ಚಿತ್ರ ೨೨ ಕೆ.ಎಲ್.ಆರ್. ೦೩ : ಜಿಲ್ಲಾಧಿಕಾರಿ ಎಂ.ಆರ್.ರವಿ ರವರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿಯ ಸಭೆ. ಕೆ.ಜಿ.ಎಫ್. ಎಸ್.ಪಿ. ರಜಪೂತ್, ಕೋಲಾರ ಅಪರ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್ ಮುಂತಾದವರು ಇದ್ದರು.  
ರಾಜ್ಯ

ರಸ್ತೆ ಅಪಘಾತಗಳನ್ನು ತಡೆಯಲು ಹೆಚ್ಚು ಒತ್ತು ನೀಡಿ

ಮುನಿವೆಂಕಟೇ ಗೌಡ ಎನ್
ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಸುಗಮ ಸಂಚಾರ ವ್ಯವಸ್ಥೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ಅಧಿಕಾರಿಗಳು ರಸ್ತೆಯ ಸುರಕ್ಷತೆಯ ಕುರಿತು ಮಂಡಿಸಿದ ಐ-ರಾಡ್ ವರದಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ೨೦೨೩ ರಿಂದ ೨೦೨೫ರ ಅವಧಿಯಲ್ಲಿ ಒಟ್ಟು ೪,೧೭೩ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ೧,೨೭೨ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ರಾಷ್ಟಿçÃಯ ಹೆದ್ದಾರಿ ೭೫ರಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸಿವೆ. ಇದರಲ್ಲಿ ೨೦೪ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಇದರಲ್ಲಿ ೨ ಬ್ಲಾಕ್ ಸ್ಪಾಟ್‌ಗಳೆಂದು ಗುರ್ತಿಸಲಾಗಿದೆ. ಇಂತಹ ಜಾಗಗಳಲ್ಲಿ ಅಪಘಾತಗಳನ್ನು ತಡೆಯಲು ಸೂಕ್ತ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಸೂಚಿಸಿದರು.
ರಾಷ್ಟಿçÃಯ ಹೆದ್ದಾರಿ ೭೫ರ ಅರಾಭಿಕೊತ್ತನೂರು, ಚುಂಚದೇನಹಳ್ಳಿ, ಮಡೇರಹಳ್ಳಿ, ಕಾಳಹಸ್ತಿಪುರ, ಅಜ್ಜಪ್ಪನಹಳ್ಳಿ, ಕಾಂತರಾಜ್ ಸರ್ಕಲ್ ಮತ್ತು ಕಪ್ಪಲಮಡಗು ಈ ಸ್ಥಳಗಳಲ್ಲಿ ತಕ್ಷಣವೇ ಇಂಜಿನಿಯರಿAಗ್ ಸುಧಾರಣೆಗಳನ್ನು ಕೈಗೊಳ್ಳುವಂತೆ ಮತ್ತು ನಾಗಲಾಪುರ ಹಾಗೂ ಅರಾಭಿಕೊತ್ತನೂರು ಭಾಗಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕಾಮಗಾರಿಗಳನ್ನು ಪೂರ್ಣಗೊಳಿಸಿ :
ರಾಷ್ಟಿçÃಯ ಹೆದ್ದಾರಿ ೭೫ರಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಸಭೆಯಲ್ಲಿ ಕಾಲಮಿತಿ ನಿಗದಿಪಡಿಸಲಾಯಿತು. ಬೆಳ್ಳೂರು ಪ್ಲೆöÊಓವರ್ ಮತ್ತು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ವರ್ಷದಂತ್ಯದಲ್ಲಿ ಪೂರ್ಣಗೊಳ್ಳಬೇಕು. ನರಸಾಪುರ ಪ್ಲೆöÊಓವರ್ ಮತ್ತು ನಂಗಲಿ ಕ್ರಾಸ್ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿ ಜನವರಿ ೨೦೨೬ರ ಒಳಗೆ ಪೂರ್ಣಗೊಳ್ಳಬೇಕು. ವಡಗೂರು, ತಂಬಹಳ್ಳಿ, ನರಸಿಂಹತೀರ್ಥ ಮತ್ತು ವಡ್ಡಹಳ್ಳಿಯ ಕಾಮಗಾರಿಗಳು ಪೆಬ್ರವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಬೇಕು ಸೂಚಿಸಿದರು.
ಅಪಘಾತಕ್ಕೀಡಾದವರಿಗೆ ತಕ್ಷಣದ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ೨೦ ಸಂಖ್ಯೆಯ '೧೦೮' ಆಂಬ್ಯುಲೆನ್ಸ್ಗಳು ಹಾಗೂ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ೨೬ ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ. ಕರ್ನಾಟಕ ಸರ್ಕಾರದ ಅಪಘಾತ ಚಿಕಿತ್ಸಾ ಯೋಜನೆಯಡಿ, ರಾಷ್ಟ್ರೀಯ, ಬಿಪಿಎಲ್ ಮತ್ತು ಎಪಿಎಲ್ ತಾರತಮ್ಯವಿಲ್ಲದೆ ಪ್ರತಿ ಸಂತ್ರಸ್ತರಿಗೆ ಗರಿಷ್ಠ ೧ ಲಕ್ಷ ರೂಪಾಯಿ ಹಾಗೂ ಮೊದಲ ೪೮ ಗಂಟೆಗಳ ಕಾಲ ಉಚಿತ ಚಿಕಿತ್ಸೆ ನೀಡಲು ಅವಕಾಶವಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಬೆAಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೇನಲ್ಲಿ ವೇಗ ನಿಯಂತ್ರಣಕ್ಕಾಗಿ ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾರಿ ವಾಹನಗಳಾದ ಲಾರಿ ಟ್ರಕ್‌ಗಳು ತಮ್ಮ ನಿಗದಿತ ಸಮಯದಲ್ಲಿ ಸಂಚಾರ ನಡೆಸಬೇಕು. ನಿಯಮ ಉಲ್ಲಂಘಿಸಿದರೆ, ದಂಡ ವಿಧಿಸಲಾಗುವುದು. ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ದ್ವಿಚಕ್ರ ವಾಹನಗಳು ಓಡಾಡುತ್ತಿರುವುದು ಕಂಡುಬರುತ್ತಿದೆ. ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅನುಮೋದನೆ :
ಲೋಕೋಪಯೋಗಿ ಇಲಾಖೆ ೧೦೫೬ ಕಿ.ಮೀ ಉದ್ದದ ರಸ್ತೆಗಳಲ್ಲಿ ಮಾರ್ಕಿಂಗ್, ಬ್ಲಿಂಕರ್ಸ್ ಮತ್ತು ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸಲು ೨೧೦.೭೨ ಲಕ್ಷ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಲಾಯಿತು. ಶಾಲಾ ಮಕ್ಕಳು ಮತ್ತು ಆಟೋ ಅಥವಾ ಲಾರಿ ಚಾಲಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಯಿತು.
ಸಭೆಯಲ್ಲಿ ಕೆ.ಜಿ.ಎಫ್ ಪೊಲೀಸ್ ವರಿಷ್ಟಾಧಿಕಾರಿ ಹಿಮಾಂಷು ರಜಪೂತ್, ಕೋಲಾರ ಅಪರ ಪೊಲೀಸ್ ವರಿಷ್ಟಾಧಿಕಾರಿ ಜಗದೀಶ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಮೂರ್ತಿ, ಜಿಲ್ಲಾ ಸರ್ಜನ್ ಡಾ. ಜಗದೀಶ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ ರೆಡ್ಡಿ, ರಾಷ್ಟೀಯ ಹೆದ್ದಾರಿ ೭೫ ಹಾಗೂ ೬೯ರ ಪ್ರಾಧಿಕಾರದ ಅಧಿಕಾರಿಗಳು, ಕೆಶಿಪ್, ನಗರಸಭೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.