ಜೇವರ್ಗಿ ಮತಕ್ಷೇತ್ರದ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್ನಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ದೊಡ್ಡಪ್ಪಗೌಡ ಪಾಟೀಲ್, ರೌಫ್ ಹವಲ್ದಾರ, ಗೌಲ್ಲಾಳಪ್ಪ ಕಡಿ, ರಮೇಶಬಾಬು ವಕೀಲ, ಬಸವರಾಜ ಪಾಟೀಲ್ ನರಿಬೋಳ, ಪುಂಡಲಿಕ ಗಾಯಕವಾಡ, ಸಾಯಬಣ್ಣ ದೊಡ್ಡಮನಿ ಇತರರಿದ್ದರು.
- ಜೆಡಿಎಸ್ನಿಂದ ತಹಸಿಲ್ ಕಚೇರಿ ಮುತ್ತಿಗೆ ಹೋರಾಟ
- ಕೃಷಿ ಜಂಟಿ ನಿರ್ದೇಶಕರಿಗೆ ಮನವಿ
ಜೇವರ್ಗಿ: ಮತಕ್ಷೇತ್ರದ ಎಲ್ಲ ರೈತರ ಖಾತೆಗೆ ಬೆಳೆ ವಿಮೆ ಎರಡನೇ ಕಂತಿನ ಪರಿಹಾರ ಹಣ ಜಮೆ ಮಾಡಬೇಕು. ಜೇವರ್ಗಿ- ಯಡ್ರಾಮಿಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕು ಘಟಕದಿಂದ ಶುಕ್ರವಾರ ಮಿನಿ ವಿಧಾನಸೌಧ ಮುತ್ತಿಗೆ ಹೋರಾಟ ನಡೆಸಲಾಯಿತು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಮಲ್ಲಾಬಾದ್ ಏತ ನೀರಾವರಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೆಕೆಆರ್ಡಿಬಿಯಿಂದ ಅಡಿಗಲ್ಲು ಹಾಕಿರುವ ಕಲ್ಯಾಣ ಪಥ ಯೋಜನೆ ಕಾಮಗಾರಿಗೆ ಶೀಘ್ರ ಆರಂಭಿಸಬೇಕು. ಸಾಥಖೇಡ, ಬಿಳವಾರ, ಬಳಬಟ್ಟಿ, ವರವಿ, ಯಾಳವಾರ, ಕೋಳಕೂರ, ಕೂಡಿ, ಕರಕಿಹಳ್ಳಿ, ಇಜೇರಿ, ಕಡಕೋಳ, ನೆಲೋಗಿ ಸೇರಿ ವಿವಿಧ ಗ್ರಾಮಗಳ ರೈತರ ಖಾತೆಗಳಿಗೆ ಬೆಳೆ ವಿಮೆಯ 2ನೇ ಕಂತಿನ ಪರಿಹಾರ ಮೊತ್ತ ಜಮೆ ಮಾಡಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಹಾಗೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ರೌಫ್ ಹವಲ್ದಾರ, ಗೌಲ್ಲಾಳಪ್ಪ ಕಡಿ, ರಮೇಶಬಾಬು ವಕೀಲ, ಬಸವರಾಜ ಪಾಟೀಲ್ ನರಿಬೋಳ, ಪುಂಡಲೀಕ ಗಾಯಕವಾಡ, ಸಾಯಬಣ್ಣ ದೊಡ್ಡಮನಿ, ನಿಂಗಣ್ಣ ಭಂಡಾರಿ, ಸಿದ್ದಣ್ಣ ಹಂಗರಗಿ, ಧಮುರ್ ಜೋಗುರು, ಭೀಮರಾಯ ಜನಿವಾರ, ಅಕ್ಬರ್ ಮುಲ್ಲಾ, ಇಬ್ರಾಹಿಂ ಪಟೇಲ್, ರಾಜಾ ಪಟೇಲ್, ಅಮೀರ್ ಪಟೇಲ್ ಚಿಂಚೋಳಿ, ಸೋಮಶೇಖರ ಹೂಗಾರ, ವಿಜಯಲಕ್ಷ್ಮೀ ಆಂದೋಲಾ, ಹಳ್ಳೆಮ್ಮಗೌಡತಿ ಮಲ್ಲಾಬಾದ, ಸರೋಜಿನ ಮಯೂರ, ಬಸವರಾಜ ಮುಕ್ಕಾಣಿ, ಬಸವರಾಜಗೌಡ ಕೆಲ್ಲೂರ, ವಿಶ್ವನಾಥ ಇಮ್ಮಣ್ಣಿ, ವಿಜಯಕುಮಾರ ನರಿಬೋಳ, ರವಿ ಪಡಶೆಟ್ಟಿ ಯಾಳವಾರ, ಮಹೇಶ ಪಾಟೀಲ್ ಕೂಡಿ, ವಿಶಾಲ್ ಭಂಕೂರ, ಈರಣ್ಣ ಜವಳಿ, ಈರಣ್ಣ ಅವರಾದ, ಪರಶುರಾಮ ಮುದವಾಳ, ಮಹಾಂತೇಶ ಪವಾರ್ ಇತರರಿದ್ದರು.