Death after falling into agricultural pit
ಚಿಂತಾಮಣಿ: ಕೃಷಿ ಹೊಂಡದಲ್ಲಿ ಕಾಲು ಜಾರಿಬಿದ್ದು ತಾಲೂಕಿನ ಕೋನಪಲ್ಲಿ ಗ್ರಾಮದ ನಾಗರಾಜು (46) ಮೃತಪಟ್ಟಿದ್ದಾರೆ.
ಶುಕ್ರವಾರ ಸಂಜೆ ಗ್ರಾಮದ ಬಳಿಯ ಪ್ರಭಾಕರ್ ಎಂಬುವವರಿಗೆ ಸೇರಿದ ಕೃಷಿ ಹೊಂಡದಲ್ಲಿ ನಾಗರಾಜ ಕೈಕಾಲು ತೊಳೆಯಲು ಹೋಗಿದ್ದಾಗ ಅವಡ ಸಂಭವಿಸಿದೆ. ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.