- ಮಾಹಿತಿ ಆಯೋಗ ಕಲಬುರಗಿ ಪೀಠದ ಮಹತ್ವದ ತೀರ್ಪು
ಕಲಬುರಗಿ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್ಸಿಂಗ್ ಮಹತ್ವದ ತೀರ್ಪು ನೀಡಿದ್ದಾರೆ.
ರಾಜಕುಮಾರ ಆಳಂದ ಎನ್ನುವವರು ಮಾಹಿತಿ ಹಕ್ಕು ಅಧಿನಿಯಮ 6(1) ರಡಿ ತಾವು ಕಲಬುರಗಿ, ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಳಂದ ಶಾಖೆಗೆ 2022ರ ಜ.25ರಂದು ಬರೆದ ಪತ್ರದ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಕೋರಿದ್ದರು. ಮೇಲ್ಮನವಿದಾರರು ಕೋರಿದ ಮಾಹಿತಿಗೆ ಸಂಬಂಧಿಸಿದಂತೆ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನ ಆಳಂದ ಶಾಖೆ ವ್ಯವಸ್ಥಾಪಕರು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರವಾದ ಕಲಬುರಗಿ-ಯಾದಗಿರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಪ್ರಧಾನ ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿ ಪತ್ರ ಬರೆದು, ತಮ್ಮ ಬ್ಯಾಂಕ್ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಗಣನೀಯ ಪ್ರಮಾಣದ ಆರ್ಥಿಕ ನೆರವು ಪಡೆದಿಲ್ಲ. ಹೀಗಾಗಿ ತಮ್ಮ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರವಲ್ಲ. ತಾವು ಮಾಹಿತಿ ಹಕ್ಕು ಅಧಿನಿಯಮ 2005ರಡಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಬ್ಯಾಂಕ್ ಬರೆದ ಪತ್ರದಿಂದ ತೃಪ್ತರಾಗದ ಮೇಲ್ಮನವಿದಾರ ರಾಜಕುಮಾರ ಅವರು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ ದ್ವೀತಿಯ ಮೇಲ್ಮನವಿ ಸಲ್ಲಿಸಿದ್ದರು. ದ್ವೀತಿಯ ಮೇಲ್ಮನವಿ ವಿಚಾರಣೆ ಕೈಗೆತ್ತಿಕೊಂಡ ಆಯೋಗ, 2026ರ ಜು.30ರಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್ಸಿಂಗ್ ಮಹತ್ವದ ತೀರ್ಪು ನೀಡಿ ಆದೇಶಿಸಿದ್ದಾರೆ.
ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಸರ್ಕಾರದಿಂದ ಗಣನೀಯ ಪ್ರಮಾಣದಲ್ಲಿ ಆರ್ಥಿಕ ನೆರವು ಪಡೆಯುತ್ತಿಲ್ಲವಾದರೂ ಬ್ಯಾಂಕ್ ವ್ಯವಹಾರ, ಸರ್ಕಾರದ ನಿಯಮ- ನಿರ್ದೇಶನಗಳ ಸೂಚನೆ ಮೇರೆಗೆ ನಡೆಸುತ್ತಿದೆ. ಆದ್ದರಿಂದ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರವಾಗಿದೆ. ಬ್ಯಾಂಕ್ಗೆ ಸರ್ಕಾರದಿಂದ ಷೇರು ಬಂಡವಾಳ ಬಿಡುಗಡೆ ಆಗಿದೆ. ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರದಿಂದ ನೇಮಿಸಲ್ಪಟ್ಟವರಾಗಿರುತ್ತಾರೆ. ಬ್ಯಾಂಕ್ನಲ್ಲಿ ಅಕ್ರಮ ಜರುಗಿದರೆ ಸಹಕಾರ ಇಲಾಖೆ ವತಿಯಿಂದ ಅಧಿಕಾರಿಗಳ ತಂಡ ರಚಿಸಿ ತನಿಖೆಗೊಳಪಡಿಸಿ, ಅದರಲ್ಲಿ ಆರೋಪ ಸಾಬೀತಾದಲ್ಲಿ ಈ ಬ್ಯಾಂಕ್ ಸೂಪರ್ಸೀಡ್ ಮಾಡುವ ಅಧಿಕಾರ ಸರ್ಕಾರ ಹೊಂದಿದೆ. ಬ್ಯಾಂಕ್ಗೆ ಸರ್ಕಾರದಿಂದ ಅಧಿಕಾರೇತರ ಒಬ್ಬ ಸದಸ್ಯ ಹಾಗೂ ಅಧಿಕಾರಿಯೊಬ್ಬರನ್ನು ಆಡಳಿತ ಮಂಡಳಿಗೆ ಸದಸ್ಯರೆಂದು ನಾಮಕರಣ ಮಾಡುತ್ತಿದೆ. ನಬಾರ್ಡ್ನಿಂದ ರೈತರಿಗೆ ವಿತರಿಸಲು ಪ್ರತಿವಾದಿ ಬ್ಯಾಂಕ್ ಸಾಲ ಪಡೆದು ರೈತರಿಗೆ ವಿತರಿಸುವ ಸಾಲದ ಬಡ್ಡಿ ಸರ್ಕಾರವೇ ಪಾವತಿ ಮಾಡುತ್ತಿದೆ. ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಈ ಸಾಲ ಬ್ಯಾಂಕ್ಗೆ ಸರ್ಕಾರವೇ ಪಾವತಿ ಮಾಡುತ್ತಿದೆ. ಹೀಗಾಗಿ ಎಲ್ಲ ಅಂಶಗಳು ಸೇರಿ ಕರ್ನಾಟಕ ಮಾಹಿತಿ ಆಯೋಗದಲ್ಲಿ ದಾಖಲಾದ ಪ್ರಕರಣದ ವಿಚಾರಣೆ ನಡೆಸಿ 2026ರ ಫೆ.9ರಂದು ಹೊರಬಿದ್ದ ತೀರ್ಪು ಆಧರಿಸಿ ಪ್ರತಿವಾದಿ ಕಲಬುರಗಿ&ಯಾದಗಿರ ಡಿಸಿಸಿ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರ ಎಂದು ೂಷಿಸಲಾಗಿದೆ.
ಜುಲೈನಲ್ಲಿ 767 ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡಿದ್ದು ಅದರಲ್ಲಿ ಒಟ್ಟು 526 ಪ್ರಕರಣ ವಿಲೇವಾರಿ ಮಾಡಲಾಗಿದೆ. ಜತೆಗೆ ಮಾಹಿತಿ ನೀಡಲು ರ್ನಿಲಕ್ಷ$್ಯವಹಿಸಿದ ಪ್ರತಿವಾದಿ ಅಧಿಕಾರಿಗಳಿಗೆ ಜುಲೈನಲ್ಲಿ 60 ಸಾವಿರ ರೂ.ದಂಡ ವಿಧಿಸಲಾಗಿದೆ. ಆರು ಜನ ಮೇಲ್ಮನವಿದಾರರಿಗೆ 27 ಸಾವಿರ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ಪಂಚಾಯತ್ರಾಜ್ ಇಂಜನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಕುಮಾರ್ಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ.