ಸವದತ್ತಿ: ಕರ್ನಾಟಕ ಆಡಳಿತ ಸೇವೆಯ ಕಿರಿಯ ಶ್ರೇಣಿ ಅಧಿಕಾರಿ ಪ್ರಭಾವತಿ ಕೀರಪುರ ಅವರನ್ನು ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಪ್ರಸ್ತುತ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ಪ್ರಭಾವತಿ ಕೀರಪುರ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಇದಕ್ಕೂ ಮೊದಲು ಈ ಹುದ್ದೆಯಲ್ಲಿದ್ದ ಡಾ.ಸಿದ್ಧಪ್ಪ ಹುಲ್ಲೋಳಿ ಅವರಿಗೆ ನೀಡಿದ್ದ ಪ್ರಭಾರ ಹಿಂಪಡೆಯಲಾಗಿದೆ. ಪ್ರಭಾವತಿ ೆ.6ರಂದು ಅಧಿಕಾರ ಸ್ವೀಕರಿಸಲಿದ್ದಾರೆ.