೈಜನಾಥ ಗುಡ್ಡಾ, ಶೆಟಕಾರ ಸೇರಿ ತಾಲೂಕಿನ ವಿವಿಧ ಗ್ರಾಮದ ರೈತ ಮುಖಂಡರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.