ಕಲಬುರಗಿಯನ್ನು ಬರಪೀಡಿತ ಪ್ರದೇಶವೆಂದು ೂಷಣೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಫಜಲಪುರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ಧರಣಿ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ಶ್ರೀಮಂತ ಬಿರಾದಾರ, ರಮೇಶ ಶೆಟ್ಟಿ, ಗುರು ಚಾಂದಕವಟೆ, ಶಾಂತಪ್ಪ ಅಂಜುಟಗಿ, ರಮೇಶ ಪಾಟೀಲ್ ಇತರರಿದ್ದರು.
- ಅಫಜಲಪುರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯಿಂದ ಧರಣಿ
ಅಫಜಲಪುರ: ಸೊನ್ನ ಬ್ಯಾರೇಜ್ಗೆ ಉಜನಿ ಮತ್ತು ನಾರಾಯಣಪುರ ಜಲಾಶಯದಿಂದ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರದಾರ ಆಗ್ರಹಿಸಿದರು.
ಕಲಬುರಗಿಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು, ತಾಲೂಕಿನಲ್ಲಿರುವ ಕೆರೆಗಳ ಹೂಳೆತ್ತಿ, ನೀರು ತುಂಬುವ ಕೆಲಸ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.
ಧರಣಿ ಸ್ಥಳಕ್ಕೆ ತಹಸೀಲ್ದಾರ್ ಸಂಜೀವಕುಮಾರ ದಾಸರ ಭೇಟಿ ನೀಡಿ, ಶಾಸಕರು ಬೆಂಗಳೂರಿನಲ್ಲಿದ್ದು, ನೀರಾವರಿ ಸಚಿವರ ಜತೆ ಚರ್ಚಿಸಿ ನೀರು ಬಿಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಇನ್ನುಳಿದ ಬೇಡಿಕೆ ಈಡೇರಿಸಲು ಜಿಲ್ಲಾಧಿಕಾರಿಗಳಿಗೆ ತಣವೇ ಪತ್ರ ರವಾನಿಸಲಾಗುತ್ತದೆ. ಜತೆಗೆ ಕೆಎನ್ಎನ್ಎಲ್ ಹಾಗೂ ಕೆಬಿಜಿಎನ್ಎಲ್ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಕೆಂಭಾವಿ ಮೂಲಕ ಸಿಂದಗಿಗೆ ಹಾಗೂ ಬಗಲೂರಿನಿಂದ ತ್ತರಗಾ ಬ್ಯಾರೇಜ್ಗೆ ನೀರು ಬರುತ್ತದೆ. ಎಲ್ಲ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ರಮೇಶ ಶೆಟ್ಟಿ, ಗುರು ಚಾಂದಕವಟೆ, ಶಾಂತಪ್ಪ ಅಂಜುಟಗಿ, ರಮೇಶ ಪಾಟೀಲ್, ಪ್ರಭಾವತಿ ಮೇತ್ರಿ, ಕಲ್ಲಪ್ಪ ಅಂಜುಟಗಿ, ಬಸವರಾಜ ಶಿರ, ದತ್ತಗುರು, ಯಶ್ವಂತ ಪಟ್ಟೇದಾರ್, ಅರ್ಜುನ ಸೋಮಜಾಳ, ನಿಂಗನಗೌಡ ಪಾಟೀಲ್, ರಾಜುಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಬಸವರಾಜ ಮಾಸ್ತರ್ ಇತರರಿದ್ದರು.