ಬೆಂಗಳೂರಿನಲ್ಲಿ ಹಮ್ಮಿಕೊಂಡ ದಲಿತ ಜನಾಗ್ರಹ ಸಮಾವೇಶದ ಭಿತ್ತಿಪತ್ರವನ್ನು ಸುರಪುರ ಪತ್ರಿಕಾ ಭವನದಲ್ಲಿ ಸೋಮವಾರ ದಲಿತ ಸಂರ್ಷ ಸಮಿತಿ ಪದಾಧಿಕಾರಿಗಳು ಬಿಡುಗಡೆ ಮಾಡಿದರು. ಮಾಳಪ್ಪ ಕಿರದಳ್ಳಿ, ಶರಣಬಸಪ್ಪ ಪರಸನಹಳ್ಳಿ, ಪ್ರಕಾಶ ಮುಷ್ಠಳ್ಳಿ, ಡಾ.ಮಲ್ಲು ಮುಷ್ಠಳ್ಳಿ, ಮಲ್ಲಿಕಾರ್ಜುನ ಹಾದಿಮುನಿ, ಗೋಲಾಳಪ್ಪ ಕಟ್ಟಿಮನಿ, ನಿಂಗಪ್ಪ ಮೇಸಿ, ಕೆಂಚಪ್ಪ ಕಟ್ಟಿಮನಿ ಇತರರಿದ್ದರು. 
ರಾಜ್ಯ

ದಲಿತ ಜನಾಗ್ರಹ ಸಮಾವೇಶ 3ರಂದು

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಬ್ಯಾಕ್​ಲಾಗ್​ ನೇಮಕಾತಿಗೆ ಒತ್ತಾಯ
  • ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಜನ ಭಾಗಿ
ಸುರಪುರ: ದಲಿತ ಹಾಗೂ ಶೋಷಿತ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ವಿಷಯದಲ್ಲಿ ಸರ್ಕಾರದ ನಿರುತ್ಸಾಹ ಧೋರಣೆ ಖಂಡಿಸಿ, ಜು.3ರಂದು ಬೆಂಗಳೂರಿನ ಫ್ರೀಡಮ್​ ಪಾರ್ಕ್​ನಲ್ಲಿ ರಾಜ್ಯಮಟ್ಟದ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂರ್ಷ ಸಮಿತಿ (ಅಂಬೇಡ್ಕರ್​ ವಾದ) ಸಮಿತಿ ಮುಖಂಡರು ತಿಳಿಸಿದರು.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಜಾರಿಗೆ ತರಲಾದ ವಿಶೇಷ ಘಟಕ ಯೋಜನೆ (ಎಸ್​ಸಿಎಸ್​ಪಿ/ ಟಿಎಸ್​ಪಿ) ಹಣವನ್ನು ನಿಯಮಬಾಹಿರವಾಗಿ ಗ್ಯಾರಂಟಿ ಯೋಜನೆಗಳಿಗೆ ಹಾಗೂ ಇತರೆ ಇಲಾಖೆಗಳ ವೇತನಕ್ಕೆ ಬಳಸಿಕೊಳ್ಳುತ್ತಿರುವುದು ಕಾಯ್ದೆಯ ನೇರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಭೂಮಿ, ವಸತಿ, ಕಡ್ಡಾಯ ಶಿಕ್ಷಣ, ವಿಶೇಷ ಘಟಕ ಯೋಜನೆ ಏಕಗವಾ ನೀತಿ, ಸರಕಾರಿ ಉದ್ಯೋಗಗಳ ಬ್ಯಾಕ್​ಲಾಗ್​ ಹುದ್ದೆಗಳ ಭರ್ತಿಯಂತಹ ಪ್ರಮುಖ ಬೇಡಿಕೆಗಳು ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಈ ನಿರ್ಣಾಯಕ ಹೋರಾಟವನ್ನು ರೂಪಿಸಲಾಗಿದೆ. ಅನಿರ್ದಿಷ್ಟಾವಧಿಯ ಹೋರಾಟ ಯಶಸ್ವಿಗೊಳಿಸಲು ರಾಜ್ಯದ ವಿವಿಧ ಜಿಲ್ಲೆ-ತಾಲೂಕುಗಳಿಂದ ಸಂಘಟನೆಯ ಮುಖಂಡರು, ಪ್ರಗತಿಪರ ಚಿಂತಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಸಮಿತಿ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ, ಪ್ರಮುಖರಾದ ಶರಣಬಸಪ್ಪ ಪರಸನಹಳ್ಳಿ, ಪ್ರಕಾಶ ಮುಷ್ಠಳ್ಳಿ, ಡಾ.ಮಲ್ಲು ಮುಷ್ಠಳ್ಳಿ, ಮಲ್ಲಿಕಾರ್ಜುನ ಹಾದಿಮುನಿ, ಗೋಲಾಳಪ್ಪ ಕಟ್ಟಿಮನಿ, ನಿಂಗಪ್ಪ ಮೇಸಿ, ಕೆಂಚಪ್ಪ ಕಟ್ಟಿಮನಿ ವಾಗಣಗೇರಾ, ವಿಶ್ವನಾಥ ಹೊಸಮನಿ, ಶ್ರೀಹರಿ ತೇಲ್ಕರ್​, ರಾಜು ಭಂಡಾರಿ, ಹೊನ್ನಪ್ಪ ಗೌಂಡಿ ಇತರರಿದ್ದರು.