ಸುಗೂರ(ಎನ್​) ಗ್ರಾಮಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಭೇಟಿ ನೀಡಿ ಸಿಎಂ ರ್ಕಾಉಕ್ರಮದ ಸ್ಥಳ ಪರಿಶೀಲಿಸಿದರು. ಭಂವರ್​ಸಿಂಗ್​ ಮೀನಾ, ಅಡ್ಡೂರು ಶ್ರೀನಿವಾಸುಲು, ರಾಯಪ್ಪ ಹುಣಸಗಿ ಇತರರಿದ್ದರು. 
ರಾಜ್ಯ

ಸಿಎಂ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಡಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಸುಗೂರ (ಎನ್​) ಗ್ರಾಮದಲ್ಲಿ 11ರಂದು ಭೋಜಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ
ನಾಲವಾರ: ಸುಗೂರ (ಎನ್​) ಗ್ರಾಮದಲ್ಲಿ ಏ.11ರಂದು ನಡೆಯಲಿರುವ ಸ್ವಯಂಸಿದ್ಧ ಭೋಜಲಿಂಗೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದು, ಅಚ್ಚುಕಟ್ಟಾದ ಕಾರ್ಯಕ್ರಮ ಕುರಿತ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಪರಿಶೀಲಿಸಿದರು.
ಶುಕ್ರವಾರ ಸುಗೂರ (ಎನ್​) ಗ್ರಾಮದ ಭೋಜಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ, ಪೀಠಾಧಿಪತಿ ಶ್ರೀ ಹಿರಗಪ್ಪ ತಾತಾ ಹಾಗೂ ದೇವಸ್ಥಾನದ ಸಮಿತಿ, ಗ್ರಾಮದ ಮುಖಂಡರೊಂದಿಗೆ ಕಾರ್ಯಕ್ರಮದ ಮಾಹಿತಿ ಪಡೆದರು. ನೂತನ ಬೆಳ್ಳಿ ರಥದ ಲೋಕಾರ್ಪಣೆ ಹಾಗೂ ಕಲ್ಯಾಣ ಮಂಟಪ ಉದ್ಘಾಟನೆ ಸ್ಥಳವನ್ನು ಪರಿಶೀಲಿಸಿದರು. ಸೇರುವ ಭಕ್ತರ ಸಂಖ್ಯೆ, ಭದ್ರತಾ ವ್ಯವಸ್ಥೆ, ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಸೂಕ್ತ ಸೌಕರ್ಯ ಕಲ್ಪಿಸುವ ಕುರಿತು ಮಾಹಿತಿ ಪಡೆದುಕೊಂಡರು.
ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ, ಎಸ್​ಪಿ ಅಡ್ಡೂರು ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ಡಿವೈಎಸ್​ಪಿ ಶಂಕರಗೌಡ ಪಾಟೀಲ್​, ತಹಸೀಲ್ದಾರ್​ ನಾಗಯ್ಯ ಹಿರೇಮಠ, ತಾಪಂ ಇಒ ಮಹ್ಮದ್​ ಅಕ್ರಂ ಪಾಶಾ, ಪಿಎಸ್​ಐ ತಿರುಮಲೇಶ, ಪ್ರಮುಖರಾದ ಶರಣಗೌಡ ಬೆನಕನಳ್ಳಿ, ಪರ್ವತರೆಡ್ಡಿ, ಭೀಮರೆಡ್ಡಿ ಪಾಟೀಲ್​ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ್​, ಶರಣಗೌಡ ವಕೀಲ್​, ಮಲ್ಲಿಕಾರ್ಜುನ ಹಡಪದ, ಸಿದ್ದುಗೌಡ, ನರಸಿಂಗ್​ರಾವ, ಮಹಿಪಾಲರೆಡ್ಡಿ, ಸಿದ್ದುಗೌಡ ಬೆನಕನಳ್ಳಿ, ಬಾಷಾಮಿಯ್ಯ ಬಂಟ್ನಳ್ಳಿ ಇತರರಿದ್ದರು.
===