Vijayalakshmi  
ರಾಜ್ಯ

150ಕ್ಕೂ ಹೆಚ್ಚು ಸ್ಕ್ರೀನ್​​​ಶಾಟ್! ಅವಹೇಳನಕಾರಿ ಕಾಮೆಂಟ್ಸ್ ವಿರುದ್ಧ ದೂರು ಸಲ್ಲಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ.. Vijayalakshmi

ಬೆಂಗಳೂರು:  ನಟ ಸುದೀಪ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಕಿಚ್ಚನ ಮಾತಿಗೆ ಇತ್ತೀಚಿಗೆ ವಿಜಯಲಕ್ಷ್ಮೀ(Vijayalakshmi) ಪ್ರತಿಕ್ರಿಯೆ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ವಿಜಯಲಕ್ಷ್ಮೀಗೆ ಕೆಟ್ಟ ಕಮೆಂಟ್ಸ್ ಬರುತ್ತಿವೆ. ಈ ಹಿನ್ನಲೆಯಲ್ಲಿ ದೂರು ದಾಖಲಿಸಿದ್ದಾರೆ.
ನಟ ದರ್ಶನ್ ಪತ್ನಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ಸ್ ಮಾಡಿದವರ ವಿರುದ್ಧ ವಿಜಯಲಕ್ಷ್ಮೀ 150ಕ್ಕೂ ಹೆಚ್ಚು ಕಮೆಂಟ್​​ಗಳ ಸ್ಕ್ರೀನ್​​​ಶಾಟ್ ಸಮೇತ ದೂರು ನೀಡಲು ಬನಶಂಕರಿ ಠಾಣೆಗೆ ತೆರಳಿದ್ದ ವಿಜಯಲಕ್ಷ್ಮಿ ಅವರಿಗೆ ಸೈಬರ್ ಠಾಣೆಗೆ ಹೋಗಿ ದೂರು ನೀಡಲು ಬನಶಂಕರಿ ಪೊಲೀಸರು‌ ತಿಳಿಸಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದ ವಿಜಯಲಕ್ಷ್ಮಿ ಅವರು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ  ಅಜಯ್ ಹಿಲೋರಿಗಾಗಿ ಕಾಯುತ್ತಿರೋ ವಿಜಯಲಕ್ಷ್ಮಿ ಅವರು ಅವರಿಗೆ ದೂರು ನೀಡಲಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ( Kichcha Sudeepa ​) ಅಭಿನಯದ ಬಹುನಿರೀಕ್ಷಿತ ಮಾರ್ಕ್​ ಸಿನಿಮಾ ಇದೇ ಡಿಸೆಂಬರ್​ 25ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಮಾರ್ಕ್​ ಚಿತ್ರದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಡಿಸೆಂಬರ್​ 20ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾರ್ಕ್​ ಚಿತ್ರದ ಪ್ರೀರಿಲೀಸ್​ ಈವೆಂಟ್​ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅಭಿಮಾನ ಸಾಗರವೇ ಹರಿದುಬಂದಿತ್ತು. ಸಾವಿರಾರು ಸಂಖ್ಯೆ ಜನರು ಸೇರಿದ್ದರು. ಇಡೀ ಕಾರ್ಯಕ್ರಮದ ಕ್ರೇಂದ್ರ ಬಿಂದು ಯಾರೆಂದರೆ ಅದು ಅಭಿನಯ ಚಕ್ರವರ್ತಿ ಬಾದ್​ಷಾ ಕಿಚ್ಚ ಸುದೀಪ್​. ಕಿಚ್ಚನ ಮಾತು ಕೇಳಲೆಂದೇ ಭಾರಿ ಸಂಖ್ಯೆಯಲ್ಲಿ ಜನರ ಸೇರಿದ್ದರು. ಈ ವೇಳೆ ಬಹುದೊಡ್ಡ ವೇದಿಕೆಯಲ್ಲಿ ಕಿಚ್ಚ ಆಡಿದ ಒಂದು ಮಾತು ಸ್ಯಾಂಡಲ್​ವುಡ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲವನ್ನೇ ಸೃಷ್ಟಿ ಮಾಡಿದೆ.
ಕಿಚ್ಚ ಹೇಳಿದ್ದೇನು?
ಅಷ್ಟಕ್ಕೂ ಕಿಚ್ಚ ಹೇಳಿದ್ದೇನು ಎಂದು ನೋಡುವುದಾದರೆ, ನಾನು ಇಲ್ಲಿಯವರೆಗೂ ನಮ್ಮ ಅಭಿಮಾನಿಗಳಿಗೆ ಏನೂ ಮಾತನಾಡದೇ ಸುಮ್ಮನಿದ್ದೇನೆ. ನಾನು ಸುಮ್ಮನಿದ್ದ ಮಾತ್ರಕ್ಕೆ ನನ್ನಿಂದು ಏನು ಆಗಲ್ಲ ಅಂತಲ್ಲ. ತಾಳ್ಮೆಗೂ ಒಂದು ಮಿತಿ ಇದೆ. ಎಲ್ಲವನ್ನು ಸಹಿಸಿಕೊಂಡು ಇರಲಾಗದು. ಇದೇ ಡಿ.25ಕ್ಕೆ ಒಂದು ಸಿನಿಮಾ ಬರುತ್ತಿದೆ. ಇನ್ನೊಂದೆಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ. ಆ ಯುದ್ಧಕ್ಕೆ ನಾವು ರೆಡಿಯಾಗಿದ್ದೇವೆ. ಏಕೆಂದರೆ, ನಾವು ನಮ್ಮ ಮಾತಿಗೆ ಬದ್ದ ಎಂದು ಸುದೀಪ್​ ಹೇಳಿದರು. 
ದರ್ಶನ್​ ಅಭಿಮಾನಿಗಳ ಆಕ್ರೋಶ
ಅಂದಹಾಗೆ, ಇಲ್ಲಿ ಸುದೀಪ್​ ಅವರು ಯಾರ ಹೆಸರನ್ನು ಸಹ ಉಲ್ಲೇಖಿಸಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್​ ಅಭಿಮಾನಿಗಳು ಸುದೀಪ್​ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಸುದೀಪ್​ ಅವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ ಎಂದು ಭಾವಿಸಿರುವ ದರ್ಶನ್​ ಅಭಿಮಾನಿಗಳು ಸುದೀಪ್​ ವಿರುದ್ಧ ಹರಿಹಾಯ್ದಿದ್ದಾರೆ. ಸುದೀಪ್​ ಅವರ ತೇಜೋವಧೆ ಮಾಡುತ್ತಿದ್ದು, ಇನ್ನೂ ಬಿಡುಗಡೆಯಾಗದ ಮಾರ್ಕ್​ ಸಿನಿಮಾದ ಬಗ್ಗೆ ನೆಗೆಟಿವ್​ ಹರಡುತ್ತಿದ್ದಾರೆ. ಹಳೆಯ ವಿಚಾರಗಳನ್ನು ಕೆದುಕುತ್ತಾ ಸುದೀಪ್​ ಅವರ ಇಮೇಜ್​ಗೆ ಧಕ್ಕೆ ತರುವ ಕೆಲಸಕ್ಕೆ ದರ್ಶನ್​ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಇಳಿದಿದ್ದಾರೆ. ಇದರಿಂದ ದರ್ಶನ್​ ಹಾಗೂ ಸುದೀಪ್​ ಅಭಿಮಾನಿಗಳ ನಡುವೆ ಸ್ಟಾರ್​ ವಾರ್​ ಶುರುವಾಗಿದೆ.