ಡೇರಿಯಲ್ಲಿ ಹಾಲು ಕದ್ದು ಸಿಕ್ಕಿಬಿದ್ದ ಸಿಬ್ಬಂದಿ Dairy
- ಕೋಮುಲ್ ತಂಡ ಪರಿಶೀಲನೆ ವೇಳೆ ಕಾರಮನಹಳ್ಳಿಯಲ್ಲಿ ಹೈಡ್ರಾಮ
ಬೂದಿಕೋಟೆ: ತಾಲೂಕಿನ ಕಾರಮನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪರಿಶೀಲನೆಗೆ ಮಂಗಳವಾರ ಡೇರಿಗೆ ಆಗಮಿಸಿದ್ದ ಕೋಮುಲ್ ಒಕ್ಕೂಟದ ಉಪ ವ್ಯವಸ್ಥಾಪಕ ಹಾಗೂ ವಿಸ್ತೀರ್ಣ ಅಧಿಕಾರಿಗಳ ಮುಂದೆಯೇ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಹೈಡ್ರಾಮವೇ ಸೃಷ್ಟಿಯಾಯಿತು.Dairy
ಇಲ್ಲಿನ ಸಿಬ್ಬಂದಿ ಡೇರಿಯಿಂದ ರಾತ್ರಿ ಹಾಲು ಕದ್ದು ಮರುದಿನ ಬೆಳಗ್ಗೆ ಅದೇ ಹಾಲನ್ನು ಅವರ ಹೆಸರಿನಲ್ಲಿ ಡೇರಿಗೆ ಹಾಕುತ್ತಾರೆ, ಇದೇ ರೀತಿ ಅನೇಕ ವರ್ಷಗಳಿಂದ ಅಕ್ರಮ ನಡೆದುಕೊಂಡು ಬರುತ್ತಿದ್ದರೂ ಇವರ ವಿರುದ್ಧ ಯಾವುದೇ ಕ್ರಮವಾಗುತ್ತಿಲ್ಲ ಎಂದು ಗ್ರಾಮಸ್ಥರು ಒಕ್ಕೂಟಕ್ಕೆ ದೂರು ನೀಡಿದ್ದರು. ದೂರು ಆಧರಿಸಿ ಸ್ಥಳಕ್ಕೆ ಬಂಧ ಅಧಿಕಾರಿಗಳ ಮುಂದೆ ಕೆಲ ಕಾಲ ವಾಗ್ವಾದ ನಡೆಯಿತು. ಆಗ ಗ್ರಾಮದ ಹಿರಿಯರು, ಒಕ್ಕೂಟದ ಅಧಿಕಾರಿಗಳು ಹಾಗೂ ಸಂದ ಅಧ್ಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ರೈತರಿಂದ 35 ಲೀ. ಹಾಲು ಖರೀದಿಸಿದರೆ ಡೇರಿಯಿಂದ ಒಕ್ಕೂಟಕ್ಕೆ ಹಾಕುವಾಗ 30 ಲೀ. ಲೆಕ್ಕ ತೋರಿಸುತ್ತಾರೆ. ಸುಮಾರು 8 ವರ್ಷದಿಂದ ಸಂಕ್ಕೆ ಹಾಲು ಪೂರೈಕೆ ಮಾಡುತ್ತಿದ್ದರೂ ಕಾರ್ಯದರ್ಶಿ ವೆಂಕಟೇಶ್ ನೂತನ ಶೇರುಗಳನ್ನು ಪಾವತಿಸಿಕೊಳ್ಳುತ್ತಿಲ್ಲ. ಕೇಳಿದರೆ ಸ್ಕೀಮ್ ಇನ್ನೂ ಬಂದಿಲ್ಲ ಬಂದ ತಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಹೊರತು ಸಂಕ್ಕೆ ಹಾಲು ಪೂರೈಕೆ ಮಾಡುವವರಿಗೆ ಶೇರು ಪಾವತಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಇದೆಲ್ಲದರಿಂದ ಬೇಸತ್ತ ಗ್ರಾಮಸ್ಥರು ಸೋಮವಾರ ರಾತ್ರಿ ಡೇರಿಯಿಂದ ಹಾಲು ಕದಿಯುವಾಗ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಲೋಕೇಶ್, ಬಂಗಾರಪೇಟೆ ಉಪ ವ್ಯವಸ್ಥಾಪಕ ಡಾ.ಗಿರೀಶ್ಗೌಡ, ವಿಸ್ತೀರ್ಣ ಅಧಿಕಾರಿ ಭಾನುಪ್ರಕಾಶ್, ಕಿರಣ್, ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ 15 ದಿನಗಳಲ್ಲಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಿ ತಪ್ಪು ಸಾಬೀತಾದರೆ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.