ಬೆಂಗಳೂರಿನಲ್ಲಿ ಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿದ ಡಾ.ಪ್ರಣವಾನಂದ ಸ್ವಾಮೀಜಿ ಮಾತುಕತೆ ನಡೆಸಿದರು. ಚಿತ್ತಾಪುರ ರಾಂಪುರ ಹಳ್ಳಿಯ ಭಗೀರಥಾನಂದ ಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಬಾಗಲಕೋಟೆಯ ಶ್ರೀ ಮಹಾಂತ ಮಹಾಸ್ವಾಮೀಜಿ ಇದ್ದರು. 
ರಾಜ್ಯ

ಅತಿ ಹಿಂದುಳಿದವರ ನಿಯೋಗಕ್ಕೆ ಡಿಸಿಎಂ ಭರವಸೆ

ಪ್ರಮುಖ ಮುಖ್ಯಾಂಶಗಳು

  • ನಾರಾಯಣ ಗುರು ಶಕ್ತೀಪಿಠದ ಡಾ.ಪ್ರಣವಾನಂದ ಶ್ರೀ ಆರೋಪ
  • ಡಿಕೆಶಿ ಪರ ನಿಂತವರ ವಿರುದ್ಧ ಸಿಎಂ ಟಾರ್ಗೆಟ್​
ಕಲಬುರಗಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪರವಾಗಿರುವವರನ್ನು ಗುರುತಿಸಿ ಸಿಎಂ ಸಿದ್ದರಾಮಯ್ಯ ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
ಬೆಂಗಳೂರಿನಲ್ಲಿ ಇತ್ತೀಚಿಗೆ ಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರನ್ನು ಅವರ ಸ್ವಗೃಹದಲ್ಲಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಅವರನ್ನು ಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಜತೆ ಭೇಟಿಯಾಗಿ ಸಮುದಾಯದ ಬೇಡಿಕೆ ಸಲ್ಲಿಸಲಾಗಿತ್ತು. ಇದರಿಂದ ಸಿಎಂ ಸಿದ್ದರಾಮಯ್ಯ ಅವರು ಅತಿ ಹಿಂದುಳಿದ ಸ್ವಾಮೀಜಿಗಳು ಹಾಗೂ ಸಮುದಾಯವನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅತಿ ಹಿಂದುಳಿದ ವರ್ಗಗಳಿಗೆ ಬಜೆಟ್​ನಲ್ಲಿ ಅನುದಾನ ೂಷಣೆ ಮಾಡಲಿಲ್ಲ . ರಾಜ್ಯಾದ್ಯಂತ 700 ಕೀ.ಮೀ. ಪಾದಯಾತ್ರೆ ಮಾಡಿ ಈಡಿಗ, ಬಿಲ್ಲವರ ಬೇಡಿಕೆಗಳಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್​ನಲ್ಲಿ ನಿರಶನ ಮಾಡಿದ ಹೋರಾಟಗಾರರೊಂದಿಗೆ ಸಂಧಾನ ನಡೆಸಲು ಸಚಿವ ಶಿವರಾಜ ತಂಗಡಗಿ ಅವರನ್ನು ಕಳುಹಿಸಿ ಚರ್ಚಿಸಿ ಮುಷ್ಕರ ಹಿಂತೆ ತೆಗೆದುಕೊಳ್ಳುವಂತೆ ಮಾಡಿದ್ದರು. ಆದರೆ ಮುಖ್ಯಮಂತ್ರಿಗಳು ನಂತರ ಸೌಜನ್ಯಕ್ಕಾದರೂ ಭೇಟಿಗೆ ಅವಕಾಶ ನೀಡದೆ ಬಜೆಟ್​ನಲ್ಲಿ ಅತಿ ಹಿಂದುಳಿದ ಸಮುದಾಯದ ನಿಗಮಗಳಿಗೆ ಅನುದಾನ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಕೈ ಹೈಕಮಾಂಡ್​ ಭೇಟಿಗೆ ನಿರ್ಧಾರ
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಒತ್ತಾಯಿಸುತ್ತಿಲ್ಲ. ಹೈಕಮಾಂಡ್​ ಸಮ್ಮುಖದಲ್ಲಿ ಎರಡು ವರ್ಷಗಳ ಸ್ಥಾನ ಹಂಚಿಕೆ ಪ್ರಕಾರ ಡಿಕೆ ಅವರಿಗೆ ಸ್ಥಾನ ಸಿಗಲಿ ಎಂದಷ್ಟೇ ಹೇಳಿದರೂ ಸಿಎಂ ನಮ್ಮೆಲ್ಲರನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. ಡಿಕೆ ಪಕ್ಕಾಗಿ ಮಾಡಿದ ತ್ಯಾಗ ಹಾಗೂ ಅಹರ್ನಿಶಿ ದುಡಿಮೆಯನ್ನು ಹೈಕಮಾಂಡ್​ ಗೌರವಿಸಬೇಕು. ಅದಕ್ಕಾಗಿ ಒಂದು ವಾರದಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಭೇಟಿ ಮಾಡಲು ಅತಿ ಹಿಂದುಳಿದ ಸ್ವಾಮೀಜಿಗಳ ನಿಯೋಗ ದೆಹಲಿಗೆ ತೆರಳಲಿದ್ದು, ಕೆ.ಸಿ.ವೇಣುಗೋಪಾಲ್​ ಜತೆ ಚರ್ಚಿಸಲು ಈಗಾಗಲೇ ದೂರವಾಣಿ ಮೂಲಕ ಮಾತನಾಡಿ ನಿರ್ಧರಿಸಲಾಗಿದೆ ಎಂದರು.
ಡಿಕೆ ಭರಪೂರ ಭರವಸೆ
ಅತಿ ಹಿಂದುಳಿದ ಸ್ವಾಮೀಜಿಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲರಾಗಿದ್ದು, ಸ್ವಾಮೀಜಿಗಳಿಗೆ ಬೆಂಗಳೂರಿನಲ್ಲಿ ಶ್ರೀ ನಿವೇಶನ ನೀಡಿ ಗುರು ಮಠ ನಿರ್ಮಾಣ ಕೆಲಸ ಸಕ್ರಿಯಗೊಳಿಸಲಾಗುವುದು. ಮೇನಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಅತಿ ಹಿಂದುಳಿದ ಸ್ವಾಮೀಜಿಗಳ ನೇತೃತ್ವದ ಬೃಹತ್​ ಸಮಾವೇಶ ನಡೆಸಲು ಪೂರ್ಣ ಸಹಕಾರ ನೀಡಲಾಗುವುದು. ಪೂರ್ವಸಿದ್ಧತೆ ಕೈಗೊಳ್ಳುವಂತೆ ಡಿಸಿಎಂ ಡಿ.ಕೆ ಶಿವಕುಮಾರ್​ ಸೂಚನೆ ನೀಡಿದ್ದಾರೆ ಎಂದರು.
ನಿಯೋಗದಲ್ಲಿ ಸಮುದಾಯದ ಜಗದ್ಗುರು ಹಾಗೂ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ರಾಜ್ಯ ಸಮಿತಿ ಉಪಾಧ್ಯ ಚಿತ್ತಾಪುರ ರಾಂಪುರ ಹಳ್ಳಿಯ ಭಗೀರಥಾನಂದ ಸ್ವಾಮೀಜಿ, ಕುಂಬಾರ ಸಮುದಾಯದ ಜಗದ್ಗುರು ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಚಿತ್ರದುರ್ಗ ಹಾಗೂ ಶಿವಸಿಂಪಿ ಸಮುದಾಯದ ಮಂದಾರ ಮಠದ ಶ್ರೀ ಮಹಾಂತ ಮಹಾಸ್ವಾಮೀಜಿ ಬಾಗಲಕೋಟೆ ಜತೆಗಿದ್ದರು.
"

ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಬಹುದಿನಗಳ ಬೇಡಿಕೆಯಂತೆ ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಪ್ರತಿಷ್ಠಾಪನೆಗೆ ನಿವೇಶನ ನೀಡಲು ಸಮ್ಮತಿಸಿದ್ದು, ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಸಂಪುಟ ಪುನಾರಚನೆಯ ವೇಳೆ ಬೇಳೂರು ಗೋಪಾಲಕೃಷ್ಣ ಅವರಿಗೆ ಈಡಿಗ ಕೋಟಾದಲ್ಲಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್​ ಅಧ್ಯರಾದ ಮಲ್ಲಿಕಾರ್ಜುನ ರ್ಖಗೆಯವರಲ್ಲಿ ಮನವಿ ಮಾಡಲಾಗುವುದು.

ಡಾ.ಪ್ರಣವಾನಂದ ಸ್ವಾಮೀಜಿ,

ಬ್ರಹ್ಮಶ್ರೀ ನಾರಾಯಣಗುರು ಶಕ್ತೀಪಿಠ, ಚಿತ್ತಾಪುರ.