DK SHIVAKUMAR 
ರಾಜ್ಯ

5 ಜಿಬಿಎಗಳಲ್ಲಿಯೂ ಪಕ್ಷ ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕರ್ತರ ಜೊತೆಯಲ್ಲಿ ವಿಶ್ವಾಸರ್ಹ ಸಂಪರ್ಕ ಸಾಧಿಸಿ
  • ಆಡಳಿತ ವ್ಯವಸ್ಥೆ ಕ್ರೀಯಾಶೀಲವಾಗಿಡುವ ಕೆಲಸ ಆಗಬೇಕು
ಬೆಂಗಳೂರು:
ಮುಂಬರುವ ಜಿಬಿಎ ಚುನಾವಣೆಯಲ್ಲಿ 5 ಜಿಬಿಎಗಳಲ್ಲಿಯೂ ಕಾಂಗ್ರೆಸ್ ಆಳ್ವಿಕೆಯೇ ಬರುವಂತೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಮುಖಂಡರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ನಾಯಕರುಗಳ ಜೊತೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ, ಕಾರ್ಯಕರ್ತರ ಜೊತೆಯಲ್ಲಿ ವಿಶ್ವಾಸರ್ಹ ಸಂಪರ್ಕ ಸಾಧಿಸಿ. ಆ ಮೂಲಕ ಜನ ಸಾಮಾನ್ಯರ ನಡುವೆ ಕೆಲಸ ಮಾಡಲು ಮುಂದಾಗಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.
ನೋಡ ನೋಡುತ್ತಿದ್ದಂತೆಯೇ ಜಿಬಿಎ ಚುನಾವಣೆ ಬರಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚುನಾವಣಾ ಆಯೋಗ ಸಭೆಯನ್ನು ಮಾಡಿದೆ. ಜಿಬಿಎ ರಚನೆಯಾದ ಬಳಿಕ ಮೊಟ್ಟ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿರುವ ಕಾರಣ ಇದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ. ಆದುದರಿಂದ ಮುಖಂಡರು ಮತ್ತು ಕಾರ್ಯಕರ್ತರು ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಸಿಎಂ ಜೊತೆಗೆ ಹಲವು ಸುತ್ತಿನ ಸಭೆಯಲ್ಲಿ ಭಾಗಿಯಾಗಿರುವ ಡಿಸಿಎಂ, ಹೊಸದಾಗಿ ಜಾರಿಗೆ ತಂದಿರುವ ಜಿಬಿಎ ಲೋಪ ದೋಷಗಳನ್ನು ಸರಿಪಡಿಸಲು ಕ್ರಮ ವಹಿಸಿದ್ದಾರೆ. ಈ ನಿಟ್ಟಿನಲ್ಲಿ 5 ಜಿಬಿಎ ಆಯುಕ್ತರುಗಳ ಜೊತೆಗೆ ಆಗಿಂದಾಗ್ಗೆ ಸಂಪರ್ಕದಲ್ಲಿರುವ ಡಿಸಿಎಂ, ಏನೇ ಹೊಸ ಯೋಜನೆಗಳಿದ್ದರೂ ಅದನ್ನು ಕೂಡಲೇ ಕಾರ್ಯಗತ ಮಾಡಲು ಮುಂದಾಗಬೇಕು. ಮತ್ತು ಈ ಸರ್ಕಾರ ಕೆಲಸ ಮಾಡುತ್ತಿದೆ ಎನ್ನುವುದನ್ನು ತೋರಿಸಲು ಇಡೀ ಆಡಳಿತ ವ್ಯವಸ್ಥೆ ಕ್ರೀಯಾಶೀಲವಾಗಿಡುವ ಕೆಲಸ ಆಗಬೇಕು ಎಂದು ಸೂಚಿಸಿದ್ದಾರೆ ಎಂದು ಡಿಸಿಎಂ ಆಪ್ತ ಮೂಲಗಳು ತಿಳಿಸಿವೆ.

*ಜಿಬಿಎ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು 5 ಜಿಬಿಎಗಳಲ್ಲಿಯೂ ಕಾಂಗ್ರೆಸ್ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ