decision by the prison 
ರಾಜ್ಯ

ದಕ್ಷಿಣ ರಾಜ್ಯಗಳ ಕಾರಾಗೃಹ ಆಡಳಿತ ಬಲಪಡಿಸಲು ನಿರ್ಧಾರ

ಪ್ರಮುಖ ಮುಖ್ಯಾಂಶಗಳು

  • ಎಪಿಸಿಎ ಸದಸ್ಯರ ಮಂಡಳಿ ಸಭೆ

ಬೆಂಗಳೂರು:

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಆಡಳಿತ ಇನ್ನಷ್ಟು ಪರಿಣಾಮಕಾರಿಯಾಗಿಸಲು ಹಾಗೂ ಅಧಿಕಾರಿಗಳ ತರಬೇತಿ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಶುಕ್ರವಾರ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಡಿಜಿಪಿ ಆಲೋಕ್ ಕುಮಾರ್ ನೇತೃತ್ವದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪ್ರಧಾನ ಕಚೇರಿಯಲ್ಲಿ ಅಕಾಡೆಮಿ ಎಪಿಸಿಎ) ಸದಸ್ಯರ (ಎಪಿಸಿಎ)ುಂಡಳಿ ಸಭೆ ನಡೆಸಿರು. ಸಭೆಯಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ೊಲೀಸ್ ಮಹಾನಿರ್ದೇಶಕರು ಹಾಗೂ ಕೇಂದ್ರ ಗೃಹ ಸಚಿವಾಲಯದ ಪ್ರತಿನಿಧಿಗಳು ಭಾಗವಹಿಸಿದರು.
ತಮಿಳುನಾಡಿನ ವೆಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಪಿಸಿಎ ಸಂಸ್ಥೆಯು ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ ಕಾರಾಗೃಹ ಅಧಿಕಾರಿಗಳಿಗೆ ತರಬೇತಿ ನೀಡುತ್ತಿರುವ ಪ್ರಮುಖ ಸಂಸ್ಥೆಯಾಗಿದೆ.
ನಗರದ ಕೇಂದ್ರ ಕಚೇರಿಗೆ ದಕ್ಷಿಣ ಆಫ್ರಿಕಾದ ಕಾರಾಗೃಹಗಳ ಅಧ್ಯಯನ ತಂಡ ಭೇಟಿ ಬಳಿಕ ದೊರೆತ ಅನುಭವಗಳ ಆಧಾರದ ಮೇಲೆ ರಾಜ್ಯಗಳ ಕಾರಾಗೃಹಗಳಲ್ಲಿ ಸುಧಾರಣಾ ಚಟುವಟಿಕೆ ಜಾರಿಗೊಳಿಸಲು ಕೇಂದ್ರ ಗೃಹ ಸಚಿವಾಲಯ ಹಾಗೂ ದಕ್ಷಿಣ ರಾಜ್ಯಗಳಿಗೆ ಸಮಗ್ರ ಶಿಫಾರಸ್ಸು ಸಲ್ಲಿಸಲು ತೀರ್ಮಾನಿಸಲಾಯಿತು.
ಇದರ ಜತೆಗೆ, ಕಾರಾಗೃಹ ಸಂಬಂಧಿತ ಸಂಶೋಧನಾ ಚಟುವಟಿಕೆಗಳಿಗೆ ಎಪಿಸಿಎಯನ್ನು ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿ ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಳ್ಳಲಾಯಿತು. ದಕ್ಷಿಣ ರಾಜ್ಯಗಳ ಅಧಿಕಾರಿಗಳಿಗೆ ಮಾತ್ರವಲ್ಲದೆ ದೇಶದ ಇತರ ಭಾಗಗಳ ಕಾರಾಗೃಹ ಅಧಿಕಾರಿಗಳಿಗೂ ಇಲ್ಲಿ ತರಬೇತಿ ನೀಡುವ ವ್ಯವಸ್ಥೆ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಬದಲಾಗುತ್ತಿರುವ ಕಾರಾಗೃಹ ಆಡಳಿತ ವ್ಯವಸ್ಥೆ, ಹೊಸ ಸವಾಲುಗಳು ಹಾಗೂ ಸುಧಾರಣಾ ಅಗತ್ಯಗಳಿಗೆ ಅನುಗುಣವಾಗಿ ಅಧಿಕಾರಿಗಳ ತರಬೇತಿಯ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.