Death due to drowning in agricultural well 
ರಾಜ್ಯ

ಕೃಷಿ ಹೊಂಡದಲ್ಲಿ ಮುಳುಗಿ ಸಾವು

ಚಿಂತಾಮಣಿ: ತಾಲೂಕಿನ ಗುನ್ನಹಳ್ಳಿಯ ಕೃಷಿ ಹೊಂಡದಲ್ಲಿ ಭಾನುವಾರ ಮಧ್ಯಾಹ್ನ ಈಜಾಡುವಾಗ ವ್ಯಕ್ತಿಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾಲೂಕಿನ ಕೈವಾರ ಹೋಬಳಿ ಮೈಲಾಪುರದ ಜಾಲೇಗೌಡ(40) ಮೃತ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾಲೇಗೌಡ ಕೃಷಿ ಹೊಂಡದಲ್ಲಿ ಈಜಾಡುತ್ತಿದ್ದರು. ನೀರಿನಲ್ಲಿ ಮುಳುಗಿದ ತಂದೆ ಮೇಲಕ್ಕೆ ಎದ್ದೇಳದೇ ಇದ್ದಾಗ ದಡದಲ್ಲಿದ್ದ ಮಕ್ಕಳು ಕೂಗಿಕೊಂಡಿದ್ದಾರೆ.
ಆಗ ಪಕ್ಕದ ತೋಟದಲ್ಲಿದ್ದ ರೈತರು ನೀರಿನಿಂದ ಜಾಲೇಗೌಡ ಅವರನ್ನು ಮೇಲಕ್ಕೆ ಎತ್ತಿದ್ದಾರೆ. ಅಷ್ಟರಲ್ಲಿ ಜಾಲೇಗೌಡ ಮೃತಪಟ್ಟಿದ್ದರು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.