ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯ. ಲೇವಾದೇವಿಗಾರರು ಲಾಭಗಳಿಸುವ ಸಾಧ್ಯತೆ. ಸಾರ್ವಜನಿಕವಾಗಿ ಗೌರವ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 9
ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗುವುದು. ನಾಟ್ಯ ಕಲಾವಿದರಿಗೆ ಗೌರವ. ಭೂಮಿಯ ವ್ಯವಹಾರದಲ್ಲಿ ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ:2
ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗುವಿರಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಆಸ್ತಿ ವಿವಾದದಲ್ಲಿ ಜಯ. ಶುಭಸಂಖ್ಯೆ: 6
ಕಟಕ: ಗೃಹನಿರ್ವಣದಲ್ಲಿ ಮಂದಗತಿ ಇರಲಿದೆ. ಮಿತ್ರರಿಂದ ಸಾಲ ತೀರಿಸಲು ಸಹಕಾರ ಸಿಗುವುದು. ಮಕ್ಕಳಿಂದ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ:4
ಸಿಂಹ: ಬಂಧುಗಳೊಂದಿಗಿದ್ದ ಭಿನ್ನಾಭಿಪ್ರಾಯ ದೂರವಾಗುವುದು. ವಸ್ತ್ರ ವ್ಯಾಪಾರದಲ್ಲಿ ಆದಾಯ. ಲೇವಾದೇವಿ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:9
ಕನ್ಯಾ: ಕಾನೂನು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ. ಮಹಿಳಾ ಪ್ರತಿಭೆಗಳಿಗೆ ಯಶ. ಕೈಗಾರಿಕೋದ್ಯಮಿಗಳಿಗೆ ಲಾಭ. ಶುಭಸಂಖ್ಯೆ:7
ತುಲಾ: ಉದ್ಯೋಗಕಾಂಕ್ಷಿಗಳಿಗೆ ಶುಭದಿನ. ಪ್ರಮುಖ ನಿರ್ಧಾರಗಳಲ್ಲಿ ಎಡವಲಿದ್ದೀರಿ. ಆಮದು-ರಫ್ತು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಶುಭಸಂಖ್ಯೆ:1
ವೃಶ್ಚಿಕ: ಭತ್ತ ಮತ್ತು ಅಡಕೆ ಕೃಷಿಕರಿಗೆ ಲಾಭ ಸಿಗುವುದು. ಉದ್ಯೋಗ ಕ್ಷೇತ್ರದವರಿಗೆ ಶುಭ. ಬ್ಯಾಂಕಿನ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:6
ಧನಸ್ಸು: ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗಿ. ಉದ್ಯೋಗಸ್ಥ ಮಹಿಳೆಯರಿಗೆ ಯಶಸ್ಸು. ರಾಜಕಾರಣಿಗಳಿಗೆ ಸಾಮಾಜಿಕ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ: 7
ಮಕರ: ಸೇವಾ ಕಾರ್ಯದಿಂದ ಕೀರ್ತಿ ಗಳಿಸುವಿರಿ. ವಕೀಲರು ವೃತ್ತಿ ಕ್ಷೇತ್ರದಲ್ಲಿ ಹೆಸರು, ಗೌರವ ಸಂಪಾದಿಸುವಿರಿ. ಐಟಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:7
ಕುಂಭ: ಕಮಿಷನ್ ವ್ಯವಹಾರದಲ್ಲಿ ಲಾಭಗಳಿಸುವಿರಿ. ಮನರಂಜನಾ ಕಲಾವಿದರಿಗೆ ಬೇಡಿಕೆ. ಕೃಷಿ ಉತ್ಪನ್ನದಲ್ಲಿ ಆದಾಯ ಬರಲಿದೆ. ಶುಭಸಂಖ್ಯೆ:6
ಮೀನ: ವೈಜ್ಞಾನಿಕ ಸಂಶೋಧಕರಿಗೆ ಯಶ. ಸಿದ್ಧ ಉಡುಪು ಮಾರಾಟದಲ್ಲಿ ಸೂಕ್ತ ಫಲ. ಕೇಂದ್ರ ಸರ್ಕಾರಿ ನೌಕರರ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:4