Death due to phone call chaos? 
ರಾಜ್ಯ

ಪೋನಿನಲ್ಲಿ ಕರೆ ಗಲಾಟೆಯಲ್ಲಿ ಸಾವು?

ಗುಡಿಬಂಡೆ: ತಾಲೂಕಿನ ಆರ್​.ಚೊಕ್ಕನಹಳ್ಳಿಯಲ್ಲಿ ಶನಿವಾರ ರಾತ್ರಿ ಅನುಮಾನಾಸ್ಪದವಾಗಿ ಮಹಿಳೆ ಮೃತಪಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪೋನಿನಲ್ಲಿ ಮಾತನಾಡುವ ವಿಷಯಕ್ಕೆ ಪತಿ&ಪತ್ನಿ ನಡುವೆ ಉಂಟಾದ ಕಲಹದಲ್ಲಿ ಪತ್ನಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ವರಲ್ಮ(25) ಮೃತೆ. ಪ್ರಕರಣ ಸಂಬಂಧ ಪತಿ ಗಂಗರಾಜುನನ್ನು ಪೆರೇಸಂದ್ರ ಪೊಲೀಸರು ಬಂಧಿಸಿದ್ದು, ಒಟ್ಟು ಮೂವರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಏನಿದು ಪ್ರಕರಣ?: ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿ ವ್ಯಾಪ್ತಿಯ ಆರ್​.ಚೊಕ್ಕನಹಳ್ಳಿ ಗಂಗರಾಜು ಮತ್ತು ವರಲ್ಮ ಪ್ರೀತಿಸಿ ವಿವಾಹವಾಗಿದ್ದರು. ಇತ್ತೀಚೆಗೆ ವರಲಕ್ಷ್ಮೀಮ ಫೋನಿಗೆ ಸ್ನೇಹಿತೆಯ ಪ್ರಿಯಕರ ಕರೆ ಮಾಡಿದ್ದ. ಕರೆಯನ್ನು ಪತಿ ಗಂಗರಾಜು ರಿಸಿವ್​ ಮಾಡಿದ್ದ. ಬಳಿಕ ಪ್ರೇಮಿಗಳ ಮಧ್ಯೆ ಮಧ್ಯಸ್ಥಿಕೆ ವಹಿಸಬೇಡ ಎಂದು ಗಂಗರಾಜು ಪತ್ನಿಗೆ ಬುದ್ಧಿ ಹೇಳಿದ್ದಾನೆ. ಆದರೆ, ಶನಿವಾರ ತಡರಾತ್ರಿ ಅಸ್ವಸ್ಥಗೊಂಡಿದ್ದ ಆಕೆಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪತಿ ಪರಾರಿಯಾಗಿದ್ದ.
ಪತ್ನಿಯ ಮೃತ ದೇಹವನ್ನು ಪಡೆಯಲು ಗಂಗರಾಜು ಬಾರದ ಕಾರಣ ವರಲ್ಮ ಪಾಲಕರು ಗಂಗರಾಜು ಮನೆ ಮುಂದೆಯೇ ಅಂತ್ಯಸಂಸ್ಕಾರ ಮಾಡಬೇಕೆಂದು ಪಟ್ಟು ಹಿಡಿದ್ದಿದ್ದರು. ಗಲಾಟೆ ಹೆಚ್ಚಾದ ಬೆನ್ನಲ್ಲೇ ಪೆರೇಸಂದ್ರ ಪೊಲೀಸರು ಮಧ್ಯಪ್ರವೇಶಿಸಿ ಗಂಡನ ಜಮೀನಿನಲ್ಲೆ ಭಾನುವಾರ ರಾತ್ರಿ ಅಂತ್ಯ ಸಂಸ್ಕಾರ ಮಾಡಿಸಿದ್ದಾರೆ.