ಕಲಬುರಗಿ ಚಂದ್ರಶೇಖರ ಪಾಟೀಲ್​ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಸಂಗಮೇಶ, ರಾಹುಲ್​ ಕಾಂಬಳೆ, ಅಭಿಷೇಕ್​, ಸಂಜಯ್​ ಬಾಣದ್​, ರಾಜು ಚವ್ಹಾಣ್​, ಪ್ರವಿಣ್​ ಪುಣೆ, ಅಶೋಕ್​ ಇದ್ದರು. 
ರಾಜ್ಯ

ಕಾಮಗಾರಿ ಪ್ರಗತಿ ಡಿಸಿ ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಚಂದ್ರಶೇಖರ ಪಾಟೀಲ್​ ಕ್ರೀಡಾಂಗಣ
ಕಲಬುರಗಿ: ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರು ನಗರದ ಚಂದ್ರಶೇಖರ ಪಾಟೀಲ್​ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ ಲೋಕೋಪಯೋಗಿ ಮತ್ತು ಕೆಆರ್​ಐಡಿಎಲ್​ ಸಂಸ್ಥೆಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿ ಪರಿಶೀಲಿಸಿದರು.
ಕ್ರೀಡಾಂಗಣ ಆವರಣದಲ್ಲಿನ ವಿವಿಧ ಅಂಕಣಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಕೆಲಸಗಳಿಗೆ ಅವಕಾಶ ನೀಡಬಾರದು. ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂದು ಎಜೆನ್ಸಿಗಳಿಗೆ ಸೂಚಿಸಿದರು..
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ರಾಹುಲ್​ ಕಾಂಬಳೆ, ಕೆಆರ್​ಐಡಿಎಲ್​ ಇಲಾಖೆಯ ಅಭಿಷೇಕ್​, ಕ್ರೀಡಾ ಇಲಾಖೆಯ ತರಬೇತುದಾರರಾದ ಸಂಜಯ್​ ಬಾಣದ್​, ರಾಜು ಚವ್ಹಾಣ್​, ಪ್ರವಿಣ್​ ಪುಣೆ, ಅಶೋಕ್​ ಎಂ ಹಾಗೂ ಕ್ರೀಡಾಂಗಣದ ಸಿಬ್ಬಂದಿ ಇದ್ದರು.