ಮೇಷ: ಔತಣ ಕೂಟಕ್ಕೆ ಅಧಿಕ ಖರ್ಚು. ಕುಟುಂಬದಲ್ಲಿ ಒಗ್ಗಟ್ಟಿನ ನಿರ್ಧಾರ ತೆಗೆದುಕೊಳ್ಳುವಿರಿ. ನಂಬಿಕಸ್ತರಿಂದ ಆರ್ಥಿಕ ಲಾಭವಿದೆ. ಶುಭಸಂಖ್ಯೆ: 9
ವೃಷಭ: ಕೆಲಸದ ಒತ್ತಡ ಕಡಿಮೆಯಾಗಲಿದೆ. ಗೃಹ ನಿರ್ವಣದ ಕೆಲಸಗಳನ್ನು ಮುಗಿಸುವಿರಿ. ಸಮಾಜ ದಲ್ಲಿ ಗೌರವಕ್ಕೆ ಪಾತ್ರರಾಗುವಿರಿ. ಶುಭಸಂಖ್ಯೆ:2
ಮಿಥುನ: ತೆಗೆದುಕೊಳ್ಳುವ ನಿರ್ಧಾರದಲ್ಲಿ ಆತ್ಮವಿಶ್ವಾಸವಿರಲಿ. ಕಚೇರಿಯಲ್ಲಿ ದುಡುಕುತನ ಬೇಡ. ಸಾರ್ವಜನಿಕವಾಗಿ ಸಹನೆ ಅಪೇಕ್ಷಣೀಯ. ಶುಭಸಂಖ್ಯೆ: 4
ಕಟಕ: ಪೆಟ್ರೋಲ್ ಬಂಕ್ ಮಾಲೀಕರಿಗೆ ಲಾಭ. ಕಚೇರಿ ಕೆಲಸ ಪೂರ್ಣಗೊಳಿಸಿ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ. ಶುಭಸಂಖ್ಯೆ:3
ಸಿಂಹ: ಹೊಸ ಉದ್ಯೋಗದಲ್ಲಿ ಪ್ರಗತಿ. ಮಗಳ ವಿವಾಹದ ವಿಷಯದಲ್ಲಿ ದೃಢತೀರ್ವನ ಅಗತ್ಯ. ರಿಯಲ್ ಎಸ್ಟೇಟ್ನವರಿಗೆ ಆದಾಯ. ಶುಭಸಂಖ್ಯೆ:8
ಕನ್ಯಾ: ಒಳ್ಳೆಯತನದ ದುರುಪಯೋಗಕ್ಕೆ ಅವಕಾಶ ಕೊಡಬೇಡಿ. ಮಹಿಳೆಯರಲ್ಲಿ ವಿರಕ್ತ ಭಾವನೆ. ಸಿನಿಮಾ ನಟಿಯರಿಗೆ ಧನಾಗಮನ. ಶುಭಸಂಖ್ಯೆ: 5
ತುಲಾ: ತಂದೆಯ ಆರೋಗ್ಯದಲ್ಲಿ ಚೇತರಿಕೆ. ಮಹಿಳೆಯರು ವಿದೇಶ ಪ್ರವಾಸ ಕೈಗೊಳ್ಳುವಿರಿ. ಕೋರ್ಟ್ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 7
ವೃಶ್ಚಿಕ: ಕಲಾವಿದರಿಗೆ ಆತ್ಮಶಕ್ತಿಯ ಕೊರತೆ ಕಾಡುವುದು. ಕುಟುಂಬದಲ್ಲಿ ಸಾಮರಸ್ಯ. ಸಾಲ ತೀರಿಸಲು ಆತ್ಮೀಯರ ಸಕಾಲಿಕ ಸಹಕಾರ. ಶುಭಸಂಖ್ಯೆ: 2
ಧನಸ್ಸು: ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಯ. ಕೃಷಿ ಸಾಮಗ್ರಿ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 3
ಮಕರ: ಸೇವಾನಿರತರಿಗೆ ವಿಶೇಷ ಆದಾಯ, ಕೈಗೊಂಡ ನಿರ್ಧಾರಗಳಿಗೆ ಬದ್ಧರಾಗಿ ವ್ಯವಹರಿಸಿ. ಪೆಟ್ರೋಲ್ ಬಂಕ್ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ:1
ಕುಂಭ: ಆಸ್ತಿ ವಿಚಾರದಲ್ಲಿ ಸಹೋದರರ ಮನವೊಲಿಕೆಯಲ್ಲಿ ಸಫಲ. ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮ. ಶುಭಸಂಖ್ಯೆ: 4
ಮೀನ: ಭೂ ವ್ಯವಹಾರದಲ್ಲಿ ಪ್ರಗತಿ ಆಗಲಿದೆ. ಹೈನುಗಾರಿಕೆಯಲ್ಲಿ ಲಾಭ. ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಅನಿರೀಕ್ಷಿತ ಆದಾಯ. ಶುಭಸಂಖ್ಯೆ: 7