ಹಣ ದುರ್ಬಳಕೆ ಮಾಡಿಕೊಂಡು ಕ್ಷಮೆ ಕೇಳಿದ ಡೇರಿ ಕಾರ್ಯದರ್ಶಿ Dairy secretary
ಗೌರಿಬಿದನೂರು: ತೊಂಡೆಬಾವಿ ಡೇರಿ ಕಾರ್ಯದರ್ಶಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಖಚಿತವಾಗಿದ್ದು, ಬುಧವಾರದ ಸಭೆಯಲ್ಲಿ ಈ ಬಗ್ಗೆ ಗದ್ದಲ ಏರ್ಪಟ್ಟಿತ್ತು.Dairy secretary
ಸಂದ ಅಧ್ಯಕ್ಷರೂ ಆದ ಚಿಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ, ಹಾಲಿನ ಗುಣಮಟ್ಟದ ಬಗ್ಗೆ ಪರಿಶೀಲಿಸಿದಾಗ ತೊಂಡೆಬಾವಿ ಸಂದಲ್ಲಿ ಗುಣಮಟ್ಟ ಕಡಿಮೆ ಇರುವುದು ಹಾಗೂ ಸಂದ ಕಾರ್ಯದರ್ಶಿ ಚಂದ್ರಶೇಖರ್ 5 ತಿಂಗಳಿಂದ ಸ್ಥಳಿಯವಾಗಿ ಮಾರಾಟವಾದ 2,33,696 ರೂ. ಹಾಲಿನ ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದರು.
ಸಭೆಯಲ್ಲಿದ್ದ ಹಾಲು ಉತ್ಪಾದಕರು ಉತ್ಪಾದಕರ ಮಕ್ಕಳಿಗೆ ಪ್ರೋತ್ಸಾಹ ಧನ ವಿಚಾರದಲ್ಲಿ ಹಾಗೂ ಕಾರ್ಯದರ್ಶಿ ನೇಮಕದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಮುಖಂಡ ಯತೀಶ್ ಮಾತನಾಡಿ, ಹಣ ದುರುಪಯೋಗ ಮಾಡಿಕೊಂಡಿರುವರ ವಿರುದ್ಧ ಯಾವ ಕ್ರಮ ಜರುಗಿಸುತ್ತೀರಿ, ಇಷ್ಟಕ್ಕೇ ಬಿಡುತ್ತೀರಾ ಎಂದು ಪ್ರಶ್ನಿಸಿದರು.
ವ್ಯವಸ್ಥಾಪಕ ಡಾ.ಮಹೇಂದ್ರ ಮಾತನಾಡಿ, ಈ ಬಗ್ಗೆ ಪರಿಶೀಲಿಸಲಾಗಿದ್ದು, ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಇದರಲ್ಲಿ ಸಂದ ಯಾವುದೇ ನಿರ್ದೇಶಕರ ಹಸ್ತೇಪವಿಲ್ಲ. ವೈಯಕ್ತಿಕ ಕಾರಣಗಳಿಂದ ಹಣ ಬಳಕೆ ಮಾಡಿಕೊಂಡಿದ್ದೇನೆ. ಇದಕ್ಕೆ ನಾನೇ ಸಂಪೂರ್ಣ ಜವಾಬ್ದಾರನಾಗಿದ್ದೇನೆ. 15 ದಿನಗಳ ಒಳಗೆ ಹಣವನ್ನು ಸಂಕ್ಕೆ ಜಮೆ ಮಾಡುತ್ತೇನೆ ಎಂದು ಹೇಳಿ ಹಾಲು ಉತ್ಪಾದಕರು ಮತ್ತು ಸಂದ ನಿರ್ದೇಶಕರ ಬಳಿ ಕ್ಷಮೆ ಯಾಚಿಸಿದರು.
ಸಂಕ್ಕೆ ಹಾಲು ಹಾಕದಿರುವವರನ್ನು ನಿರ್ದೇಶಕರನ್ನಾಗಿ ಮಾಡಿರುವ ಬಗ್ಗೆ ಹಾಗೂ ಒಂದೇ ಕುಟುಂಬದವರನ್ನ ಸಂದ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿಕೊಂಡು ಬರುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಸಂದ ಅಧ್ಯಕ್ಷ ಜೆ.ಕಾಂತರಾಜು ಮತ್ತು ನಿರ್ದೇಶಕರು ಸಮಾಧಾನಪಡಿಸಿ ಸಮಜಾಯಿಷಿ ನೀಡಿದರು.
ಕಾರ್ಯದರ್ಶಿ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು 15ದಿನಗಳ ಒಳಗೆ ಸಂಕ್ಕೆ ಜಮಾ ಮಾಡುವುದು ಹಾಗೂ ಬಳಿಕ ಸಂದ ಕಾರ್ಯದರ್ಶಿಯನ್ನು ಬದಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.