ವಿಜಯಪುರದ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಡ್ವಾನ್ಸ್ ಕೇರ್ ಪ್ಲಾೃನಿಂಗ್ ಫಾರ್ ಅಲಝೈಮರ್ಸ್ ಡಿಸೀಸ್ ಆ್ಯಂಡ್ ಡೆಮೆನ್ಶಿಯಾ ಕೃತಿಯನ್ನು ವೈ.ಎಂ. ಜಯರಾಜ ಬಿಡುಗಡೆಗೊಳಿಸಿದರು. ಅರುಣ ಇನಾಮದಾರ, ತೇಜಸ್ವಿನಿ ವಲ್ಲಭ, ಆನಂದ ಅಂಬಲಿ ಮತ್ತಿತರರಿದ್ದರು.
- ಡಾ. ವೈ.ಎಂ. ಜಯರಾಜ್ ಅಭಿಮತ
- ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ
ವಿಜಯಪುರ : ಸ್ಥಳೀಯ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ಸೃ್ ವಿಭಾಗ ಮತ್ತು ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಅಂಡ್ ರಿಸರ್ಚ್ ಸೆಂಟರ್‌ನ ಫಾರ್ಮ್-ಡಿ ವಿಭಾಗದ ಪ್ರಕಟಿಸಿದ ಅಡ್ವಾನ್ಸ್ ಕೇರ್ ಪ್ಲಾೃನಿಂಗ್ ಫಾರ್ ಅಲಝೈಮರ್ಸ್ ಡಿಸೀಸ್ ಆ್ಯಂಡ್ ಡೆಮೆನ್ಶಿಯಾ ಕೃತಿಯನ್ನು ಬಿಲ್ಡಿಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ್ ಗುರುವಾರ ಬಿಡುಗಡೆಗೊಳಿಸಿದರು.
ನಗರದ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಲಝೈಮರ್ಸ್ ಕಾಯಿಲೆ ಮತ್ತು ಡಿಮೆನ್ಶಿಯಾ ಪೀಡಿತರ ಆರೈಕೆಯಲ್ಲಿ ತೊಡಗಿರುವ ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ರೋಗಿಗಳ ಆರೈಕೆದಾರರಿಗೆ ಈ ಪುಸ್ತಕ ಅತ್ಯಂತ ಉಪಯುಕ್ತವಾಗಲಿದೆ. ಡಿಮೆನ್ಶಿಯಾ ಆರೈಕೆಯಲ್ಲಿ ಬಳಸಲಾಗುವ ಮೂಲಭೂತ ಮಾಹಿತಿಯಿಂದ ಹಿಡಿದು ಆಧುನಿಕ ತಂತ್ರಜ್ಞಾನ ಮತ್ತು ಸಾಧನಗಳವರೆಗೆ ಸಮಗ್ರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ ಎಂದು ಅವರು ತಿಳಿಸಿದರು.
ಕೃತಿಯ ಲೇಖಕ ಮತ್ತು ಜೆರಿಯಾಟ್ರಿಕ್ಸೃ್ ವಿಭಾಗದ ಮುಖ್ಯಸ್ಥ ಡಾ. ಆನಂದ ಅಂಬಲಿ, ಫಾರ್ಮ್-ಡಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಸಿದ್ಧಾರೂಢ ಬಿರಾದಾರ ಹಾಗೂ ಕ್ಲಿನಿಕಲ್ ರಿಸರ್ಚ್ ಫೆಲೋ ಡಾ. ಬಸವರಾಜ ಅವರ ಕಾರ್ಯವನ್ನು ಶ್ಲಾಘಿಸಿದರು.
ವಿವಿ ಕುಲಪತಿ ಅರುಣ ಇನಾಮದಾರ ಮಾತನಾಡಿ, ಈ ಪುಸ್ತಕ ವಿಜಯಪುರ ಜಿಲ್ಲೆ ಮಾತ್ರವಲ್ಲ ದೇಶ-ವಿದೇಶಗಳಲ್ಲಿರುವ ಅಗತ್ಯವಿರುವ ಜನರಿಗೂ ತಲುಪಬೇಕು. ಮಾನವ ಆಯುಷ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಮೆನ್ಶಿಯಾ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜೆರಿಯಾಟ್ರಿಕ್ಸ್ ಮತ್ತು ಫಾರ್ಮ್- ಡಿ ವಿಭಾಗಗಳು ಅಗತ್ಯವಿರುವ ಕುಟುಂಬಗಳಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂಲಕ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಒದಗಿಸಲಿವೆ ಎಂದರು.
ವಿವಿ ಕುಲಸಚಿವ ಆರ್.ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ್ ತೇಜಸ್ವಿನಿ ವಲ್ಲಭ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಶೆಟ್ಟಿ, ನಿರ್ದೇಶಕ ಆರ್.ಬಿ. ಕೊಟ್ನಾಳ, ಉಪ ಪ್ರಾಚಾರ್ಯ ವಿಜಯಕುಮಾರ ಕಲ್ಯಾಣಪಗೋಳ, ವೈದ್ಯಕೀಯ ಅಧೀಕ್ಷಕ ಎಸ್.ಎನ್. ಬೆಂಟೂರ, ಐಕ್ಯೂಎಸಿ ನಿರ್ದೇಶಕಿ ಸುಮಂಗಲಾ ಪಾಟೀಲ, ಸಹಾಯಕ ವೈದ್ಯಕೀಯ ಅಧೀಕ್ಷಕ ರವಿ ಬಿರಾದಾರ, ಉಪಕುಲಸಚಿವ ಸತೀಶ ಪಾಟೀಲ ಮತ್ತಿತರರಿದ್ದರು.