ಬರ ಪೀಡಿತ ತಾಲೂಕು ೂಷಣೆಗೆ ಒತ್ತಾಯಿಸಿ ಸೇಡಂನಲ್ಲಿ ಕರವೇ ಕಾರ್ಯಕರ್ತರು ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಿದರು. ರಾಮಚಂದ್ರ ಗುತ್ತೇದಾರ್, ಮಹೇಶ ಪಾಟೀಲ್, ದೇವು ನಾಟೀಕಾರ, ಚಂದ್ರಶೇಖರ ಪೂಜಾರಿ, ಭೀಮಯ್ಯ ಗುತ್ತೇದಾರ್, ಪ್ರವಿಣ ಕೋಡ್ಲಾ, ಗುಂಡಪ್ಪ ಪೂಜಾರಿ, ಚಂದ್ರಶೇಖರ ಮಡಿವಾಳ ಇದ್ದರು.
- ಸೇಡಂನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಅರೆಬೆತ್ತಲೆ ಮೆರವಣಿಗೆ
ಸೇಡಂ: ಮುಂಗಾರು ಮಳೆ ಬಾರದಿರುವುದರಿಂದ ರೈತರು ಕಂಗಾಲಾಗಿದ್ದು, ಹೊಲದಲ್ಲಿ ಬಿತ್ತನೆ ಕಾರ್ಯ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಬರ ಪೀಡಿತ ತಾಲೂಕು ೂಷಣೆ ಮಾಡಿ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ಹೇಳಿದರು.
ಕೃಷಿ ಕಚೇರಿಯಿಂದ ಪ್ರಜಾಸೌಧದವರೆಗೆ ಸೋಮವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಬಳಿಕ ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ್ ನಾಗನಾಥ ತರಗೆ ಅವರಿಗೆ ಮನವಿಪತ್ರ ಸಲ್ಲಿಸಿ, ಈ ಭಾರಿ ಜುಲೈ ಅರ್ಧ ತಿಂಗಳು ಕಳೆದರೂ ಮಳೆರಾಯ ಕೃಪೆ ತೋರಿಲ್ಲ. ಎಲ್ಲೆಡೆ ಬರದ ಪರಿಸ್ಥಿತಿ ಸೃಷ್ಟಿಯಾಗಿದೆ. ಹಳ್ಳ, ಕೊಳ್ಳಗಳಲ್ಲಿ ನೀರು ಖಾಲಿಯಾಗಿ ಜನ&ಜಾನುವಾರುಗಳು ಕುಡಿವ ನೀರಿಗೂ ಪರಿತಪಿಸುವಂತಾಗಿದೆ. ಮಳೆ ಕೈಕೊಟ್ಟಿದರಿಂದ ಹೆಸರು, ಉದ್ದು, ತೊಗರಿ ಹಾಳಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ನಿರ್ಧಾರ ಕೈಗೊಂಡು ಕಲ್ಯಾಣ ಕರ್ನಾಟಕ ಅದರಲ್ಲೂ ಸೇಡಂ ತಾಲೂಕು ಬರಪಿಡೀತ ಪ್ರದೇಶವೆಂದು ೂಷಣೆ ಮಾಡುವಂತೆ ಒತ್ತಾಯಿಸಿದರು.
ಪ್ರಮುಖರಾದ ಮಹೇಶ ಪಾಟೀಲ್, ದೇವು ನಾಟೀಕಾರ, ಚಂದ್ರಶೇಖರ ಪೂಜಾರಿ, ಭೀಮಯ್ಯ ಗುತ್ತೇದಾರ್, ಪ್ರವಿಣ ಕೋಡ್ಲಾ, ಗುಂಡಪ್ಪ ಪೂಜಾರಿ, ಚಂದ್ರಶೇಖರ ಮಡಿವಾಳ, ರಾವೇಂದ್ರ ಹೂಡಾ, ಕಿರಣ ಪಾಟೀಲ್, ಪವನ ಕುಲಕರ್ಣಿ, ರಾಜು ಗುತ್ತೇದಾರ್, ಸೋಮಶೇಖರ ಯಂಪಳ್ಳಿ, ಶ್ರೀಕಾಂತ ಹೊಸಮನಿ, ಮಹೇಶರೆಡ್ಡಿ, ಅಂಜಿಲಪ್ಪ ಬೋಯಿನ್, ಬಾಪುಗೌಡ, ರಾವೇಂದ್ರ ಮುನ್ನೂರ, ಶಿವರಾಯ ಮಡಿವಾಳ, ಲಚಮಪ್ಪ, ಮಹಾದೇವ ಗುತ್ತೇದಾರ್, ಭೀಮರಾಯ, ಭಗವಂತು, ಮಹೇಶ ಶೇಖ್ಅಹ್ಮದ್, ರಾಯಪ್ಪ ಯಾದವ್ ಇತರರಿದ್ದರು.