ಡಾ.ಬಿ.ಜಿ.ಪಾಟೀಲ್​  
ರಾಜ್ಯ

ಎಲ್ಲ ತಾಲೂಕು ಬರಪೀಡಿತ ಘೋಷಿಸಿ

ಪ್ರಮುಖ ಮುಖ್ಯಾಂಶಗಳು

  • ಎಂಎಲ್​ಸಿ ಡಾ.ಬಿ.ಜಿ.ಪಾಟೀಲ್​ ಒತ್ತಾಯ
  • ಕಲ್ಯಾಣ ಕರ್ನಾಟಕ ರೈತರಿಗೆ ಕಾಂಗ್ರೆಸ್​ ಸರ್ಕಾರ ಹೊಡೆತ
ಕಲಬುರಗಿ: ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಘೋಷಿಸುವಲ್ಲಿ ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಭಾರಿ ಹೊಡೆತ ನೀಡಿದೆ ಎಂದು ವಿಧಾನ ಪರಿಷತ್​ ಹಿರಿಯ ಸದಸ್ಯ ಡಾ.ಬಿ.ಜಿ.ಪಾಟೀಲ್​ ಕಿಡಿಕಾರಿದ್ದಾರೆ.
ಬೀದರ್​, ಕಲಬುರಗಿ ಮತ್ತು ಯಾದಗಿರಿ ಸೇರಿ ಎಲೆಡೆ ಮಳೆ ತೀವ್ರ ಕೊರತೆ ಇದ್ದು, ಸರಿಯಾಗಿ ಬಿತ್ತನೆ ಆಗದ ಮತ್ತು ಬಿತ್ತಿದ ಬಳಿಕ ಬೆಳೆಗಳು ಒಣಗಿರುವ ಕಲಬುರಗಿ ಜಿಲ್ಲೆಯ ಒಂದೂ ತಾಲೂಕು ಬರಪೀಡಿತ ಘೋಷಿಸಿಲ್ಲ. ಯಾದಗಿರಿ ಜಿಲ್ಲೆ ಶಹಾಪುರ ಮಾತ್ರ ಬರದ ಪಟ್ಟಿಗೆ ಸೇರಿಸಿದ್ದು ಅಚ್ಚರಿ ಮೂಡಿಸಿದೆ. ಆಯಾ ಜಿಲ್ಲೆ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಇಲ್ಲಿನ ಗಂಭೀರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ಸರ್ಕಾರ ತೋರಿಸಿಕೊಟ್ಟಿದೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಇಡೀ ಕಕ ಬರಪೀಡಿತ ಘೋಷಿಸಬೇಕು. ಬೆಳೆ ಹಾನಿಯಾಗಿ ತೊಂದರೆ ಸಿಲುಕಿರುವ ರೈತರಿಗೆ ಸೂಕ್ತ ಪರಿಹಾರ ವಿತರಿಸಲು ವಿಶೇಷ ಪ್ಯಾಕೇಜ್​ ನೀಡಬೇಕು. ಕಲಬುರಗಿ-ಯಾದಗಿರಿ ಜಿಲ್ಲೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಡಾ.ಪಾಟೀಲ್​ ಆಗ್ರಹಿಸಿದ್ದಾರೆ.
"

ಕಲಬುರಗಿ-ಯಾದಗಿರಿ, ಬೀದರ್​ ಜಿಲ್ಲೆಗಳಲ್ಲಿ ಸರಿಯಾಗಿ ಮಳೆ ಬಂದಿಲ್ಲ, ಬಿತ್ತನೆ ಆಗಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ಮಳೆ ಅಭಾವವಿದ್ದರೂ ಬರಪೀಡಿತ ಘೋಷಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ತಕ್ಷಣವೇ ಬರ ಘೋಷಿಸಿ ಪರಿಹಾರ ಕೆಲಸ ಆರಂಭಿಸಿ ಜನರು ಮತ್ತು ರೈತರ ನೆರವಿಗೆ ಧಾವಿಸಬೇಕು.

— > ಡಾ.ಬಿ.ಜಿ.ಪಾಟೀಲ್​ ವಿಧಾನ ಪರಿಷತ್​ ಸದಸ್ಯ