ಬೆಂಗಳೂರು ಉತ್ತರ ತಾಲೂಕಿನ ದಾನಸಪುರ ಹೋಬಳಿಯ ಹುಚ್ಚನಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯಿಂದ ಕಾಮಧೇನು ಕಾರ್ಯಕ್ರಮದಡಿ ರೈತರಿಗೆ ಹಸುವನ್ನು ನೀಡಲಾಯಿತು. ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್​.ರವಿಕುಮಾರ್​, ಜಂಟಿ ಕಾರ್ಯದರ್ಶಿ ಸಿ.ಸೋಮಶೇಖರ್​, ಮಾಜಿ ಅಧ್ಯಕ್ಷ ಎನ್​.ಜಿ. ನಾಗರಾಜು, ನಿಯೋಜಿತ ಅಧ್ಯಕ್ಷ ಕೆ.ಎಸ್​. ಲೋಕೇಶ್​, ಎನ್​.ಜಿ. ಚಂದ್ರಕುಮಾರ್​ ಇದ್ದರು. 
ರಾಜ್ಯ

ಆರ್ಥಿಕ ಸಬಲಕ್ಕೆ ಹೈನುಗಾರಿಕೆ ಅವಶ್ಯ / NELAMANGAL

ನೆಲಮಂಗಲ : ರೈತರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಅತ್ಯಂತ ಮುಖ್ಯ ಭಾಗವಾಗಿದೆ ಎಂದು ರೋಟರಿ ಅಧ್ಯಕ್ಷ ಜಿ.ಆರ್​. ನಾಗರಾಜು ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕಿನ ದಾನಸಪುರ ಹೋಬಳಿಯ ಹುಚ್ಚನಪಾಳ್ಯ ಗ್ರಾಮದಲ್ಲಿ ರೋಟರಿ ಸಂಸ್ಥೆಯಿಂದ ಕಾಮಧೇನು ಕಾರ್ಯಕ್ರಮದಡಿ ಆಯೋಜಿಸಿದ್ದ ಹಸು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕಾಮಧೇನು ಯೋಜನೆಗೆ ಒತ್ತು ನೀಡಿ ಉಚಿತವಾಗಿ ರೋಟರಿ ಸಂಸ್ಥೆಯಿಂದ ಹಸುಗಳನ್ನು ವಿತರಿಸಿದ್ದೇವೆ. ಈ ಯೋಜನೆ ಮೂಲಕ ಪಡೆದ ಹಸುಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ತಮ್ಮ ಮಕ್ಕಳಿಗೆಉತ್ತಮ ವಿದ್ಯಾಭ್ಯಾಸ ಕೊಡಿಸಿ, ಉತ್ತಮ ಸ್ಥಾನಕ್ಕೇರುವಂತೆ ಬೆಳೆಸಬೇಕು ಎಂದರು.
ರೋಟರಿ ಕಾಮಧೇನು ಕಾರ್ಯಕ್ರಮದಡಿ ರೋಟರಿ ನೆಲಮಂಗಲ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸೋಮಶೇಖರ್​ ಅವರ ಸಹಕಾರದೊಂದಿಗೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿ ಸುನೀಲ್​ ಎಂಬುವರಿಗೆ ಹಸು ವಿತರಣೆ ಮಾಡಲಾಯಿತು. ಬಡ ರೈತನ್ನು ಗುರುತಿಸಿ ಹಸು ನೀಡಿದ್ದು, ಪ್ರಗತಿ ದಾರಿಯಾಗಿದೆ ಎಂದು ಹಸು ಪಡೆದ ರೈತ ಸುನೀಲ್​ಕುಮಾರ್​ ತಿಳಿಸಿದರು.
ರೋಟರಿ ಸಂಸ್ಥೆ ನಿರ್ದೇಶಕರಾದ ಶಿವಶಂಕರ್​ ಪ್ರಸಾದ್​, ಆರ್​.ನಾಗರಾಜು, ಶಿವರಾಮಯ್ಯ, ಸುಶೀಲ್​ ಕುಮಾರ್​, ರುದ್ರೇಗೌಡ, ಮುನಿರಾಜು ಇತರರು ಇದ್ದರು.