ಜೇವರ್ಗಿ, ಯಡ್ರಾಮಿ ಬರಪೀಡಿತ ತಾಲೂಕು ಘೋಷಿಸುವಂತೆ ಆಗ್ರಹಿಸಿ ಕಟ್ಟಿಸಂಗಾವಿ ಬಳಿಯ ಹೆದ್ದಾರಿಯಲ್ಲಿ ರೈತ ಸಂ ಹಾಗೂ ಪ್ರಗತಿಪರ ಸಂಟನೆಯಿಂದ ಪ್ರತಿಭಟನೆ ನಡೆಸಲಾಯಿತು.ಮಹೇಶ ರಾಠೋಡ, ಮಹಾಂತಗೌಡ ನಂದಿಹಳ್ಳಿ, ಸಿದ್ರಾಮ ಕಟ್ಟಿ, ಭೀಮರಾಯ, ಮಲ್ಲಣ್ಣಗೌಡ ಪಾಟೀಲ್​ ಕೆಲ್ಲೂರ, ದೇವಮ್ಮ ಯಾಳವಾರ, ಮಂಜುಳಾ ಭಂಜತ್ರಿ ಇತರರಿದ್ದರು. 
ರಾಜ್ಯ

ಜೇವರ್ಗಿ, ಯಡ್ರಾಮಿ ಬರಪೀಡಿತ ತಾಲೂಕು ಘೋಷಿಸಿ

ಜೇವರ್ಗಿ: ಭೀಕರ ಬರದಿಂದ ರೈತರು ಸಂಕಷ್ಟದಲ್ಲಿದ್ದು, ಕೂಡಲೇ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಬೇಕು, ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಕಟ್ಟಿಸಂಗಾವಿ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.
ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆವಿಮೆ ತಾರತಮ್ಯ ಸರಿಪಡಿಸಬೇಕು. ಮಲ್ಲಾಬಾದ್​ ಏತ ನೀರಾವರಿ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಮರು ಬಿತ್ತನೆಗೆ ಬೀಜ, ರಸಗೊಬ್ಬರ ಉಚಿತವಾಗಿ ನೀಡಬೇಕು. ಪುರಸಭೆಯಲ್ಲಿ ದಿನಗೂಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ರೈತ ಮುಖಂಡ ಭೀಮಾಶಂಕರ ಬಿಲ್ಲಾಡ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಮುಖಂಡರಾದ ಮಹಾಂತಗೌಡ ನಂದಿಹಳ್ಳಿ, ಮಹೇಶ ರಾಠೋಡ, ಮಲ್ಲಣ್ಣಗೌಡ ಪಾಟೀಲ್​ ಕೆಲ್ಲೂರ, ದೇವಮ್ಮ ಯಾಳವಾರ, ಮಂಜುಳಾ ಭಂಜತ್ರಿ, ಸುಶೀಲಾ ಆಲೂರ, ಲಾಳೇಶ ಮಣಿಯಾರ, ಭೀಮರಾಯ ಕರವೇ, ಅಲ್ಲಾಪಟೇಲ್​ ಇಜೇರಿ,ರಾಜಾ ಪಟೇಲ್​, ಮೋಹಿನ್​ ಪಟೇಲ್​, ಸಿದ್ದಣ್ಣಗೌಡ ರಾಜವಾಳ, ಪರಮೇಶ್ವರ ಬಿರಾಳ, ಸಾಹೇಬಗೌಡ ಹಂಗರಗಿ, ಲಾಳೇ ಸಾಬ್​ ಮನಿಯಾರ, ಸಿದ್ದಣ್ಣಗೌಡ ರಾಜವಾಳ, ರಿಯಾಜ್​ ಪಟೇಲ್​ ಬಿಳವಾರ, ಸಿದ್ದು ಕೆರೂರ, ಸಿದ್ರಾಮ ಕಟ್ಟಿ, ಪರಮಾನಂದ ಯಲಗೋಡ, ಪುಂಡಲೀಕ ಗಾಯಕವಾಡ, ಬಾಬು ಪಾಟೀಲ್​, ಹಬೀಬ್​ ಜಮಾದಾರ ಇತರರಿದ್ದರು. ಇದಕ್ಕೂ ಮುನ್ನ ಸಚಿವರು ಪ್ರಗತಿಪರ ಮುಖಂಡರ ಜತೆಗೆ ಸಭೆ ನಡೆಸಿದರು.