ಆಹಾರ ಇಲಾಖೆ  
ರಾಜ್ಯ

ಆಹಾರ ಧಾನ್ಯಗಳ ಟೆಂಡರ್ ಪ್ರಕ್ರಿಯೆ ಜಿಲ್ಲಾ ಮಟ್ಟಕ್ಕೆ ವಿಕೇಂದ್ರೀಕರಿಸಿ: ಎಂ.ಕನಗವಲ್ಲಿಗೆ ಪ್ರಸ್ತಾವನೆ- food grains tender

ಬೆಂಗಳೂರು: ಆಹಾರ ಇಲಾಖೆಯಲ್ಲಿ ಪಡಿತರ ಧಾನ್ಯಗಳ ಸಾಗಾಣಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವಂತೆ ಆಹಾರ ಇಲಾಖೆಯ ಕಾರ್ಯದರ್ಶಿ ಎಂ.ಕನಗವಲ್ಲಿಗೆ, ಜಂಟಿ ನಿರ್ದೇಶಕ (ಐಟಿ ಜಾಗೃತಿ) ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪ್ರಸ್ತುತ ಇರುವ ಕೇಂದ್ರೀಕೃತ ಟೆಂಡರ್ ವ್ಯವಸ್ಥೆ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳಿಗೆ ಟೆಂಡರ್ ಅಧಿಕಾರ ನೀಡಿರುವ ಸಂಬಂಧಿಸಿದಂತೆ ಕೆಲವು ಮುಖ್ಯ ಅಂಶಗಳನ್ನು ಉಲ್ಲೇಖಿಸಿರುವ ಜಂಟಿ ನಿರ್ದೇಶಕರು, ಮುಖ್ಯ ಲೆಕ್ಕಾಧಿಕಾರಿಗಳನ್ನು ಟೆಂಡರ್ ಆಹ್ವಾನಿಸುವ ಪ್ರಾಧಿಕಾರ ಎಂದು ನೇಮಿಸುವುದು ಆರ್ಥಿಕ ಇಲಾಖೆಯ ಆದೇಶಕ್ಕೆ ವಿರುದ್ಧವಾಗಿದೆ. ಒಂದೇ ಶಾಖೆಯು ಟೆಂಡರ್ ಕರೆದು, ಅದನ್ನು ಪರಿಶೀಲಿಸಿ ಬಿಲ್ ಪಾವತಿಸುವುದು ‘ಹಿತಾಸಕ್ತಿ ಸಂಘರ್ಷ’ಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
2026ರ ಡಿಸೆಂಬರ್‌ಗೆ ಪ್ರಸ್ತುತ ಸಗಟು, ಚಿಲ್ಲರೆ ಸಾಗಾಣಿಕೆ ಟೆಂಡರ್ ಅವಧಿ ಮುಕ್ತಾಯವಾಗಲಿದೆ. 2027ರ ಜನವರಿಯಿಂದ ಹೊಸ ಆದೇಶ ಜಾರಿಯಾಗಬೇಕಿದೆ. ಪ್ರಸ್ತುತ ಕೇಂದ್ರೀಕೃತ ವ್ಯವಸ್ಥೆಯಿಂದ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು, ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸಬೇಕಾದ ಸನ್ನಿವೇಶ ಎದುರಾಗಿದೆ.ಹಾಗಾಗಿ,ಟೆಂಡರ್ ಪ್ರಕ್ರಿಯೆಯನ್ನು ಜಿಲ್ಲಾ ಮಟ್ಟಕ್ಕೆ ವಿಕೇಂದ್ರೀಕರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಯಾ ಜಿಲ್ಲೆಗಳ ಡಿಸಿ, ಎಡಿಸಿ, ಇಲಾಖೆಯ ಜಂಟಿ ಮತ್ತು ಉಪ ನಿರ್ದೇಶಕರನ್ನು ಟೆಂಡರ್ ಆಹ್ವಾನಿಸುವ ಪ್ರಾಧಿಕಾರಕ್ಕೆ ನೇಮಿಸಬೇಕು. ಈ ರೀತಿ ವಿಕೇಂದ್ರೀಕರಣ ಮಾಡುವುದರಿಂದ ಟೆಂಡರ್ ಪ್ರಕ್ರಿಯೆ ಸುಗಮವಾಗಿ ನಡೆಯುವ ಮಾತ್ರವಲ್ಲದೆ ನ್ಯಾಯಾಲಯದ ದಾವೆಗಳನ್ನು ತ್ವರಿತವಾಗಿ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಜಂಟಿ ನಿರ್ದೇಶಕರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.