ಗುರುಮಠಕಲ್‌ನ್ನು ಬರಪೀಡತ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಗುರುಮಠಕಲ್‌ನಲ್ಲಿ ಜಯ ಕರ್ನಾಟಕ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು. ನಾಗೇಶ್ ಗದ್ದಿಗಿ, ಮಲ್ಲಿಕಾರ್ಜುನ ಕಾಕಲವಾರ, ನರಸಿಂಹಲು ಗಂಗನೋಳ ಇತರರಿದ್ದರು.
- ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಗದ್ದಿಗಿ ಆಗ್ರಹ
- ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ
ಗುರುಮಠಕಲ್ : ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಗುರುಮಠಕಲ್ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ನಾಗೇಶ ಗದ್ದಿಗಿ ಆಗ್ರಹಿಸಿದರು.
ಈ ವೇಳೆ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಜನ ಜಾನುವಾರುಗಳಿಗೆ ನೀರಿನ ಕೊರತೆಯಾಗಿದ್ದು, ಕೆರೆ-ಕಟ್ಟೆಗಳು ಬತ್ತಿದ್ದು ಹೀಗಾಗಿ ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ರಾಷ್ಟಿçÃಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನಾದ್ಯಂತ ರೈತರು ತೀವ್ರ ಸಂಕಕ್ಕೆ ಒಳಗಾಗಿದ್ದಾರೆ. ತೊಗರಿ, ಹತ್ತಿ, ಶೇಂಗಾ, ಹೆಸರು, ಉದ್ದು, ಬಿತ್ತಿದ ರೈತರು ಮಳೆ ಇಲ್ಲದೆ ಒಣಗಿ ಹೋಗುತ್ತಿರುವುದನ್ನು ನೋಡಿ ರೈತರು ಕಣ್ಣೀರು ಸುರಿಸುವಂತಾಗಿದೆ. ಸರ್ಕಾರ ಈ ಕೂಡಲೇ ಆರ್ಥಿಕ ಹಾನಿ ವರದಿಗಾಗಿ ಕಾಯದೆ ತಕ್ಷಣ ಮಧ್ಯಂತರ ಬರ ಪರಿಹಾರ ಘೋಷಿಸಿ, ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ವೇಳೆ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಕಲವಾರ, ನರಸಿಂಹಲು ಗಂಗನೋಳ, ರಾಮುಲು ಕೊಡಗಂಟಿ, ಕಾಶಪ್ಪ ಮನ್ನೆ, ರಾಜು ಪುರು?ೆÆÃತ್ತಮ, ಮಲ್ಲಿಕಾರ್ಜುನ ಚೆಪೆಟ್ಲಾ, ಅಯಾಝ್ ಅಲಿ, ವೀರೇಶ್ ಪಸ್ಪುಲ್, ವಿಜಯಕುಮಾರ್ ಕೊಂಕಲ, ಹುಸೇನ್ ಚಂಡರಕಿ, ನಾಗೇಶ್ ಮಡೆಪಲ್ಲಿ, ದೇವು ಪರಮೇಶ್ ಪಲ್ಲಿ, ಬಾಬು ದೊರೆ ತಾತಳಗೇರಾ, ಚಾಂದ್ ಕಾಕಲವಾರ, ಹನುಮೇಶ, ಶರಣಪ್ಪ, ಜಗಪ್ಪ ಇತರರಿದ್ದರು.