ಎಸ್ಸೆಸ್ಸೆಲ್ಸಿಯಲ್ಲಿ ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಶುಕ್ರವಾರ ತಮ್ಮ ಕಚೇರಿಯಲ್ಲಿ ಸತ್ಕರಿಸಿದರು. ಡಿಡಿಪಿಐ ಶಂಕ್ರಮ್ಮ ಢವಳಗಿ ಇತರರಿದ್ದರು.
ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚಿನ ಅಂಕ ಪಡೆದ ಆರು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಶುಕ್ರವಾರ ತಮ್ಮ ಕಚೇರಿಯಲ್ಲಿ ಸತ್ಕರಿಸಿ, ಪ್ರೋತ್ಸಾಹಿಸಿದರು.
625ರ ಪೈಕಿ 623 ಅಂಕ ಪಡೆದು ಶೇ.99.68 ಅಂಕದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಲಬುರಗಿ ದಣ ವಲಯದ ಸಾವಳಗಿಯ ಅಜೀಮ್ ಪ್ರೇಮ್ಜಿ ಶಾಲೆಯ ವಿದ್ಯಾರ್ಥಿ ಗಣೇಶ, ತಲಾ 622 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿರುವ ಕಲಬುರಗಿ ಶರಣಬಸವೇಶ್ವರ ವಸತಿ ಶಾಲೆಯ ವಿದ್ಯಾರ್ಥಿನಿಯರಾ ಮಾಧವಿ, ಮೇನಾ ಮತ್ತು 620 ಅಂಕ ಪಡೆದು ತೃತೀಯ ಸ್ಥಾನ ಪಡೆದಿರುವ ಕಲಬುರಗಿಯ ಜಗತ್ ಪ್ರದೇಶದ ಎಸ್.ಸಿ&ಎಸ್.ಟಿ ಪ್ರತಿಭಾನಿತ್ವ ಶಾಲೆಯ ಭಾಗ್ಯಶ್ರೀ, ಎಸ್.ಆರ.ಎನ್.ಮೆಹತಾ ಶಾಲೆಯ ಓಂಕಾರ ಹಾಸು ಹಾಗೂ ಜೇವರ್ಗಿ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ನಿಸರ್ಗಾ ಅವರನ್ನು ಡಿಸಿ ವಿಶೇಷವಾಗಿ ಸತ್ಕರಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು.
ಡಿಡಿಪಿಐ ಶಂಕ್ರಮ್ಮ ಢವಳಗಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.