DC class for KGF Municipal Council staff and officers
ಕೆಜಿಎಫ್: ಸರ್ಕಾರಿ ನೌಕರರು, ಸಿಬ್ಬಂದಿಗೆ ಸರ್ಕಾರ ಸವಲತ್ತುಗಳನ್ನು ನೀಡುತ್ತಿದ್ದು, ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿದ್ದೇವೆ. ಸರ್ಕಾರದಿಂದ ಪಡೆದುಕೊಳ್ಳುವ ಸಂಬಳಕ್ಕೆ ಉತ್ತರದಾಯಿತ್ವ ಇರಬೇಕಾದುದು ನಿಮ್ಮ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರಸಭೆ ಆಡಳಿತಾಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಶಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸಮರ್ಪಕ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಎಲ್ಲ ನಗರಸಭೆ ಕಚೇರಿಗಳಲ್ಲಿ ಕಂದಾಯ ನಿರೀಕ್ಷಕರು, ಅಧಿಕಾರಿಗಳಿಗೆ ಕಂಪ್ಯೂಟರ್ ನೀಡಲಾಗಿದ್ದು, ಸಿಬ್ಬಂದಿ ಕಂಪ್ಯೂಟರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಸಿಬ್ಬಂದಿ ಒಬ್ಬ ಡೇಟಾ ಎಂಟ್ರಿ ಆಪರೇಟರ್ ನೆಚ್ಚಿಕೊಂಡು ಕುಳಿತಿದ್ದಾರೆ. ಯಾರೊಬ್ಬರೂ ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರ ಆಗಿಂದಾಗ್ಗೆ ಸುತ್ತೋಲೆ ಕಳುಹಿಸುತ್ತದೆ. ಇವರಿಗೆ ನಿಯತ್ತು ಬೇಡವೇ ಎಂದು ಪ್ರಶ್ನಿಸಿದರು.
ನಗರಸಭೆ ಕಚೇರಿಗೆ ಆಗಮಿಸುತ್ತಿದ್ದಂತೆ ಪೌರಾಯುಕ್ತ ಶ್ರೀಧರ್ ವಿರುದ್ಧ ಗರಂ ಆಗಿ ನಗರಸಭೆ ಆವರಣದಲ್ಲಿ ವಾಹನ ನಿಲ್ಲಿಸಲು ರ್ನಿದಿಷ್ಟ ಜಾಗ ಗುರುತಿಸಲು ಹೇಳಿದರು. ಖಾತೆ ಶಾಖೆಗೆ ತೆರಳಿ ಎಷ್ಟು ಜನ ಆರ್ಒಗಳು, ಆರ್ಐಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ?, ಲಾಗಿನ್ನಲ್ಲಿ ಎಷ್ಟು ಕಡತಗಳು ವಿಲೇವಾರಿ ಮಾಡಲಾಗಿದೆ?, ಎಷ್ಟು ಬಾಕಿ ಇದೆ? ಲೆಕ್ಕ ನೀಡಿ ಎನ್ನುತ್ತಿದ್ದಂತೆ ಕಂದಾಯ ಅಧಿಕಾರಿ ಜಯರಾಮ್ ತಡಬಡಾಯಿಸಿದ ಪ್ರಸಂಗ ನಡೆಯಿತು. ನಂತರ ಕಂಪ್ಯೂಟರ್ನಲ್ಲಿದೆ ಎಂದು ಹೇಳುತ್ತಿದ್ದಂತೆ ಜಿಲ್ಲಾಧಿಕಾರಿಗಳು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ಕೆಲಸ ಶೀಘ್ರ ಮಾಡಿಕೊಡಿ. ಇಲ್ಲವೇ ಹಿಂಬರಹ ನೀಡಿ ಕಳುಹಿಸಿ ಎಂದು ತಾಕೀತು ಮಾಡಿದರು. ಬಳಿಕ ರೆಕಾರ್ಡ್ ರೂಂನ ಒಳಗೆ ಸಾರ್ವಜನಿಕರು ಪ್ರವೇಶಿಸಲು ಇರುವ ಕೊಠಡಿ ಬಾಗಿಲು ಏಕೆ ಮುಚ್ಚಲಾಗಿದೆ? ಕೂಡಲೇ ತೆರೆಯಿರಿ ಎಂದು ಸೂಚಿಸಿದರು.
ತಕ್ಷಣದಿಂದಲೇ ಕಂಪ್ಯೂಟರ್ ಆಪರೇಟರ್ನನ್ನು ಆರ್ಐ ಮತ್ತು ಆರ್ಒ ಕೊಠಡಿಗೆ ಬದಲಾವಣೆ ಮಾಡಿ, ಖಾತೆ ಪಡೆಯಲು ಸಾರ್ವಜನಿಕರು ಕಚೇರಿಗೆ ಅಲೆದಾಡುವ ಅವಶ್ಯಯಿಲ್ಲ. ಸಿಟಿಜನ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ತಮ್ಮ ಸ್ವತ್ತುಗಳಿಗೆ ಅರ್ಜಿ ಸಲ್ಲಿಸಿದರೆ ರ್ನಿದಿಷ್ಟ ಸಮಯದೊಳಗೆ ಖಾತೆ ಮಾಡಿಕೊಡಲಾಗುವುದು. ಒಂದು ವೇಳೆ ತಕಾರರು ಇದ್ದರೆ ಮೊಬೈಲ್ ಮೂಲಕ ಮಾಹಿತಿ ಬರುತ್ತದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸಾರ್ವಜನಿಕರು ಪಯೋಗಪಡಿಸಿಕೊಳ್ಳಬೇಕು ಎಂದರು.
ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದೆ ಪಯಾರ್ಯ ವ್ಯವಸ್ಥೆ ಮಾಡಿಕೊಡಿ. ಜತೆಗೆ ುಡ್ಕೋರ್ಟ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಆರೋಗ್ಯ ನಿರೀಕ್ಷಕರಿಗೆ ತಿಳಿಸಿದರು. ನಗರಸಭೆ ಮುಂಭಾಗದ ಉದ್ಯಾನವನಕ್ಕೆ ಅನುದಾನ ನೀಡಲಾಗಿದ್ದರೂ, ಸರ್ಮಪಕ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದ್ದು, ಪಾರ್ಕ್ ಶುಚಿಗೊಳಿಸಲು ಕ್ರಮಕೈಗೊಳ್ಳಲು ಆದೇಶಿಸಲಾಗಿದೆ ಎಂದರು.